- Advertisement -
Movie News: ಮಂತ್ರಾಲಯದಲ್ಲಿ ನಡೆದ ವರ್ಧಂತಿ ಮಹೋತ್ಸವದಲ್ಲಿ ನಟ ರಮೇಶ್ ಅರವಿಂದ್ ಭಾಗಿಯಾಗಿದ್ದು, ಮಂತ್ರಾಲಯದ ಪರಿಮಳ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಮಂತ್ರಾಲಯಕ್ಕೆ ಭೇಟಿ ನೀಡಿದ ರಮೇಶ್ ಅರವಿಂದ ರಾಯರ ದರ್ಶನ ಮಾಡಿ, ವಿಶೇಷ ಪೂಜೆ ಸಲ್ಲಿಸಿ, ಆಶೀರ್ವಾದ ಪಡೆದಿದ್ದಾರೆ. ಬಳಿಕ ಪತ್ನಿಯೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸುಬುದೇಂದ್ರ ಶ್ರೀಗಳಿಂದ ಗೌರವ ಸ್ವೀಕರಿಸಿದ್ದಾರೆ.
ಈ ಬಗ್ಗೆ ತಮ್ಮ ಇನ್‌ಸ್ಟಾ ಪೋಸ್ಟ್‌ನಲ್ಲಿ ವೀಡಿಯೋ ಶೇರ್ ಮಾಡಿಕೊಂಡಿರುವ ರಮೇಶ್ ಅರವಿಂದ್, ಧನ್ಯೋಸ್ಮಿ ಅಂತಾ ಬರೆದುಕೊಂಡಿದ್ದಾರೆ. ಇನ್ನು ಈ ಮೊದಲು ಪರಿಮಳ ಪ್ರಶಸ್ತಿ, ಡಾ.ರಾಜ್‌ಕುಮಾರ್, ಶಿವರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್, ದರ್ಶನ್, ರಜನಿಕಾಂತ್, ಸುಧಾಮೂರ್ತಿಗೆ ಪ್ರಶಸ್ತಿ ಸಿಕ್ಕಿದೆ..
- Advertisement -