Movie News: ಗೆಳತಿಯ ಚಿನ್ನ ಕದ್ದು ಗೋವಾಗೆ ಎಸ್ಕೇಪ್ ಆಗಿದ್ದ ನಟಿಯನ್ನು ಪೊಲೀಸರು ಬಂಧಿಸಿದ್ದಾರೆ. ತೆಲುಗು ನಟಿ ಸ್ನೇಹಾ ಶೆಟ್ಟಿ ಬಂಧಿತ ಆರೋಪಿಯಾಗಿದ್ದು, ಈಕೆಯನ್ನು ವೈಜಾಗ್ ಪೊಲೀಸರು ಬಂಧಿಸಿದ್ದಾರೆ.
ಅಂಚೆ ಇಲಾಖೆ ನೌಕರ ಪ್ರಸಾದ್ ಬಾಬು ಎಂಬುವವರ ಮಗಳು ಮೌನಿಕಾ ಸ್ನೇಹಾಳ ಗೆಳತಿಯಾಗಿದ್ದಳು. ಅವರ ಮನೆಯಲ್ಲಿ ಚಿನ್ನ ಕದ್ದಿದ್ದ ಸ್ನೇಹಾ, ಸಿಕ್ಕಿಬಿದ್ದಿದ್ದು, ಆಕೆಯಿಂದ ಚಿನ್ನವನ್ನು ವಶಪಡಿಸಿಕೊಂಡ ಪೊಲೀಸರು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಹಲವು ದಿನಗಳಿಂದ ಮೌನಿಕಾ ಮನೆಯಲ್ಲಿ ಚಿನ್ನ ಕದಿಯಲು ಪ್ಲಾನ್ ಮಾಡಿದ್ದ ಸ್ನೇಹಾ, ಆಕೆಯ ಜೈವನ ಶೈಲಿ, ಮನೆಯಲ್ಲಿ ಯಾವ ವಸ್ತು ಎಲ್ಲಿ ಇರುತ್ತದೆ ಎಂಬ ಬಗ್ಗೆ ತಿಳಿದುಕೊಂಡಿದ್ದಳು. ಬಳಿಕ ಪದೇ ಪದೇ ಮನೆಗೆ ಹೋಗುತ್ತಿದ್ದ ಸ್ನೇಹಾ, ಸ್ವಲ್ಪ ಸ್ವಲ್ಪ ಚಿನ್ನ ಕದಿಯುತ್ತಿದ್ದಳು. ಆದರೆ ಈ ವಿಷಯ ಮೌನಿಕಾ ಮನೆಯವರಿಗೇ ಗೊತ್ತೇ ಆಗಲಿಲ್ಲ.
ಕೆಲ ದಿನಗಳ ಹಿಂದೆ ಮೌನಿಕಾ ತಂದೆ ತಾಯಿ ಬೇರೆ ಊರಿಗೆ ಮದುವೆಗೆ ಹೋಗಿದ್ದಾಗ, ಮನೆ ಬಂದಿದ್ದ ಸ್ನೇಹಾ, ಫೈನಲ್ ಆಗಿ ಪ್ಲಾನ್ ಮಾಡಿ, ಹೆಚ್ಚು ಚಿನ್ನ ಕದ್ದು, ಗೋವಾಗೆ ಪರಾರಿಯಾಗಿದ್ದಳು. ಮನೆಗೆ ಬಂದು ನೋಡಿದ ಪೋಷಕರಿಗೆ ಮನೆಯಲ್ಲಿ ಚಿನ್ನಗಳ್ಳತನವಾಗಿದೆ ಎಂದು ಗೊತ್ತಾಗಿತ್ತು. ಆಗ ಪೊಲೀಸರಿಗೆ ಕಂಪ್ಲೇಟ್ ಕೊಟ್ಟಿದ್ದಾರೆ. ಬಳಿಕ ಚುರುಕು ತನಿಖೆ ನಡೆಸಿದ ಪೊಲೀಸರು, ಸ್ನೇಹಾಳನ್ನು ಅರೆಸ್ಟ್ ಮಾಡಿದ್ದಾರೆ.
ರಾಜಕಾರಣದಲ್ಲಿ ಧರ್ಮ ಇರಬೇಕೇ ಹೊರತು, ಧರ್ಮದಲ್ಲಿ ರಾಜಕಾರಣ ಮಾಡಬಾರದು: ಡಿಸಿಎಂ ಡಿಕೆಶಿ