Sandalwood News: ಸ್ಯಾಂಡಲ್ವುಡ್ನ ದೊಡ್ಮನೆಯಲ್ಲಿ ಮೊದಲ ಡಿವೋರ್ಸ್ ಪ್ರಕರಣದ ಸುದ್ದಿ ಕೇಳಿಬಂದಿದೆ. ನಟ ರಾಘವೇಂದ್ರ ರಾಜ್ಕುಮಾರ್ ಅವರ ಎರಡನೇ ಪುತ್ರ ಗುರು ರಾಜ್ಕುಮಾರ್ ಅಲಿಯಾಸ್ ಯುವ ರಾಜ್ಕುಮಾರ್ ಅವರು ತಮ್ಮ ಪತ್ನಿಗೆ ವಿಚ್ಛೇದನಕ್ಕಾಗಿ ಫ್ಯಾಮಿಲಿ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.
ಇದೇ ತಿಂಗಳ 6ನೇ ತಾರೀಖು ಯುವ ರಾಜ್ಕುಮಾರ್ ಅವರು ಪತ್ನಿ ಶ್ರೀದೇವಿ ಭೈರಪ್ಪ ಅವರಿಗೆ ವಿಚ್ಛೇದನ ಕೋರಿ ನ್ಯಾಯಾಲಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಎಂಸಿ ಆ್ಯಕ್ಟ್ ಸೆಕ್ಷನ್ 13(1) ಅಡಿಯಲ್ಲಿ ಅರ್ಜಿ ಸಲ್ಲಿಕೆಯಾಗಿದ್ದು, ಶ್ರೀದೇವಿ ಅವರಿಗೆ ಕೋರ್ಟ್ನಿಂದ ನೋಟಿಸ್ ಜಾರಿಗೊಳಿಸಲಾಗಿದೆ.
ಜುಲೈ ತಿಂಗಳ 4ನೇ ತಾರೀಖು ವಿಚಾರಣೆ ಹಾಕರಾಗುವಂತೆ ಕೋರ್ಟ್ ನೋಟಿಸ್ ನೀಡಿದೆ. ಪತ್ನಿ ವಿರುದ್ಧ ಕ್ರೌರ್ಯ ಹಾಗೂ ಅಗೌರವದಿಂದ ನೋಡಿಕೊಂಡ ಆರೋಪವನ್ನು ಯುವ ರಾಜ್ಕುಮಾರ್ ಮಾಡಿದ್ದಾರೆ. ಅಲ್ಲದೇ, ಮಾನಸಿಕ ಕಿರುಕುಳ ನೀಡಿದ್ದಾರೆ ಎಂದೂ ಕೂಡ ಯುವ ತಿಳಿಸಿದ್ದಾರೆ.
ಹಾಲು- ಜೇನಿನಂತಹ ದೊಡ್ಮನೆ ಕುಟುಂಬದಲ್ಲಿ ಇದೀಗ ವಿಚ್ಛೇದನ ಬಿರುಗಾಳಿ ಎದ್ದಿದೆ. ರಾಘವೇಂದ್ರ ರಾಜ್ಕುಮಾರ್ ಕುಮಾರ್ ಪುತ್ರ ಯುವ ರಾಜ್ಕುಮಾರ್ ತಮ್ಮ ಪತ್ನಿ ಶ್ರೀದೇವಿ ಭೈರಪ್ಪ ಅವರಿಗೆ ವಿಚ್ಛೇದನ ನೀಡಿದ್ದಾರೆ. ಇದು ನಿಜಕ್ಕೂ ರಾಜ್ ಫ್ಯಾಮಿಲಿ ಮತ್ತು ರಾಜ್ಯದ ಜನರಿಗೆ ಅಚ್ಚರಿ ಮೂಡಿಸಿದೆ.
2019ರಲ್ಲಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದ ಈ ಜೋಡಿ ಇದ್ದಕ್ಕಿದ್ದಂತೆ ಬೇರೆಯಾಗುತ್ತಿರುವುದು ಯಾಕೆ ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ. ಪತ್ನಿ ವಿರುದ್ಧ ಮಾನಸಿಕ ಕಿರುಕುಳ, ಕ್ರೌರ್ಯ ಹಾಗೂ ಅಗೌರವದಿಂದ ನೋಡಿಕೊಂಡ ಆರೋಪವನ್ನು ಯುವ ರಾಜ್ಕುಮಾರ್ ಮಾಡಿದ್ದಾರೆ. ನಿಜಕ್ಕೂ ಸಣ್ಣ-ಪುಟ್ಟ ಸಮಸ್ಯೆಯಾಗಿದ್ರೆ ರಾಜ್ ಫ್ಯಾಮಿಲಿಯೇ ಒಂದಾಗಿ ಸಮಸ್ಯೆಯನ್ನು ಬಗೆಹರಿಸಬಹುದಾಗಿತ್ತು ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.
ಕಳೆದ ತಿಂಗಳು 6ನೇ ತಾರೀಖು ಯುವರಾಜ್ಕುಮಾರ್ ಅವರು ಪತ್ನಿ ಶ್ರೀದೇವಿಗೆ ವಿಚ್ಛೇದನ ನೀಡಿದ್ದಾರೆ. ಎಂಸಿ ಆ್ಯಕ್ಟ್ ಸೆಕ್ಷನ್ 13(1) ಅಡಿಯಲ್ಲಿ ಡಿವೋರ್ಸ್ ಅರ್ಜಿ ಸಲ್ಲಿಕೆಯಾಗಿದ್ದು, ಶ್ರೀದೇವಿ ಅವರಿಗೆ ಕೋರ್ಟ್ನಿಂದ ನೋಟಿಸ್ ಜಾರಿಗೊಳಿಸಲಾಗಿದೆ. ಜುಲೈ 4ರಂದು ಕೌಟುಂಬಿಕ ನ್ಯಾಯಾಲಯಕ್ಕೆ ಹಾಜರಾಗುವಂತೆ ಶ್ರೀದೇವಿಗೆ ಕೋರ್ಟ್ ನೋಟಿಸ್ ನೀಡಿದೆ.
ದೆಹಲಿಯಲ್ಲಿ ಇಬ್ಬರು ಮೊದಲ ಬಾರಿಗೆ ಪರಸ್ಪರ ಭೇಟಿಯಾಗಿದ್ದರು. ನಾಲ್ಕು ವರ್ಷಗಳ ಹಿಂದೆ ಈ ಸುಂದರ ಜೋಡಿ ಸಪ್ತಪದಿ ತುಳಿದಿತ್ತು. ದೊಡ್ಮೆನಯ ಮದುವೆಗೆ ಸಿನಿಮಾ ಸ್ಟಾರ್ಗಳು ಸೇರಿದಂತೆ ರಾಜಕಾರಣಿಗಳು ಸಾಕ್ಷಿಯಾಗಿದ್ದರು. ಆದರೀಗ, ನಾಲ್ಕೇ ವರ್ಷಕ್ಕೆ ಯುವ ಸಂಸಾರದಲ್ಲಿ ಮನಸ್ತಾನ ಉಂಟಾಗಿರುವುದು ರಾಜ್ ಫ್ಯಾಮಿಲಿಗೆ ಬೇಸರ ತರಿಸಿದೆ.
ಮದುವೆಯ ಬಳಿಕ ಬೆಂಗಳೂರಿನ ಚಂದ್ರಲೇಔಟ್ನಲ್ಲಿರುವ ರಾಜ್ಕುಮಾರ್ ಅಕಾಡೆಮಿಯನ್ನು ಶ್ರೀದೇವಿ ನಡೆಸಿಕೊಂಡು ಹೋಗುತ್ತಿದ್ದರು. ಈಗ ತಾನೇ ಸ್ಯಾಂಡಲ್ವುಡ್ನಲ್ಲಿ ಗುರುತಿಸಿಕೊಳ್ಳುತ್ತಿರುವ ಯುವ ರಾಜ್ಕುಮಾರ್ಗೆ ವಿಚ್ಛೇದನ ದೊಡ್ಡ ಶಾಕ್ ನೀಡಿದೆ. ಇದು ನಿಜಕ್ಕೂ ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.
ಮೋದಿ ಪ್ರಮಾಣವಚನ: ಧಾರವಾಡ ಶ್ರೀ ರಾಮ ಮಂದಿರದಲ್ಲಿ ವಿಶೇಷ ಪೂಜೆ ಹಾಗೂ ಸಂಭ್ರಮ
ನರೇಂದ್ರ ದಾಮೋದರ್ ದಾಸ್ ಮೋದಿಯಾದ ನಾನು.. : ಸತತ 3ನೇ ಬಾರಿಗೆ ಮೋದಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕಾರ

