ಓಟಿಟಿಯಲ್ಲಿ ರವಿಕೆ ಪ್ರಸಂಗ ಸಿನಿಮಾಗೆ ಸಖತ್ ರೆಸ್ಪಾನ್ಸ್

ಕೆಲ ತಿಂಗಳ ಹಿಂದೆ ಸದ್ದು ಮಾಡಿದ್ದ ಸಿನಿಮಾ ಅಂದ್ರೆ ಅದು ರವಿಕೆ ಪ್ರಸಂಗ. ಬ್ರಹ್ಮಗಂಟು ಖ್ಯಾತಿಯ ಗೀತಾ ನಟಿಸಿರುವ ಈ ಸಿನಿಮಾ ಥಿಯೇಟರ್‌ನಲ್ಲಿ ಅಷ್ಟು ಸದ್ದು ಮಾಡಿರಲಿಲ್ಲ. ಆದರೆ ಇದೀಗ ಓಟಿಟಿಯಲ್ಲಿ ಹಲವು ಪ್ರೇಕ್ಷಕರನ್ನು ರೀಚ್ ಆಗಿ, ಸಖತ್ ರೆಸ್ಪಾನ್ ಪಡೆದುಕೊಳ್ಳುತ್ತಿದೆ.

ಓಟಿಟಿ ಪ್ಲ್ಯಾಟ್‌ಫಾರ್ಮ್‌ನಲ್ಲಿ ಸಿನಿಮಾ ಬರಲು ಶುರುವಾದಾಗಿನಿಂದ ಹಲವರು ಮನೆಯಲ್ಲೇ ಕೂತು ಸಿನಿಮಾ ನೋಡಿ ಎಂಜಾಯ್ ಮಾಡುತ್ತಿದ್ದಾರೆ. ಹಲವರಿಗೆ ಹೀಗೆ ಓಟಿಟಿಯಲ್ಲಿ ನೋಡಿದ ಸಿನಿಮಾವನ್ನು ನಾವು ಥಿಯೇಟರ್‌ಗೆ ಹೋಗಿ ನೋಡಬೇಕಿತ್ತು ಅಂತಾ ಅನ್ನಿಸಿಯೇ ಇರತ್ತೆ. ಅಂಥ ಸಿನಿಮಾಗಳಲ್ಲಿ ರವಿಕೆ ಪ್ರಸಂಗ ಕೂಡ ಒಂದು.

ಈ ಸಿನಿಮಾದಲ್ಲಿ ನಟಿ ಹೊಲಿಸುವ ರವಿಕೆ ಪರ್ಫೆಕ್ಟ್ ಆಗಿ ಇರುವುದೇ ಇಲ್ಲ. ದರ್ಜಿ ಪ್ರತೀ ಸಲವೂ ಒಂದಲ್ಲ ಒಂದು ತಪ್ಪು ಮಾಡುತ್ತಲೇ ಇರುತ್ತಾನೆ. ಕೊನೆಗೆ ಏನಾಗುತ್ತದೆ ಅನ್ನೋದು ನೀವು ಸಿನಿಮಾ ನೋಡಿ ತಿಳಿದುಕೊಳ್ಳಿ. ಈ ಸಿನಿಮಾದಲ್ಲಿ ಕಾಮಿಡಿ ಜೊತೆಗೆ ಉತ್ತಮ ಸಂದೇಶವೂ ಇದೆ.

‘ದೃಷ್ಟಿ ಮೀಡಿಯಾ’ ಪ್ರೊಡಕ್ಷನ್‌ನಡಿ ಚಿತ್ರ ನಿರ್ಮಾಣವಾಗಿದೆ. ಚಿತ್ರದ ರವಿಕೆ ಸಾಂಗ್ ಅನ್ನು ಚೈತ್ರಾ ಹಾಗೂ ಚೇತನ್ ನಾಯಕ್ ಹಾಡಿದ್ದಾರೆ. ಮನಸಲಿ ಜೋರು ಕಲರವ ಹಾಡನ್ನು ಮಾನಸ ಹೊಳ್ಳ, ಮತ್ತು ಹಸಿಮನಸಲಿ ಹಾಡನ್ನು ಜೋಗಿ ಸುನೀತಾ ಹಾಡಿದ್ದಾರೆ. ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವ ಗೀತಾ ಭಾರತಿ ಭಟ್ ಉತ್ತಮ ಅಭಿನಯದೊಂದಿಗೆ ಹಾಡಿಗೆ ಸಖತ್ ಸ್ಟೆಪ್ ಹಾಕಿ ಡ್ಯಾನ್ಸ್ ಮಾಡಿದ್ದಾರೆ.

Bigg boss OTT 3: ಸಲ್ಮಾನ್ ಖಾನ್ ಜಾಗಕ್ಕೆ ಬಂದ ನಟ ಅನಿಲ್ ಕಪೂರ್

Sandalwood News: ಸಂದೇಶ್‌ ಪ್ರೊಡಕ್ಷನ್ಸ್‌ ಜತೆ ಕೈ ಜೋಡಿಸಿದ ಕಿಚ್ಚ ಸುದೀಪ್

ಎಲ್ಲರೆದುರು ನಟಿಯನ್ನು ತಳ್ಳಿದ ನಟ ಬಾಲಯ್ಯ. ವೀಡಿಯೋ ವೈರಲ್

About The Author