Utthara Pradesh: ಮಕ್ಕಳ ಪರೀಕ್ಷೆ ಮುಗಿದು ವ್ಯಾಲ್ಯೂವೇಷನ್ ಶುರುವಾಗಿದೆ. ಹಲವು ಶಿಕ್ಷಕರಿಗೆ ಮಕ್ಕಳು ಉತ್ತರ ಪತ್ರಿಕೆಯಲ್ಲಿ ಬರೆದಿರುವ ಚಿತ್ರ ವಿಚಿತ್ರ ಉತ್ತರಗಳು ಓದುವ ಸೌಭಾಗ್ಯ ಒಂದೆಡೆಯಾದರೆ, ನನಗೆ ಪಾಸ್ ಮಾಡಿ ಅಂತಾ ತರಹೇವಾರಿ ರೀತಿಯಲ್ಲಿ ಗೋಗರೆಯ ವಿದ್ಯಾರ್ಥಿಗಳು ಇನ್ನೊಂದೆಡೆ ಇದ್ದಾರೆ. ಇನ್ನು ಕೆಲವರು ದುಡ್ಡನ್ನು ಉತ್ತರ ಪತ್ರಿಕೆಗೆ ಅಂಟಿಸಿ, ಈ ದುಡ್ಡನ್ನು ತೆಗೆದುಕೊಂಡು ನನ್ನನ್ನು ಪಾಸ್ ಮಾಡಿ ಎಂದವರಿದ್ದಾರೆ.
ಮೊನ್ನೆಯಷ್ಟೇ ಓರ್ವ ವಿದ್ಯಾರ್ಥಿ, ನೀವೇನಾದರೂ ನನ್ನನ್ನು ಪಾಸ್ ಮಾಡದಿದ್ದಲ್ಲಿ, ನನ್ನ ಅಜ್ಜನ ಬಳಿ ಹೇಳಿ ನಿಮ್ಮ ಮೇಲೆ ವಾಮಾಚಾರ ಮಾಡಿಸುತ್ತೇನೆ ಅಂತಾ ಬೆದರಿಕೆ ಬೇರೆ ಹಾಕಿದ್ದ. ಆದರೆ ಇಲ್ಲೊಂದು ಪತ್ರಿಕೆಯಲ್ಲಿ ವಿದ್ಯಾರ್ಥಿ ಉತ್ತರ ಬರೆಯುವುದನ್ನು ಬಿಟ್ಟು, ಜೈಶ್ರೀರಾಮ್ ಎಂದು ಬರೆದಿದ್ದಾನೆ. ಆ ಉತ್ತರ ಪತ್ರಿಕೆ ಯಾವವುದೇ ರಾಮಭಕ್ತ ಶಿಕ್ಷಕರ ಕೈಯಲ್ಲಿ ಸಿಕ್ಕಿರುವ ಹಾಗಿದೆ. ಅದಕ್ಕೆ ಅವರು ಅಂಕವನ್ನು ಸಹ ನೀಡಿದ್ದಾರೆ.
ಆದರೆ ಕೆಲಸದ ವಿಷಯದಲ್ಲಿ ಈ ರೀತಿ ಮಾಡಿದ್ದಕ್ಕಾಗಿ, ಅವರನ್ನು ಕೆಲಸದಿಂದ ಅಮಾನತು ಮಾಡಲಾಗಿದೆ. ಉತ್ತರಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ವಿದ್ಯಾರ್ಥಿ ಉತ್ತರದ ಬದಲು ಜೈ ಶ್ರೀರಾಮ್ ಮತ್ತು ಕ್ರಿಕೇಟಿಗನ ಹೆಸರು ಬರೆದಿದ್ದ ಎಎನ್ನಲಾಗಿದೆ. ಅದಕ್ಕೆ ಶಿಕ್ಷಕರು ಅಂಕ ನೀಡಿದ್ದು, ಶಿಕ್ಷಕ ಹಣ ಪಡೆದು ಅಂಕ ನೀಡಿದ್ದಾರೆಂದು ಆರೋಪಿಸಲಾಗಿದೆ. ಇದು ಸತ್ಯವೋ ಸುಳ್ಳೋ ಎಂದು ತನಿಖೆ ಬಳಿಕ ಗೊತ್ತಾಗಬೇಕಿದೆ.
ಸದ್ಯಕ್ಕೆ ಆ ಶಿಕ್ಷಕರನ್ನು ಕೆಲಸದಿಂದ ಅಾನತುಗೊಳಿಸಲಾಗಿದೆ. ಇಬ್ಬರು ಶಿಕ್ಷಕರನ್ನು ಅಮಾನತುಗೊಳಿಸಲಾಗಿದ್ದು, ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಕೇಂದ್ರ ಸರ್ಕಾರ ಒಲ್ಲದ ಮನಸ್ಸಿನಿಂದ ಕರ್ನಾಟಕಕ್ಕೆ ಬರ ಪರಿಹಾರ ನೀಡಿದೆ: ಸಿಎಂ ಸಿದ್ದರಾಮಯ್ಯ
ಕಾಂಗ್ರೆಸ್ ಅಭ್ಯರ್ಥಿ ಇ ತುಕಾರಂ ಪರ ಮತಯಾಚನೆ: ಪ್ರಧಾನಿ ಮೋದಿ ವಿರುದ್ಧ ಟೀಕಾಪ್ರಹಾರ




