ಮತಗಟ್ಟೆಗೆ ಹೋಗಿ ಮತ ಚಲಾಯಿಸಿ ಬಂದ ಬಾಣಂತಿ, ಮಿಮಿಕ್ರಿ ಆರ್ಟಿಸ್ಟ್ ಇಂದುಶ್ರೀ..

Movie News: ಇಂದು ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ನಡೆಯುತ್ತಿದ್ದು, ಜನಸಾಮಾನ್ಯರು, ಗಣ್ಯರು, ಸಿನಿಮಾಾ ನಟ ನಟಿಯರು, ರಾಜಕೀಯ ವ್ಯಕ್ತಿಗಳೆಲ್ಲರೂ ಮತದಾನ ಮಾಡುತ್ತಿದ್ದಾರೆ. ಸೆಲೆಬ್ರಿಟಿ ಮಿಮಿಕ್ರಿ ಕಲೆಗಾರ್ತಿ ಇಂದುಶ್ರೀ ಕೂಡ ಇಂದು ಓಟ್‌ ಮಾಡಿದ್ದಾರೆ.

ಅರೆ ಅದರಲ್ಲೇನು ವಿಶೇಷ..? ಆಕೆಯಂತೆ ಹಲವರು ಓಟ್ ಮಾಡಿದ್ದಾರೆಂದು ನೀವು ಹೇಳಬಹುದು. ಆದರೆ ಇಂದುಶ್ರೀಗೆ ಕೆಲ ದಿನಗಳ ಹಿಂದಷ್ಟೇ ಹೆಣ್ಣು ಮಗುವಾಗಿದೆ. ಆಕೆ ಒಂದು ವಾರದ ಬಾಣಂತಿ. ಆದರೂ ಕೂಡ ಇಂದುಶ್ರೀ ಮತಗಟ್ಟೆಗೆ ಹೋಗಿ, ಮತ ಚಲಾಾಯಿಸಿ ಬಂದಿದ್ದಾರೆ.

ಈ ಬಗ್ಗೆ ಮಾತನಾಡಿರುವ ಇಂದುಶ್ರೀ, ನಾನು ಓಟ್ ಹಾಕಿ ಬಂದಿದ್ದೇನೆ. ನೀವು ಸಹ ಹೋಗಿ ಓಟ್ ಹಾಕಿ. ಓಟ್ ಹಾಕಿಲ್ಲಾ ಅಂದ್ರೆ ನಾಳೆ ದಿನ ಯಾರನ್ನೂ ಪ್ರಶ್ನಿಸುವ ಹಕ್ಕು ನಿಮಗಿರುವುದಿಲ್ಲ. ಯಾರು ಬಂದ್ರೆ ನಮಗೇನು ಎಂದು ಮನೆಯಲ್ಲೇ ಕೂರಬೇಡಿ. ದಯವಿಟ್ಟು ಓಟ್‌ ಮಾಡಿ ಎಂದು ಇಂದುಶ್ರೀ ಹೇಳಿದ್ದಾರೆ.

ಅಲ್ಲದೇ ನಿಮಗೆ ಆರೋಗ್ಯ ತೊಂದರೆ ಇದ್ದರೆ, ನಿಮಗೆ ಬೇಗ ಓಟ್ ಮಾಡುವ ಅವಕಾಶ ಕೊಡುತ್ತಾರೆ. ನಿಮಗೇನಾದ್ರೂ ಆರೋಗ್ಯ ಸಮಸ್ಯೆ ಇದ್ದರುನೂ , ನಿಮಗೂ ಕೂಡ ಬೇಗ ಮತ ಚಲಾಯಿಸಲು ಅವಕಾಶ ಕೊಡುತ್ತಾರೆ. ಹಾಗಾಗಿ ದಯವಿಟ್ಟು ತಪ್ಪದೇ ಮತದಾನ ಮಾಡಿ ಎಂದು ಇಂದುಶ್ರೀ ಮನವಿ ಮಾಡಿದ್ದಾರೆ.

ನನ್ನ ಮಗಳ ಸಾವಿಗೆ ಫಯಾಝ್ ಸಾವು ನ್ಯಾಯವಾಗಬೇಕು: ನಿರಂಜನಯ್ಯ ಆಗ್ರಹ..!

120 ದಿನದಲ್ಲಿ ನ್ಯಾಯ ಕೊಡಸ್ತಿವಿ, ನಿರಂಜನಯ್ಯ ಕುಟುಂಬದ ಜೊತೆಗಿದ್ದೇವೆ: ಸಿಎಂ ಸಿದ್ಧರಾಮಯ್ಯ

ನೇಹಾ ಮನೆಗೆ ಸಿಎಂ ಸಿದ್ಧರಾಮಯ್ಯ ಭೇಟಿ: ಕುಟುಂಬಸ್ಥರಿಗೆ ಸಾಂತ್ವನ

About The Author