ಸ್ಕಿಟ್ ಮಾಡುವ ವೇಳೆ 11 ವರ್ಷದ ಬಾಲಕನ ಕತ್ತು ಕು*ಯ್ದ ಕಾಳಿ ವೇಷಧಾರಿ

National News: ಶಾಲೆಯಲ್ಲಿ ನಡೆಯುವ ಸ್ಕಿಟ್‌ಗಳಲ್ಲಿ ಮಕ್ಕಳು ಸ್ಟೇಜ್‌ನಲ್ಲಿ ತಮಾಷೆ ಮಾಡುವುದನ್ನು, ಅಥವಾ ಡೈಲಾಗ್ ಮರೆತು ಪೇಚಾಡುತ್ತಿರುವುದನ್ನು ನೀವು ನೋಡಿರುತ್ತೀರಿ. ಆದರೆ ಪೌರಾಣಿಕ ನಾಟಕ ಮಾಡುವಾಗ, ಪ್ರಾಣವನ್ನೇ ತೆಗೆದ ಘಟನೆಯೊಂದು ಉತ್ತರಪ್ರದೇಶದಲ್ಲಿ ನಡೆದಿದೆ.

ಉತ್ತರಪ್ರದೇಶದ ಕಾನ್ಪುರದಲ್ಲಿ ಕಾಳಿ ವೇಷದ ಪಾತ್ರಧಾನಿ 11 ವರ್ಷದ ಬಾಲಕನ ಕತ್ತು ಕೊಯ್ದಿದ್ದಾರೆ. ಬಂಬಿಯಾನ್‌ಪುರ ಗ್ರಾಮದ ಸುಭಾಷ್ ಸೈನಿ ಎಂಬುವವರ ಮನೆಯಲ್ಲಿ ಭಾಗವತ್‌ ಕಥಾ ಆಯೋಜನೆ ಮಾಡಲಾಗಿತ್ತು. ಈ ವೇಳೆ ಕಾಳಿ ಪಾತ್ರಧಾರಿ ಬಾಲಕ, ರಾಕ್ಷನ ಕತ್ತು ಸೀಳುವ ಘಟನೆಯ ನಾಟಕ ಮಾಡಬೇಕಿತ್ತು. ಈ ವೇಳೆ ತ್ರಿಶೂಲ ಕೈಗೆತ್ತಿಕೊಳ್ಳಬೇಕಿತ್ತು. ಆದರೆ ಆತ ತ್ರಿಶೂಲ ಕೈಗೆತ್ತಿಗೊಳ್ಳುವ ಬದಲು, ಭರದಲ್ಲಿ ಚಾಕು ತೆಗೆದುಕೊಂಡು, ಬಾಲಕನ ಕತ್ತು ಸೀಳಿದ್ದಾನೆ.

ತಕ್ಷಣ ಆ ಬಾಲಕನನ್ನು ಆಸ್ಪತ್ರೆ ಸೇರಿಸಲಾಯಿತಾದರೂ, ಮಗುವಿನ ಪ್ರಾಣಪಕ್ಷಿ ಅದಾಗಲೇ ಹಾರಿಹೋಗಿತ್ತು. ಮಗುವಿನ ಮರಣೋತ್ತರ ಪರೀಕ್ಷೆ ನಡೆಸಿದ್ದು, ಆರೋಪಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ.

ನಾನು ಗೆದ್ದರೆ ರೈತರಿಗೆ ನೀರು ತರುವೆ: ರಾಜುಗೌಡ ಭರವಸೆ

ಪ್ರಜ್ವಲ್ ರೇವಣ್ಣ ದುಬೈ ಬಿಟ್ಟು ಇನ್ನು ಯಾವುದೇ ದೇಶದಲ್ಲಿದ್ದರೂ ಕರೆತರುತ್ತೇವೆ: ಸಿಎಂ ಸಿದ್ದರಾಮಯ್ಯ

ರಾಯ್ ಬರೇಲಿಯಲ್ಲಿ ರಾಮಪತ್ರ ಸಲ್ಲಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ

About The Author