Movie News: ಟಗರು ಪುಟ್ಟಿ ನಟಿ ಮಾನ್ವಿತಾ ಕಾಮತ್ ಮದುವೆ ಫಿಕ್ಸ್ ಆಗಿದ್ದು, ಮ್ಯೂಸಿಕ್ ಪ್ರೊಡ್ಯೂಸರ್ ಅರುಣ್‌ರನ್ನು ಮಾನ್ವಿತಾ ವಿವಾಹವಾಗಲಿದ್ದಾರೆ.
ಕೊಂಕಣಿ ಸಾಂಪ್ರದಾಯದಂತೆ ಮೇ 1 ರಂದು ಚಿಕ್ಕಮಗಳೂರಿನ ಕಳಸದಲ್ಲಿ ವಿವಾಹ ನಡೆಯಲಿದ್ದು, 500 ವರ್ಷದ ಹಳೆಯ ವೆಂಕಟರಮಣ ದೇವಸ್ಥಾನದಲ್ಲಿ ಮಾಂಗಲ್ಯ ಧಾರಣೆ ನಡೆಯಲಿದೆ. ಏಪ್ರಿಲ್ 29ರಂದು ಹಳದಿ ಶಾಸ್ತ್ರ ನಡೆಯಲಿದ್ದು, 30ರಂದು ಸಂಗೀತ ಕಾರ್ಯಕ್ರಮ ಮತ್ತು ಎಂಗೇಜ್‌ಮೆಂಟ್ ನಡೆಯಲಿದೆ.
ಇನ್ನು ಈ ಬಗ್ಗೆ ಮಾತನಾಡಿರುವ ಮಾನ್ವಿತಾ, ನಮ್ದು ಅರೇಂಜ್ಡ್ ಮ್ಯಾರೇಜ್. ಇನ್ನು 3 ತಿಂಗಳಲ್ಲಿ ಶುಭ ಮುಹೂರ್ತ ಇರ್ಲಿಲ್ಲ. ಕನ್ನಡ ಚಿತ್ರರಂಗದ ಕಲಾವಿದರಿಗೆ ಗೆಟ್ to ಗೆದರ್ ನೀಡೋ ಪ್ಲಾನ್ ಇದೆ. ಮದುವೆ ನಂತರವೂ ಸಿನಿಮಾಗಳನ್ನು ಮಾಡ್ತೀನಿ. ವೈಯಕ್ತಿಕ, ಪ್ರೊಫೆಷನಲ್ ಬೇರೆ ಮಿಕ್ಸ್ ಅಪ್ ಮಾಡಲ್ಲ ಎಂದಿದ್ದಾರೆ.
ಇನ್ನು ಮಧುಮಗ ಅರುಣ್ ಮೈಸೂರಿನಲ್ಲಿ ಇಂಜಿನಿಯರಿಂಗ್ ಮಾಡಿದ್ದು, ಮ್ಯೂಸಿಕ್ ಪ್ರೊಡ್ಯೂಸರ್ ಆಗಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ಮದುವೆ ನಂತರ ಅವರು ಸಿನಿಮಾ ಮಾಡೋಕೆ ನನ್ನ ಅನುಮತಿ ಇದೆ. ಸಿನಿಮಾರಂಗದಲ್ಲಿ ನನಗೆ ಇಂಟರೆಸ್ಟ್ ಯಿಲ್ಲ. ಕನ್ನಡ ಸಿನಿಮಾಗಳನ್ನು ನೋಡಿ ಬೆಳೆದಿದೀನಿ ಎಂದಿದ್ದಾರೆ.
ಕೆಲಸಕ್ಕೆ ರಿಸೈನ್ ಕೊಟ್ಟು, ಬಾಸ್ ಎದುರು ಢೋಲು ಬಾರಿಸಿ, ಡಾನ್ಸ್ ಮಾಡಿದ ಯುವಕ, ವೀಡಿಯೋ ವೈರಲ್
ಮತಗಟ್ಟೆಗೆ ಹೋಗಿ ಮತ ಚಲಾಯಿಸಿ ಬಂದ ಬಾಣಂತಿ, ಮಿಮಿಕ್ರಿ ಆರ್ಟಿಸ್ಟ್ ಇಂದುಶ್ರೀ..
ಮೋದಿ ಶೌಚಾಲಯ ಕಟ್ಟಿಸಿದ್ದಾರೆ. ಕಾಂಗ್ರೆಸ್‌ನವರು ಚೊಂಬು ಹಿಡ್ಕೊಂಡು ಓಡಾಡುತ್ತಿದ್ದಾರೆ: ಜೋಶಿ