Tuesday, May 28, 2024

Latest Posts

ಬೀದರ್‌ನಲ್ಲಿ ಉತ್ತಮ ವಾತಾವರಣ ಇದೆ: 28 ಸೀಟ್ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಕಾಶಂಪೂರ್

- Advertisement -

Political News: ಬೆಂಗಳೂರಿನಲ್ಲಿ ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವ ಬಂಡೆಪ್ಪ ಕಾಶಂಪೂರ್, ಎನ್‌ಡಿಎ ಮೈತ್ರಿ ಆದ ಮೇಲೆ ಎಲ್ಲಾ ವರಿಷ್ಠರು ಸೇರಿ, ಮೋದಿ ಅವರಿಗೆ ಬಲ‌ ಕೊಡಲು 28ಕ್ಕೆ 28 ಕ್ಷೇತ್ರ ಗೆಲ್ಲುವ ಗುರಿ ಇದೆ. ಕಾರ್ಯಕರ್ತರು ಒಟ್ಟಾಗಲ್ಲ ಅಂತಾರೆ. ನೂರಕ್ಕೆ ನೂರರಷ್ಟು ಒಟ್ಟಾಗಿ ಕೆಲಸ ಮಾಡ್ತೀವಿ. 28ಕ್ಕೆ 28 ಕ್ಷೇತ್ರ ಗೆಲ್ತೀವಿ. ಬೀದರ್‌ನಲ್ಲಿ ಉತ್ತಮ ವಾತಾವರಣ ಇದೆ ಎಂದು ಬಂಡೆಪ್ಪ ಕಾಶಂಪೂರ್‌ ಹೇಳಿದ್ದಾರೆ.

ಮಂಜುನಾಥ್ ವೈಟ್ ಕಾಲರ್ ರಾಜಕಾರಣಿ ಎಂದ ಸಿಎಂ ಹಾಗೂ ಡಿಕೆಸು ಹೇಳಿಕೆ ವಿಚಾರದ ಬಗ್ಗೆ ಮಾತನಾಡಿರು ಮಾಜಿ ಸಚಿವ ಅಶ್ವತ್ಥ ನಾರಾಯಣ್ ಮಾತನಾಡಿದ್ದು,  ಜನ ಸೇವೆ ಅಂದ್ರೆ ಏನು ಅಂತ ಲೋಕಸಭೆ ಸದಸ್ಯ ಡಿಕೆಸು ಕೇಳಬೇಕು. ಇವತ್ತು ಇವರ್ಯಾರಾದ್ರೂ ಜನಸೇವೆ ಮಾಡಿರೋದು ಹೇಳ್ತಾರಾ. ವೈದ್ಯರಾಗಿ ಕೆಲಸ ಮಾಡಿದ್ದಾರೆ. ಜಾತ್ಯತೀತವಾಗಿ ಕೆಲಸ ಮಾಡಿದ್ದಾರೆ. ಎಲ್ಲರೂ ಒಪ್ಪಿರೋ ಅಪರೂಪದ ವ್ಯಕ್ತಿ ಮಂಜುನಾಥ್. ಸುರೇಶ್‌ಗೂ, ಮಂಜುನಾಥ್ ಅವರಿಗೂ ವ್ಯತ್ಯಾಸ ಇದೆ. ಮಂಜುನಾಥ್ ಅವರ ಬಗ್ಗೆ ಹೇಳಿಕೆ ಸಂಪೂರ್ಣ ಹತಾಶೆಯಾಗಿ ಹೇಳಿಕೆ ಕೊಟ್ಟಿದ್ದೀರಿ. ಇದಕ್ಕೆ ತಿರುಗೇಟು ಜನ ಕೊಡ್ತಾರೆ. ಎಲ್ಲರ ಆಶಿರ್ವಾದ ಮಂಜುನಾಥ್ ಪರ ಇದೆ. ಇಬ್ಬರ ನಡುವೆ ಅಜಗಜಾಂತರ ವ್ಯತ್ಯಾಸ ಇದೆ ಎಂದು ಅಶ್ವಥ್ ನಾರಾಯಣ್ ಹೇಳಿದ್ದಾರೆ.

ಕರ್ನಾಟಕದಲ್ಲಿ ಜೆಡಿಎಸ್ ಬಿಜೆಪಿ ಜೊತೆ ಹೋಗಿದ್ದು ಆತ್ಮಾಹುತಿ ತೀರ್ಮಾನ: ಕೆ.ರಾಜಣ್ಣ

ಬಿಜೆಪಿ- ಜೆಡಿಎಸ್ ಬೇರೆ ಅಲ್ಲ: ಬಿ.ಎಸ್.ಯಡಿಯೂರಪ್ಪ

ಜೆಡಿಎಸ್ ಎಲ್ಲಿದೆ ಅಂತಾ ತೋರಿಸೋ ಸಾಮರ್ಥ್ಯ ‌91 ವರ್ಷದ ದೇವೇಗೌಡರಲ್ಲಿದೆ: ಸಿದ್ದರಾಮಯ್ಯಗೆ ಹೆಚ್ಡಿಡಿ ಟಾಂಗ್‌

- Advertisement -

Latest Posts

Don't Miss