International News: ಇತ್ತೀಚಿನ ದಿನದಲ್ಲಿ ಯಂಗ್ ಆಗಿ ಕಾಣೋದು ಒಂದು ಚಾಲೆಂಜ್ ಜೊತೆಗೆ ಶೋಕಿಯಾಗಿದೆ. ಕೊಂಚ ದಪ್ಪಗಿದ್ದವರು ಕೂಡ ತಾವು ಯಂಗ್ ಆಗಿ ಕಾಣಲು ನಾನಾ ಕಸರತ್ತು ಮಾಡುತ್ತಾರೆ. ಕೆಲವೇ ಕೆಲವರು ಯೋಗ, ವ್ಯಾಯಾಮ, ಡಯಟ್ ಮಾಡಿ ಸಣ್ಣ ಆಗ್ತಾರೆ. ಇನ್ನು ಕೆಲವರು ಸರ್ಜರಿಯ ಮೊರೆ ಹೋಗುತ್ತಾರೆ. ಇದೇ ರೀತಿ ಮಾಡೆಲ್ ಒಬ್ಬಳು ಸಣ್ಣ ಆಗಲು ಹೋಗಿ, ಬೊಜ್ಜು ಕರಗಿಸುವ ಶಸ್ತ್ರ ಚಿಕಿತ್ಸೆ ಮಾಡಿಕೊಂಡು ಪ್ರಾಣ ಕಳೆದುಕೊಂಡಿದ್ದಾಳೆ.
ಮೆಕ್ಸಿಕನ್ ಮಾಡೆಲ್ ,ಸೋಶಿಯಲ್ ಮೀಡಿಯಾದಲ್ಲೂ ಫೆಮಸ್ ಆಗಿದ್ದ ಎಲಿನಾ ಲರಿಯಾ 31ನೇ ವಯಸ್ಸಿಗೆ ಮೃತ ಪಟ್ಟಿದ್ದಾರೆ. ಈಕೆ ಬರೀ ಮಾಡೆಲ್ ಅಲ್ಲದೇ, ಪ್ರಾಣಿ ಹಕ್ಕುಗಳ ಕಾರ್ಯಕರ್ತೆಯೂ ಆಗಿದ್ದಳು. ದೇಹದಲ್ಲಿ ಇದ್ದ ಬೊಜ್ಜನ್ನು ಶಸ್ತ್ರ ಚಿಕಿತ್ಸೆ ಮೂಲಕ ತೆಗೆಯಲು ಹೋಗಿ, ದೇಹದಲ್ಲಿ ರಕ್ತ ಹೆಪ್ಪುಗಟ್ಟಿ, ಸಾವನ್ನಪ್ಪಿದ್ದಾಳೆ. ಆದರೆ ಈಕೆ ಅಷ್ಟೇನೂ ದಪ್ಪವಿರಲಿಲ್ಲ. ನ್ಯಾಚುರಲ್ ಡಯಟ್ ಮಾಡಿದ್ದರೆ, ತೂಕ ಕಳೆದುಕೊಳ್ಳುತ್ತಿದ್ದಳೆನೋ, ಆದರೆ ಶಸ್ತ್ರ ಚಿಕಿತ್ಸೆಯ ಮೊರೆ ಹೋಗಿ ಪ್ರಾಣ ಕಳೆದುಕೊಂಡಿದ್ದಾರೆ.
ಇನ್ನು ಎಲ್ನಾ 7 ವರ್ಷಗಳ ಹಿಂದೆ ಕುದುರೆಗಳಿಗಾಗಿ ಸ್ಥಳವೊಂದರಲ್ಲಿ, ಅಭಯಾರಣ್ಯ ಸ್ಥಾಪಿಸಿದ್ದರು. ಅಲ್ಲಿ ಅಂಗವಿಕಲ, ಕೈ ಕಾಲು ಮುರಿದ, ವಯಸ್ಸಾದ, ಸಾಕಲಸಾಧ್ಯವಾದ ಕುದುರೆಗಳನ್ನು ತಂದು ಬಿಟ್ಟರೆ, ಅಂಥ ಕುದುರೆಗಳನ್ನು ಎಲಿನಾ ಮತ್ತು ಅವರ ಸಿಬ್ಬಂದಿಗಳು ರಕ್ಷಿಸುತ್ತಿದ್ದರು. ಹೀಗಾಗಿ ಈಕೆಯ ಕಾರ್ಯ ಕಂಡು, ಈಕೆಯನ್ನು ಪ್ರಾಣಿ ಹಕ್ಕುಗಳ ಕಾರ್ಯಕರ್ತೆಯಾಗಿ ನೇಮಿಸಲಾಗಿತ್ತು.
ಮರಿತಿಬ್ಬೇಗೌಡ ಸೇರಿ ಬಿಜೆಪಿ, ಜೆಡಿಎಸ್‌ನ ಹಲವರು ಕಾಂಗ್ರೆಸ್‌ಗೆ ಸೇರ್ಪಡೆ
ಯಾವ ಮುಖ ಇಟ್ಟುಕೊಂಡು ನಾನೊಬ್ಬ ದಲಿತೋದ್ಧಾರಕ ಎನ್ನುತ್ತೀರಿ?: ಪ್ರಿಯಾಂಕ್ ವಿರುದ್ಧ ಪ್ರೀತಂ ವಾಗ್ದಾಳಿ
ಕೋಟ ಶ್ರೀನಿವಾಸ ಪೂಜಾರಿಗೆ 25 ಸಾವಿರ ರೂ. ಚುನಾವಣಾ ಠೇವಣಿ ನೀಡಿದ ಚುರುಮುರಿ ಅಂಗಡಿ ಮಾಲೀಕ




