ನಾಮಪತ್ರ ಸಲ್ಲಿಸಲು ಅಕ್ಕಾವ್ರ ಸಹಕಾರ ಕೇಳಿದ್ದೇನೆ: ಸಂಸದೆ ಸುಮಲತಾ ಭೇಟಿ ನಂತರ ಕುಮಾರಸ್ವಾಮಿ ಹೇಳಿಕೆ

Political News: ಲೋಕಸಭೆ ಚುನಾವಣೆಗಾಗಿ ಕರ್ನಾಟಕದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡಿದ್ದು, ಬಿಜೆಪಿ ಮಂಡ್ಯ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿದೆ. ಮತ್ತು ಜೆಡಿಎಸ್‌ನಿಂದ ಮಂಡ್ಯ ಕ್ಷೇತ್ರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಈ ಕಾರಣಕ್ಕಾಗಿ ಇಂದು ಕುಮಾರಸ್ವಾಮಿ ಸಂಸದೆ ಸುಮಲತಾ ಅವರ ನಿವಾಸಕ್ಕೆ ತೆರಳಿ, ಈ ಬಗ್ಗೆ ಮಾತುಕತೆ ನಡೆಸಿದ್ದಾರೆ.

ಸುಮಲತಾ ಭೇಟಿ ಬಳಿಕ ಮಾಧ್ಯಮದವರ ಜೊತೆ ಮಾತನಾಡಿರವ ಕುಮಾರಸ್ವಾಮಿ, ನನಗೆ ಅಂಬರೀಷ್ ಅಣ್ಣಾವ್ರ ಮನೆ ಹೊಸತಲ್ಲ. ನಾವು ಹಲವಾರು ವರ್ಷಗಳು ಜೊತೆಗೂಡಿ ಬದುಕಿರುವಂಥವರು. ನಾನು ನಾಲಕ್ಕನೇಯ ತಾರೀಖಿನಂದು ಮಂಡ್ಯ ಲೋಕಸಭಾ ಚುನಾವಣೆಗೆ ನಾಮಪತ್ರವೇನು ಸಲ್ಲಿಸುತ್ತಿದ್ದೇನೆ. ಆ ಹಿನ್ನೆಲೆ, ಅಕ್ಕಾವ್ರ ಸಹಕಾರ ಕೇಳಿದ್ದೇನೆ. ಅದಕ್ಕಾಗಿ ಇವತ್ತು ಅವರ ಮನೆಗೆ ಬಂದಿದ್ದೆ ಎಂದಿದ್ದಾರೆ.

ಅಲ್ಲದೇ, ಅವರು ಹಲವಾರು ವಿಷಯಗಳನ್ನು ಚರ್ಚಿಸಿದ್ದಾರೆ. ಅವರ ಹಿತೈಷಿಗಳು ಮತ್ತು ಅಭಿಮಾನಿಗಳು ೇಸರಿ, ನಿನ್ನೆ ಪ್ರಾಥಮಿಕ ಹಂತದ ಸಭೆ ಮಾಡಿದ್ದಾರೆ. ನಿನ್ನೆ ದಿನ ಅವರು ಸಹ ಹೇಳಿದ್ದಾರೆ. ನಾನು ನನ್ನ ನಿರ್ಧಾರವನ್ನು ಮಂಡ್ಯಕ್ಕೆ ಮೂರನೇ ತಾರೀಖು ಭೇಟಿಕೊಟ್ಟು, ಅಲ್ಲಿ ಅವರ ಹಿತೈಷಿಗಳ ಸಮ್ಮುಖದಲ್ಲಿ, ಅವರ ನಿರ್ಧಾರವನ್ನು ಪ್ರಕಟ ಮಾಡುತ್ತೇನೆ ಎಂದು ನಿನ್ನೆ ಸುಮಲತಾ ಅವರು ನಿಮ್ಮ ಮುಂದೆ ಹೇಳಿದ್ದಾರೆ.

ನಾನು ಚುನಾವಣೆಗೆ ನಾಮಪತ್ರ ಸಲ್ಲಿಸುವಂಥದ್ದಿದೆ. ಅವರು ಸಹ ಬಿಜೆಪಿ ಜೊತೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದಾರೆ. ಕಳೆದ ಚುನಾವಣೆಯಲ್ಲೂ ಅವರು ಬಿಜೆಪಿ ಪಕ್ಷಕ್ಕೆ ಬೆಂಬಲ ಸೂಚಿಸಿದ್ದಾರೆ. ಅಲ್ಲದೇ ವಿಜಯೇಂದ್ರ ಮತ್ತು ಬಿಜೆಪಿ ಹೈಕಮಾಂಡ್ ಜೊತೆ ಸುಮಲತಾ ಅವರು ಮಾತನಾಡಿದ್ದಾರೆಂದು ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಜೋಶಿಯವರನ್ನ‌ ಸೋಲಿಸುವುದೇ ನಮ್ಮ ಗುರಿ. ಅವರನ್ನು ಎದುರಿಸಲು ನಾನೊಬ್ಬನೇ ಮಠಾಧೀಶ ಸಾಕು: ದಿಂಗಾಲೇಶ್ವರ ಶ್ರೀ

ಕರ್ಕಶ ಶಬ್ದ ಮಾಡುವ ಬೈಕ್ ಗಳಿಗೆ ಬಿಸಿ: ಸ್ಯಾಲೆನ್ಸರ್ ವಶಕ್ಕೆ ಪಡೆದ ಪೊಲೀಸರು

ಬೈಕ್‌ನಿಂದ ಆಯತಪ್ಪಿ ಬಿದ್ದು ಹೆಡ್‌ಕಾನ್ಸ್‌ಟೇಬಲ್ ಸಾವು

About The Author