Sumalatha : ಸುಮಲತಾಗೆ ದರ್ಶನ್ ,ಯಶ್ ಬೆಂಬಲ ಸಿಗುತ್ತಾ..?! : ಸುಮಲತಾ ನೀಡಿದ ಉತ್ತರವೇನು?

Political News : ಇತ್ತೀಚೆಗೆ ಮಂಡ್ಯದಲ್ಲಿ ಕಾರ್ಯಕರ್ತರ ಸಭೆ ನಡೆಸಿದ ಸುಮಲತಾ ಅಂಬರೀಷ್, ನಾನು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ಮತ್ತು ಬಿಜೆಪಿಗೆ ಸೇರ್ಪಡೆಯಾಗುತ್ತೇನೆ ಎಂದು ಹೇಳಿದ್ದರು. ಅದರಂತೆ ಇಂದು (ಏ.05) ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಸೇಪ್ಡೆಯಾಗಿದ್ದಾರೆ.

ಮಂಡ್ಯ ಜಿಲ್ಲೆಯ ಸಮಗ್ರ ಅಭಿವೃದ್ಧಿಯೇ ನನ್ನ ಮೂಲ ಮಂತ್ರವಾಗಿದೆ. ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ ಎಂಬ ಆಶಯದಿಂದ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದೇನೆ. ಮಂಡ್ಯದ ನನ್ನ ಅಭಿಮಾನಿಗಳು, ನಟ ದಿ.ಅಂಬರೀಶ್ ಅಭಿಮಾನಿಗಳು ಹಿತೈಷಿಗಳ ಹಾರೈಕೆ ಮತ್ತು ಆಶೀರ್ವಾದವಿರಲಿ ಎಂದು ಸುಮಲತಾ ಅಂಬರೀಶ್​ ಅವರು ಬಿಜೆಪಿ ಸೇರ್ಪಡೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಕಳೆದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಭರ್ಜರಿ ಗೆಲುವು ಸಾಧಿಸಿದ್ದರು. ಆಗ ಅವರ ಬೆಂಬಲಕ್ಕೆ ಅಂತ ನಿಂತುಕೊಂಡಿದ್ದು ಕನ್ನಡ ಚಿತ್ರರಂಗದ ಜೋಡೆತ್ತುಗಳು ಎಂದು ಕರೆಯುವ ಚಾಲೆಂಜಿಗ್​ ಸ್ಟಾರ್​ ದರ್ಶನ ಮತ್ತು ರಾಕಿಂಗ್​ ಸ್ಟಾರ್​​ ಯಶ್​. ಇದೀಗ ರಾಷ್ಟ್ರೀಯ ಪಕ್ಷ ಬಿಜೆಪಿಯನ್ನು ಸೇರ್ಪಡೆ ಬಳಿಕ ಅವರು ಪ್ರಚಾರಕ್ಕೆ ಬರುತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಸುಮಲತಾ, ‘ನಾನು ಚುನಾವಣಾ ಕಣದಲ್ಲಿ ಇಲ್ಲದಿರುವುದಕ್ಕೆ ಇದು ಅಪ್ರಸ್ತುತ. ದರ್ಶನ್ ಗೆ ಪಕ್ಷ ಮುಖ್ಯವಲ್ಲ. ನಮ್ಮ ಮನೆ ಮಗನಾಗಿ ಅವರು ಬರುತ್ತಾರೆ’ ಎಂಬುವುದಾಗಿ ಅವರು ಹೇಳಿದ್ದಾರೆ.

CT Ravi : ಶಾಸಕರನ್ನು ತೃಪ್ತಿ ಪಡಿಸಲು ಸೂಟ್​ಕೇಸ್ ಕೊಡ್ತಿದ್ದಾರೆ : ಸಿ.ಟಿ ರವಿ

DK Shivakumar : ‘ಎಷ್ಟು ದಿನ ರಾಜಕೀಯದಲ್ಲಿರುತ್ತೇನೋ ಗೊತ್ತಿಲ್ಲ’ : ಡಿಕೆಶಿ ಅಚ್ಚರಿ ಮಾತು..!

2024 ಲೋಕಸಭಾ ಚುನಾವಣೆ: ಪ್ರಣಾಳಿಕೆ ಬಿಡುಗಡೆ ಮಾಡಿದ ಕಾಂಗ್ರೆಸ್..

About The Author