Political News: ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದ್ದು, ನೇಹಾ ಮರ್ಡರ್ ಕೇಸ್ ಸೇರಿ, ಗದಗಿನಲ್ಲಿ ಕೊಲೆಯ ಬಗ್ಗೆಯೂ ಜೋಶಿ, ಆಕ್ರೋಶ ಹೊರಹಾಕಿದ್ದಾರೆ.
ಕಾಂಗ್ರೆಸ್ ಅಧಿಕಾರದಲ್ಲಿ ಹಿಂದುಗಳಿಗೆಲ್ಲಿದೆ ಭದ್ರತೆ? ಗದಗಿನಲ್ಲಿ ಪಾಲಿಕೆ ಸದಸ್ಯರ ಕುಟುಂಬಸ್ಥರು ನಾಲ್ಕು ಜನ ಕೊಲೆಯಾಗಿದ್ದಾರೆ. ನ್ಯಾಯ ಒದಗಿಸುವ ಮಾತೇ ಇಲ್ಲ. ಕಾಂಗ್ರೆಸ್ ಕಾರ್ಪೋರೇಟರ್ ಅವರ ಪುತ್ರಿ ಹಾಡುಹಗಲೇ ಕಗ್ಗೊಲೆಯಾದಾಗ ಅದು ವೈಯಕ್ತಿಕ ವಿಚಾರಕ್ಕೆ ನಡೆದ ಅಚಾತುರ್ಯ ಎಂದು ಕಥೆ ಕಟ್ಟುವ ಸಿದ್ದು ಮತ್ತು ಪರಮೇಶ್ವರ್ ಅವರಿಗೆ ಕಿಂಚಿತ್ತಾದರೂ ಮಾನವೀಯತೆ ಇದೆಯಾ?? ನಾಚಿಕೆ, ಮಾನ, ಮರ್ಯಾದೆಯಂತೂ ಮೊದಲೇ ಇಲ್ಲ. ಇದು ಪೂರ್ವಯೋಜಿತ ಕೊಲೆ. ಕೊಲೆಗಾರನನ್ನು ಬಂಧಿಸಿ ನೇಹಾ ಮತ್ತವರ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವುದು ಬಿಟ್ಟು, ಆತನಿಗೆ ಬಿಗಿ ಭದ್ರತೆ ಒದಗಿಸುವ ಕಾಂಗ್ರೆಸ್ ತುಷ್ಟೀಕರಣ ಅಸಹ್ಯ ಹುಟ್ಟಿಸುವಂತಿದೆ. ಇದೇನಾ ನಿಮ್ಮ ಮೊಹಬ್ಬತ್ ಕೀ ದುಕಾನ್?? ನಾಚಿಕೆಗೇಡು ಕಾಂಗ್ರೆಸ್ ನೇಹಾಗೆ ನ್ಯಾಯ ಒದಗಿಸಿ ಎಂದು ಪ್ರಹ್ಲಾದ್ ಜೋಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೇಹಾ ತುಂಬಾ ಒಳ್ಳೆಯ ಹುಡುಗಿ : ಅವಳೇ ಮೊದಲು ಪ್ರಪೋಸ್ ಮಾಡಿದ್ದು: ಫಯಾಜ್ ತಾಯಿ ಮುಮ್ತಾಜ್
ನನ್ನ ಮಗಳ ಆತ್ಮಕ್ಕೆ ಶಾಂತಿ ಕೊಡಿಸುವ ಶಕ್ತಿ ಬೇರೆ ಯಾರ ಬಳಿ ಇಲ್ಲ, ನೀವೇ ಸಹಾಯ ಮಾಡಿ: ಜೋಶಿ ಬಳಿ ನೇಹಾ ತಂದೆ ಮನವಿ
ನೇಹಾ ಹ* ಕೇಸ್: ಫಯಾಜ್ ರುಂ*ಡ ಚೆಂಡಾಡಿದವರಿಗೆ 10 ಲಕ್ಷ ರೂ. ಬಹುಮಾನ ಘೋಷಣೆ