ಮತಾಂಧರಿಗೆ ಅಭಯ’ಹಸ್ತ’ ಇರುವವರೆಗೂ ಆಟಾಟೋಪಕ್ಕೆ ಕಡಿವಾಣ ಇಲ್ಲದಂತಾಗಿದೆ: ಪ್ರೀತಂಗೌಡ ಆಕ್ರೋಶ

Political News: ಬೆಂಗಳೂರಿನ ಅಂಗಡಿಯೊಂದರಲ್ಲಿ ಹನುಮಾನ್ ಚಾಲೀಸಾ ಹಾಕಿದ್ದಕ್ಕೆ,ಅಂಗಡಿಗೆ ನುಗ್ಗಿ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಿಜೆಪಿ ನಾಯಕ ಪ್ರೀತಂ ಗೌಡ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. 

ಕಾಂಗ್ರೆಸ್ ಆಡಳಿತದಲ್ಲಿ ಕರ್ನಾಟಕದ ಕಾನೂನು ಸುವ್ಯವಸ್ಥೆ ಹಳ್ಳಹಿಡಿದಿದೆ. ಮತಾಂಧರಿಗೆ ಅಭಯ’ಹಸ್ತ’ ಇರುವವರೆಗೂ ಅವರ ಆಟಾಟೋಪಕ್ಕೆ ಕಡಿವಾಣ ಇಲ್ಲದಂತಾಗಿದೆ.

ನಮ್ಮ ಬೆಂಗಳೂರಿನ ನಗರತ್ ಪೇಟೆ ಸಿದ್ದಣ್ಣ ಗಲ್ಲಿಯಲ್ಲಿ ಸಂಜೆ ಪೂಜೆಯ ಸಮಯದಲ್ಲಿ ಹನುಮಾನ್ ಚಾಲೀಸಾ ಹಾಕಿದ್ದ ಮೊಬೈಲ್ ಶಾಪ್ ಒಂದಕ್ಕೆ ನುಗ್ಗಿದ ಮತಾಂಧ ದುಷ್ಕರ್ಮಿಗಳು, ಮುಖೇಶ್ ಎಂಬ ಹಿಂದೂ ಯುವಕನಿಗೆ ಮನಸೋಇಚ್ಛೆ ಥಳಿಸಿದ್ದಾರೆ.

ಕಾಂಗ್ರೆಸ್ ಆಡಳಿತದಲ್ಲಿ ಹಿಂದೂಗಳು ಉಸಿರೆತ್ತುವ ಹಾಗಿಲ್ಲ ಎಂಬ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದೆ. ಸಿಎಂ ಸಿದ್ದರಾಮಯ್ಯ ಅವರೇ, ಇದೇನಾ ನಿಮ್ಮ ಸರ್ವಜನಾಂಗದ ಶಾಂತಿಯ ತೋಟ? ಎಂದು ಪ್ರೀತಂಗೌಡ ಪ್ರಶ್ನಿಸಿದ್ದಾರೆ.

ಮತ್ತೆ ರಷ್ಯಾ ಅಧ್ಯಕ್ಷರಾಗಿ ಆಯ್ಕೆಯಾದ ಪುಟಿನ್: ಇನ್ನು 6 ವರ್ಷ ವ್ಲಾದಿಮೀರ್ ಪಟ್ಟ ಗಟ್ಟಿ..

ಖ್ಯಾತ ಗಾಯಕಿ ಮಂಗ್ಲಿ ಕಾರು ಅಪಘಾತ

ಟ್ರೋಫಿ ಗೆದ್ದ WPL ಚಾಂಪಿಯನ್ಸ್‌ಗೆ ವಿಶ್ ಮಾಡಿದ ರಾಜಕೀಯ ಗಣ್ಯರು..

About The Author