Wednesday, April 16, 2025

Latest Posts

ಇವರು ಯಾವುದಾದರೂ‌ ಸಂಘಟನೆಯಲ್ಲಿ ಹೋರಾಡಿರೋ ಐಡೆಂಟಿಟಿ‌ ಇದ್ಯಾ?: ಯತೀಂದ್ರ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

- Advertisement -

Political News: ಲೋಕಸಭಾ ಚುನಾವಣೆ ಹಿನ್ನೆಲೆ ಬೆಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ಬಿಜೆಪಿ, ಜೆಡಿಎಸ್ ಸಭೆ ನಡೆದಿದ್ದು, ಸಭೆಯ ವೇದಿಕೆ ಮೇಲೆ ರಾಜ್ಯ ಬಿಜೆಪಿ ಚುನಾವಣೆ ಉಸ್ತುವಾರಿ ರಾಧಾಮೊಹನ್ ದಾಸ್ ಅಗರವಾಲ್, ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ , ಮಾಜಿ ಸಿಎಂ ಕುಮಾರಸ್ವಾಮಿ , ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ‌, ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಆರ್ ಅಶೋಕ್, ಜೆಡಿಎಸ್ ಮಾಜಿ ಸಚಿವ ಜಿ.ಟಿ ದೇವೇಗೌಡ, ಮಾಜಿ ಸಚಿವ ಗೋವಿಂದ ಕಾರಜೋಳ ಭಾಗಿಯಾಗಿದ್ದರು.

ಇನ್ನು ಇದೇ ವೇಳೆ ಮಾತನಾಡಿದ ಬಿಜೆಪಿ ಮಾಜಿ ಶಾಸಕ ಸಿ.ಟಿ.ರವಿ, ಅಮಿತ್ ಶಾ ಗೂಂಡಾ ಎಂಬ ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ಸಿಟಿ ರವಿ‌ ಕೌಂಟರ್ ಕೊಟ್ಟಿದ್ದು, ಅಪ್ಪನ ಹೆಸರಲ್ಲಿ ರಾಜಕೀಯಕ್ಕೆ‌ ಬಂದ್ರೆ ಹೀಗೆ. ಕೇವಲ‌ ಅಪ್ಪ ಸಿಎಂ ಆದಾಗ ಅಧಿಕಾರದ‌ ಬಲದಿಂದ ಬರ್ತಾರೆ. ಅಧಿಕಾರ‌ ಇಲ್ಲದಾಗ‌ ಇವರೆಲ್ಲಾ‌ ಕಾಣೆಯಾಗ್ತಾರೆ. ನಮ್ಮನ್ನು ಸಾರ್ವಜನಿಕರಿಂದ ದೂ ರ‌ಇಡಲು ಸುಳ್ಳು ಕೇಸ್ ಹಾಕಿದ್ರು. ಅದೇ ರೀತಿ‌ ಅಮಿತ್ ಶಾ‌ ಮೇಲೂ ಸುಳ್ಳು‌ಕೇಸ್ ಹಾಕಿದ್ರು. ಯಾವುದಾದರೂ‌ ಸಂಘಟನೆಯಲ್ಲಿ ಹೋರಾಡಿರೋ ಐಡೆಂಟಿಟಿ‌ ಇದ್ಯಾ? ಎಂದು ಸಿ.ಟಿ.ರವಿ ಪ್ರಶ್ನಿಸಿದ್ದಾರೆ.

ಎರಡೂ ಪಕ್ಷ ಮೈತ್ರಿಯಾಗಿದೆ. ಪಕ್ಷಗಳ ನಡುವೆ ಸಮನ್ವಯತೆ ಕಾಯ್ದುಕೊಳ್ಳಲಾಗುವುದು. ಗೊಂದಲ‌ ಆಗದಂತೆ ಎರಡೂ ಪಕ್ಷದ ಮತಗಳನ್ನ ಕ್ರೂಡೀಕರಿಸೋದೇ ಇವತ್ತಿನ ಅಜೆಂಡಾ ಆಗಿದೆ ಎಂದು ಸಿ.ಟಿ. ರವಿ ಹೇಳಿದ್ದಾರೆ.

ಕಷ್ಟಕ್ಕೆ ಸ್ಪಂದಿಸುವ ಡಿ.ಕೆ.ಸುರೇಶ್ ಬೇಕೊ? ವೈಟ್ ಕಾಲರ್ ಡಾ.ಮಂಜುನಾಥ್ ಬೇಕೋ?ನೀವೇ ನಿರ್ಧರಿಸಿ ಎಂದ ಸಿಎಂ

ಮೇಡಂ ಟುಸ್ಸಾಡ್ಸ್‌ನಲ್ಲಿರುವ ತಮ್ಮ ಮೇಣದ ಪ್ರತಿಮೆ ಅನಾವರಣಗೊಳಿಸಿದ ನಟ ಅಲ್ಲು ಅರ್ಜುನ್

ನಾವೆಲ್ಲರೂ ಲಿಂಗಾಯತರು ನಮ್ಮನ್ನು ಬೆಳೆಸಿದ್ದು ಪ್ರಹ್ಲಾದ್ ಜೋಶಿ: ಶಾಸಕ ಎಂ.ಆರ್.ಪಾಟೀಲ್

- Advertisement -

Latest Posts

Don't Miss