ಸಂಸದೆ ಸುಮಲತಾ ಭೇಟಿ ಮಾಡಿ ಮನವೊಲಿಸುವ ಪ್ರಯತ್ನ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ

Political News: ಸಂಸದೆ ಸುಮಲತಾ ಅಂಬರೀಶ್, ತಾನು ಟಿಕೇಟ್ ಸಿಗದಿದ್ದಲ್ಲಿ, ಪಕ್ಷೇತರವಾಗಿ ಸ್ಪರ್ಧಿಸುತ್ತೇನೆ ಎಂದಿದ್ದರು. ಅಲ್ಲದೇ, ದೆಹಲಿಗೆ ಹೋಗಿ, ಗೃಹಮಂತ್ರಿ ಅಮಿತ್ ಶಾ ಅವರನ್ನು ಕೂಡ ಭೇಟಿಯಾಗಿದ್ದರು. ಆದರೆ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ರುವ ಕಾರಣ, ಮಂಡ್ಯವನ್ನು ಜೆಡಿಎಸ್‌ಗೆ ಬಿಟ್ಟುಕೊಡಲಾಗಿದೆ. ಅಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಸ್ಪರ್ಧಿಸಲಿದ್ದಾರೆ.

ಈ ಕಾರಣಕ್ಕೆ ಮಾಧ್ಯಮದವರ ಜೊತೆ ಮಾತನಾಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ನಮ್ಮ ಪಕ್ಷ ಸುಮಲತಾ ಅವರಿಗೆ ಈವರೆಗೂ ಗೌರವ ನೀಡಿತ್ತು. ಇನ್ನು ಮುಂದೆಯೂ ಅವರಿಗೆ ಪಕ್ಷದಲ್ಲಿ ಗೌರವ ಸಿಗಲಿದೆ. ಭಿನ್ನಾಭಿಪ್ರಾಯ ಬಿಟ್ಟು, ಚುನಾವಣೆ ಗೆಲ್ಲಲು ಜೆಡಿಎಸ್‌ಗೆ ಸಪೋರ್ಟ್ ಮಾಡುವಂತೆ ನಾನು ಭೇಟಿಯಾಗಿ ಕೇಳಿಕೊಳ್ಳುತ್ತೇನೆ ಎಂದಿದ್ದರು.

ಅದೇ ರೀತಿ ಇಂದು ಬಿ.ವೈ.ವಿಜಯೇಂದ್ರ, ಸಂಸದೆ ಸುಮಲತಾ ಅವರನ್ನು ಭೇಟಿಯಾಗಿ, ಮಾತುಕತೆ ನಡೆಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರ ಮಾತಿಗೆ ಬೆಲೆ ಕೊಟ್ಟು, ಸುಮಲತಾ ಜೆಡಿಎಸ್‌ಗೆ ಸಪೋರ್ಟ್ ಮಾಡ್ತಾರಾ ಅಂತಾ ಕಾದು ನೋಡಬೇಕಿದೆ.

ಕರ್ನಾಟಕದಲ್ಲಿ ಜೆಡಿಎಸ್ ಬಿಜೆಪಿ ಜೊತೆ ಹೋಗಿದ್ದು ಆತ್ಮಾಹುತಿ ತೀರ್ಮಾನ: ಕೆ.ರಾಜಣ್ಣ

ಬಿಜೆಪಿ- ಜೆಡಿಎಸ್ ಬೇರೆ ಅಲ್ಲ: ಬಿ.ಎಸ್.ಯಡಿಯೂರಪ್ಪ

ಬೀದರ್‌ನಲ್ಲಿ ಉತ್ತಮ ವಾತಾವರಣ ಇದೆ: 28 ಸೀಟ್ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಕಾಶಂಪೂರ್

About The Author