Dharwad News: ಧಾರವಾಡ: ಧಾರವಾಡದಲ್ಲಿ ಮಳೆ ಗಾಳಿಗೆ ಚೆಕ್ ಪೋಸ್ಟ್ ಹಾರಿ ಹೋಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ದುರಂತ ಸಂಭವಿಸಿಲ್ಲ.
ಚೆಕ್‌ಪೋಸ್ಟ್‌ನಲ್ಲಿದ್ದ ಸಿಬ್ಬಂದಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸುಮಾರರು ಹೊತ್ತು ಗಾಳಿ ಬೀಸಿ, ಮಳೆ ಬಂದ ಪರಿಣಾಮ ಹೀಗಾಗಿದೆ. ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದ ಹೊರವಲಯದರುವ ಚೆಕ್ ಪೋಸ್ಟ್ ಹಾರಿಹೋಗಿದ್ದು, ಚೆಕ್ ಪೋಸ್ಟ ಗೆ ಹಾಕಿದ ತಗಡಿನ ಶೆಡ್ಡಗಳಿಗೆ ಹಾನಿಯುಂಟಾಗಿದೆ.
ಧಾರವಾಡ ಲೋಕಸಭಾ ಚುನಾವಣೆಗಾಗಿ ಮೊದಲ ದಿನ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ನಾಗಪ್ಪ ಕರೆಣ್ಣವರ ನಾಮಪತ್ರ ಸಲ್ಲಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಚುನಾವಣಾಧಿಕಾರಿ ದಿವ್ಯಪ್ರಭು ಅವರಿಗೆ ನಾಗಪ್ಪ ನಾಮಪತ್ರ ಸಲ್ಲಿಸಿದ್ದಾರೆ.

ಇಬ್ಬರು ಸೇರಿ ಪ್ರಚಾರವನ್ನು ನಿಲ್ಲಿಸಿಬಿಡೋಣ, ಯಾರು ಗೆಲ್ತಾರೆ ನೋಡೋಣ: ಜೋಶಿಗೆ ಲಾಡ್ ಸವಾಲ್
ಯಾರು ಏನೇ ತಿಪ್ಪರಲ್ಲಾಗ ಹೊಡೆದರೂ ಪ್ರಹ್ಲಾದ್ ಜೋಶಿ ಗೆಲ್ಲುತ್ತಾರೆ ಮೋದಿ ಪ್ರಧಾನಿಯಾಗುತ್ತಾರೆ: ಅರವಿಂದ್ ಬೆಲ್ಲದ್..
ಧಾರವಾಡ ಕ್ಷೇತ್ರದಲ್ಲಿ ನಾವು ಗೆದ್ದೇ ಗೆಲ್ತೀವಿ: ಶಾಸಕ ಮಹೇಶ್ ಟೆಂಗಿನಕಾಯಿ




