Udupi News: ಕಳೆದ ವರ್ಷ ಉಡುಪಿಯಲ್ಲಿ ಶರತ್ ಶೆಟ್ಟಿ ಎಂಬುವವರ ಕೊಲೆ ಮಾಡಿ, ಯೊಗೀಶ್ ಆಚಾರ್ಯ ಎಂಬುವವ ಎಸ್ಕೇಪ್ ಆಗಿದ್ದ. ಹಾಗಾಗಿ ಶರತ್ ಕುಟುಂಬಸ್ಥರು ದೈವದ ಮೊರೆ ಹೋಗಿದ್ದರು. ಕೋಲದಲ್ಲಿ ಭಾಗವಹಿಸಿ, ಶರತ್‌ನನ್ನು ಕೊಂದವರು ಯಾರು..? ಅವರಿಗೆ ಶಿಕ್ಷೆ ನೀಡು ಎಂದು ಬೇಡಿಕೊಂಡಿದ್ದರು.
ಆಗ ದೈವ ಮಾತೊಂದನ್ನು ನುಡಿಯಿತು, ಅಪರಾಧಿ ತಾನಾಗಿಯೇ ಈ ದಿನ ಬಂದು ಶರಣಾಗುತ್ತಾನೆಂದು ಹೇಳಿತ್ತು. ಅಲ್ಲದೇ, ಈ ಸಾವಿಗೆ ನ್ಯಾಯ ದೊರಕಿಸಿ ಕೊಡುವುದಾಗಿ, ಅಭಯ ನೀಡಿತ್ತು. ಅದರಂತೆ, ಯೋಗೀಶ್ ಆಚಾರ್ಯ ತಾನಾಗಿಯೇ ಬಂದು, ತಪ್ಪೊಪ್ಪಿಕೊಂಡು ಶರಣಾಗಿದ್ದಾನೆ.
ಈ ಬಗ್ಗೆ ಮಾತನಾಡಿರುವ ಉಡುಪಿ ಜಿಲ್ಲಾ ಎಸ್ಪಿ ಡಾ.ಅರುಣಾ, ಅಧಿಕಾರಿಗಳ ಜೊತೆ ಸೇರಿ, ಉಳಿದಿರುವ ಆರೋಪಿಗಳನ್ನು ಪತ್ತೆ ಹಚ್ಚುವ ಕೆಲಸ ಮಾಡಲಾಗುತ್ತದೆ ಎಂದಿದ್ದಾರೆ
https://karnatakatv.net/penalty-for-non-renewal-of-driving-license-fc-and-insurance-for-school-vehicles/.