Hubli News: ಹುಬ್ಬಳ್ಳಿ: ನನ್ನ ವಿರುದ್ದ ಪ್ರತಿ ಚುನಾವಣೆಯಲ್ಲಿ ಷಡ್ಯಂತ್ರ ನಡೆದಿದೆ. ಪ್ರತಿ ಸಾರಿ ಷಡ್ಯಂತ್ರ ಮೀರಿ ನನಗೆ ಜನ ಆಶೀರ್ವಾದ ಮಾಡಿದ್ದಾರೆ. ಈ ಬಾರಿಯೂ ಜನರು ನನಗೆ ಆಶೀರ್ವಾದ ಮಾಡ್ತಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪರೋಕ್ಷವಾಗಿ ದಿಂಗಾಲೇಶ್ವರ ಸ್ವಾಮೀಜಿಗಳಿಗೆ ಟಾಂಗ್ ಕೊಟ್ಟರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ಸಾರಿ ಚುನಾವಣೆಯಲ್ಲಿ ಷಡ್ಯಂತ್ರ ನಡೆದ್ರು, ಜನ ನನಗೆ ಆಶೀರ್ವಾದ ಮಾಡಿದ್ದಾರೆ. ಕಾಂಗ್ರೆಸ್ ಕಳೆದ ಬಾರಿ ನ್ಯಾಯ ಅಂತಾ ರಾಹುಲ್ ಗಾಂಧಿ ಘೋಷಣೆ ಮಾಡಿದ್ರು, ಘೋಷಣೆ ಮಾಡಿ ಇವರು ಯಾವತ್ತೂ ನ್ಯಾಯ ಕೊಟ್ಟಿಲ್ಲ ಎಂದು ದೂರಿದರು.
ಕಾಂಗ್ರೆಸ್’ನವರುಬ್ರಷ್ಟಾಚಾರ ಮಾಡಿದ್ರು, ಇವರು ಬಡವರಿಗೆ ಏನೂ ಕೊಟ್ಟಿಲ್ಲ. ಇವರೇನ ಮಾಡಿದ್ರು ಜನ ಇವರನ್ನು ನಂಬಲ್ಲ. ಅಧಿಕಾರಕ್ಕೆ ಬರಲ್ಲ ಅನ್ನೋ ಕಾರಣಕ್ಕೆ ಕಾಂಗ್ರೆಸ್ ತನ್ನ ಪ್ರಾಣಾಳಿಕೆಯಲ್ಲಿ ಬೇಕಾಬಿಟ್ಟಿಯಾಗಿ ಘೋಷಣೆ ಮಾಡ್ತೀದಾರೆ ಎಂದರು.
ಪುಲ್ವಾಮಾ ದಾಳಿ, ಅಕ್ಕಿ ಬಗ್ಗೆ ಮಾತಾಡಿದಾಗ ನನಗೆ ಕನಿಕರ ಉಂಟಾಗತ್ತೆ. ಪುಲ್ವಾಮಾ ದಾಳಿ ವೇಳೆ ಅಭಿನಂದನ್ ಸಿಕ್ಕಿ ಹಾಕಿಕೊಂಡಾಗ ಕಾಂಗ್ರೆಸ್ ಗೆ ಖುಷಿಯಾಗಿತ್ತು. ಅವರನ್ನು ಪಾಕಿಸ್ತಾನದವರು ಸಾಯಸ್ತಾರೆ.
ಅದನ್ನು ಮೋದಿ ತಲೆಗೆ ಕಟ್ಟೋಕೆ ಕಾಯತಿದ್ರು, ಆದ್ರೆ ಮೋದಿ ಅದಕ್ಕಿಂತ ಮುಂಚೆ ಹೋಗಿ ಎಚ್ಚರಿಕೆ ನೀಡಿದ್ರು. ಇದು ಕಾಂಗ್ರೆಸ್ ಗೆ ತಿಳಿಯಲ್ಲ ಎಂದು ಹರಿಹಾಯ್ದರು.
ಸಂತೋಷ ಲಾಡ್ ಅವರು ಮಂತ್ರಿಗಿರಿ ಉಳಿಯಲು ಏನೇನೋ ಮಾತಾಡ್ತಾರೆ. ಅವರು ಉತ್ಸಾಹದಲ್ಲಿ ಮಾತಾಡತೀದ್ದಾರೆ. ಅವರ ಮಂತ್ರಿಗಿರಿ ಉಳಿಲಿ ಎಂದು ಪ್ರಾರ್ಥನೆ ಮಾಡ್ತೀನಿ, ನೀವು ಸೋತರು ನಿಮ್ಮ ಮಂತ್ರಿಗಿರಿ ಉಳಿಯಲಿ ಎಂದು ಲಾಡ್ ಹೇಳಿಕೆಗಳಿಗೆ ಜೋಶಿ ಅಪಹಾಸ್ಯ ಮಾಡಿದರು.
ನನ್ನಪ್ರಚಾರಕ್ಕೆ ಕುಮಾರಸ್ವಾಮಿ ಬರ್ತಾರೆ. ಹೋದ ಕಡೆ ನಮಗೆ ಭರ್ಜರಿ ರೆಸ್ಪಾನ್ಸ್ ವ್ಯಕ್ತವಾಗಿದೆ
ಮೋದಿ ಪ್ರಧಾನಿ ಆಗಬೇಕೆಂದು ಜನ ತೀರ್ಮಾನ ಮಾಡಿದ್ದಾರೆ ಎಂದು ಪ್ರಲ್ಹಾದ್ ಜೋಶಿ ಹೇಳಿದರು.
ಸಾಕ್ಷಿಯ ವಿಚಾರಣೆಗೂ, ಆರೋಪಿಯ ವಿಚಾರಣೆಗೂ ವ್ಯತ್ಯಾಸ ತಿಳಿದಿಲ್ಲವೇ?: ಕಾಂಗ್ರೆಸ್ಸಿಗರಿಗೆ ಪ್ರೀತಂಗೌಡ ಪ್ರಶ್ನೆ..
ಕಾಂಗ್ರೆಸ್‌ನವರು ಉದರಿ ಭಾಗ್ಯಗಳ ಬಗ್ಗೆ ಪ್ರಚಾರ ಮಾಡಿದ್ರೆ ನಡೆಯುತ್ತಾ..?: ಲಾಡ್‌ಗೆ ಜೋಶಿ ತಿರುಗೇಟು..