Movie News: ಶಕ್ತಿಮಾನ್ ಎಂಬ ಪಾತ್ರದ ಮೂಲಕ ಗಮನ ಸೆಳೆದಿದ್ದ ಮುಖೇಶ್ ಖನ್ನಾ 90ರ ದಶಕದ ಎಲ್ಲ ಮಕ್ಕಳ ಅಚ್ಚುಮೆಚ್ಚಿನ ಕಲಾವಿದ. ಶಕ್ತಿಮಾನ್ನನ್ನು ಅಂದಿನ ಮಕ್ಕಳು ಓರ್ವ ಕಲಾವಿದ ಎಂದು ನೋಡಿರಲಿಲ್ಲ. ಬದಲಾಗಿ ಅವರೇ ಶಕ್ತಿಮಾನ್ ಎಂದು ಭಾವಿಸಿದ್ದರು. ಅಷ್ಟು ನೆಚ್ಚಿನವರಾಗಿದ್ದರು. ಇದೀಗ ಆ ಪಾತ್ರವನ್ನು ನಟ ರಣ್ವೀರ್ ಸಿಂಗ್ ಮಾಡಲಿ ಎಂದು ಹಲವರು ಬಯಸಿದ್ದರು. ಆದರೆ ಆ ಪಾತ್ರವನ್ನು ಮಾಡುವ ಬಗ್ಗೆ ಮುಖೇಶ್ ಖನ್ನಾ ಆಕ್ರೋಶ ಹೊರಹಾಕಿದ್ದಾರೆ.
ಸಿನಿಮಾ ರೂಪದಲ್ಲಿ ಶಕ್ತಿಮಾನ್ ಬರಲು ಸಜ್ಜಾಗಿದೆ. ಈ ಸಿನಿಮಾಗೆ ರಣ್ವೀರ್ ಸಿಂಗ್ ಬರಲಿ ಎಂಬುದು ಅವರ ಫ್ಯಾನ್ಸ್ ಮಾತಾಗಿತ್ತು. ಇನ್ನು ಕೆಲವರು ಮುಖೇಶ್ ಖನ್ನಾ ಅವರೇ ಈ ಪಾತ್ರ ಮಾಡುತ್ತಾರೆಂದು ಹೇಳಿದ್ದರು. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಖೇಶ್ ಖನ್ನಾ, ನಾವಿನ್ನೂ ಯಾರನ್ನೂ ಶಕ್ತಿಮಾನ್ ಪಾತ್ರಕ್ಕೆ ಆಯ್ಕೆಯೇ ಮಾಡಿಲ್ಲ. ರಣ್ವೀರ್ ಸಿಂಗ್ ಅವರನ್ನು ಈ ಪಾತ್ರಕ್ಕೆ ನಾವು ಆಯ್ಕೆ ಮಾಡಿಯೂ ಇಲ್ಲ ಎಂದು ಹೇಳಿದ್ದಾರೆ.
ಅಲ್ಲದೇ, ರಣ್ವೀರ್ ಸಿಂಗ್ ಎಂಥ ದೊಡ್ಡ ನಟರೇ ಆಗಿರಬಹುದು. ಆದರೆ ಅವರು ಬೆತ್ತಲಾಗಿ ಫೋಟೋ ಶೂಟ್ ಮಾಡಿಸಿದವರು. ಇಂಥ ಇಮೇಜ್ ಇರುವ ವ್ಯಕ್ತಿ ಶಕ್ತಿಮಾನ್ ಆಗಲಾರ. ಇದು ನಮ್ಮ ಸಂಸ್ಕೃತಿಯಲ್ಲ. ಈ ರೀತಿ ನಟರಿಗೆ ವಿದೇಶದಲ್ಲಿ ಅವಕಾಶವಿದೆ. ಅಲ್ಲಿ ಇದೆಲ್ಲ ನಡೆಯುತ್ತದೆ. ಶಕ್ತಿಮಾನ್ ಆಗಿ ನಟಿಸಲು ಅದರದ್ದೇ ಆದ ಘನತೆ ಇರಬೇಕು. ಅವನು ಬರೀ ನಟನಾಗಿರಬಾರದು. ಅವನೊಬ್ಬ ಶಿಕ್ಷಕನಾಗಬೇಕು ಎಂದು ಮುಖೇಶ್ ಖನ್ನಾ ಹೇಳಿದ್ದಾರೆ.
ಮತ್ತೆ ರಷ್ಯಾ ಅಧ್ಯಕ್ಷರಾಗಿ ಆಯ್ಕೆಯಾದ ಪುಟಿನ್: ಇನ್ನು 6 ವರ್ಷ ವ್ಲಾದಿಮೀರ್ ಪಟ್ಟ ಗಟ್ಟಿ..