ನಾಳೆ ಸಂಜೆಯೊಳಗೆ ಪಕ್ಷ ಒಳ್ಳೆಯ ನಿರ್ಧಾರ ಕೈಗೊಳ್ಳುತ್ತದೆ: ಮಾಜಿ ಸಿಎಂ ಕುಮಾರಸ್ವಾಮಿ

Political News: ಮಾಜಿ ಸಿಎಂ ಕುಮಾರಸ್ವಾಮಿ ಹೃದಯ ಶಸ್ತ್ರ ಚಿಕಿತ್ಸೆ ಪಡೆದ ಬಳಿಕ, ಟ್ವೀಟ್ ಮಾಡಿ, ಪ್ರಾರ್ಥಿಸಿದವರಿಗೆ ಧನ್ಯವಾದ ತಿಳಿಸಿದ್ದಾರೆ.

ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ 3ನೇ ಬಾರಿಗೆ ಯಶಸ್ವಿಯಾಗಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿ ಮನೆಗೆ ಮರಳಿದ ನನ್ನನ್ನು ಮಂಡ್ಯ ಸೇರಿ ರಾಜ್ಯದ ವಿವಿಧ ಜಿಲ್ಲೆಗಳ ಜನತಾದಳ ಕಾರ್ಯಕರ್ತರು, ಮುಖಂಡರು, ಅಭಿಮಾನಿಗಳು ಹಾಗೂ ಹಿತೈಷಿಗಳು ಭೇಟಿಯಾಗಿ ಶುಭ ಕೋರಿದರು. ಹೆಚ್ಚು ಹೊತ್ತು ಮಾತನಾಡಬಾರದು, ಆಯಾಸ ಮಾಡಿಕೊಳ್ಳಬಾರದು ಎಂಬ ವೈದ್ಯರ ಕಟ್ಟಪ್ಪಣೆಯನ್ನು ಸ್ವಲ್ಪ ಮಟ್ಟಿಗೆ ಮೀರಿ ನನ್ನವರ ಜತೆ ಮಾತನಾಡಿದೆ.

ನನ್ನ ಆರೋಗ್ಯಕ್ಕಾಗಿ ಪ್ರಾರ್ಥಿಸಿದ ಎಲ್ಲರಿಗೂ ಈ ಸಂದರ್ಭದಲ್ಲಿ ಧನ್ಯವಾದಗಳನ್ನು ಅರ್ಪಿಸಿದೆ. ಮಂಡ್ಯ ಲೋಕಸಭೆ ಕ್ಷೇತ್ರಕ್ಕೆ ನೀವೇ ಅಭ್ಯರ್ಥಿಯಾಗಬೇಕು ಎಂದು ಒತ್ತಾಯಿಸಿ ನನ್ನ ಮೇಲೆ ಎಣೆಯಿಲ್ಲದ ಪ್ರೀತಿ, ವಾತ್ಸಲ್ಯ ತೋರಿದ ನನ್ನ ಕಾರ್ಯಕರ್ತರನ್ನು ಸಮಾಧಾನಪಡಿಸಿದ್ದೇನೆ ಹಾಗೂ ನಾಳೆ ಸಂಜೆಯೊಳಗೆ ನಿಮಗೆ ನಿರಾಶೆ ಆಗದಂತಹ ಒಳ್ಳೆಯ ನಿರ್ಧಾರವನ್ನು ಪಕ್ಷ ಕೈಗೊಳ್ಳುತ್ತದೆ ಎಂದು ಭರವಸೆ ನೀಡಿದ್ದೇನೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

ಮೋದಿಯವರು ಪ್ರಧಾನಮಂತ್ರಿ ಆಗಲಿ ಎಂದು ಲಕ್ಷ್ಮೀನರಸಿಂಹ ಸ್ವಾಮಿಯಲ್ಲಿ ಕೇಳಿದ್ದೇನೆ: ಹೆಚ್.ಡಿ.ರೇವಣ್ಣ

ಹತ್ತು ವರ್ಷ ಮೋದಿ ಹೇಳಿದ ಸುಳ್ಳುಗಳಿವೆ. ಅದನ್ನು ಜನರಿಗೆ ತಿಳಿಸುತ್ತೇವೆ: ಸಚಿವ ಸಂತೋಷ್ ಲಾಡ್

ಇನ್ಮುಂದೆ ಈ ನಿರ್ದೇಶಕರನ್ನು ಭೇಟಿಯಾಗಬೇಕು ಅಂದ್ರೆ ಲಕ್ಷ ಲಕ್ಷ ಕೊಡಬೇಕಂತೆ..

About The Author