Sandalwood News: ಗೆಳತಿ ಪವಿತ್ರಾ ಗೌಡಗೆ ಇನ್ಸ್ಟಾಗ್ರಾಮ್ನಲ್ಲಿ ಅಶ್ಲೀಲ ಮೆಸೇಜ್ ಕಳುಹಿಸಿದ್ದಾನೆ ಎನ್ನುವ ಕಾರಣಕ್ಕೆ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆಯಿಸಿ ಹತ್ಯೆ ಮಾಡಿದ ಗಂಭೀರ ಆರೋಪ ದರ್ಶನ್ ಮೇಲಿದೆ. ಈಗಾಗಲೇ ದರ್ಶನ್ ನಡೆಗೆ ಇಡೀ ಕರುನಾಡು ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಇದರ ಬೆನ್ನಲ್ಲೇ ದರ್ಶನ್ ತಾಯಿ ಮೀನಾ ತೂಗುದೀಪ್ ಅವರಿಗೂ ಕೂಡ ತೀವ್ರ ಆಘಾತವಾಗಿದೆ.
ಕಳೆದೆರಡು ದಿನದಿಂದ ಮೈಸೂರಿನ ಸಿದ್ದಾರ್ಥ್ ನಗರದಲ್ಲಿರುವ ಮನೆಯೊಳಗೆ ಉಳಿದುಕೊಂಡಿರುವ ಮೀನಾ ತೂಗುದೀಪ್ ಯಾರೊಂದಿಗೂ ಮಾತನಾಡಲು ಬಯಸುತ್ತಿಲ್ಲ. ದರ್ಶನ್ ಅಕ್ಕನ ಮಗ ಚಂದನ್ ಮೈಸೂರಿನ ನಿವಾಸಕ್ಕೆ ಆಗಮಿಸಿದ್ದು, ಮೀನಾ ಅವರ ಆರೋಗ್ಯವನ್ನು ನೋಡಿಕೊಳ್ಳುತ್ತಿದ್ದಾರೆ.
ಡಿಬಾಸ್ ಇತ್ತೀಚೆಗೆ ತಾಯಿ ಜೊತೆಗೂ ಜಗಳವಾಡಿದ್ದಾರೆ. ತಾಯಿಯೊಂದಿಗೆ ಜಗಳ ಮಾಡಿ ಮಾತು ಬಿಟ್ಟಿದ್ದಾರೆ. ಹಲವು ದಿನಗಳಿಂದ ದರ್ಶನ್ ತಾಯಿ ಮನೆಗೆ ಭೇಟಿ ನೀಡಿಲ್ಲ. ತಾಯಿ ಜೊತೆಗೂ ಮಾತನಾಡಿಲ್ಲ. ಕೊಲೆ ಪ್ರಕರಣದ ಬಳಿಕ ತಾಯಿ ಮೀನಾ ತೂಗುದೀಪ್ ಮೌನಕ್ಕೆ ಜಾರಿದ್ದಾರೆ. ದರ್ಶನ್ ಕುರಿತು ಮಾಧ್ಯಮಗಳ ಜೊತೆ ಮಾತನಾಡಲು ಮೀನಾ ನಿರಾಕರಿಸಿದ್ದಾರೆ.
ದಿನಕರ್ ತೂಗುದೀಪ ಜೊತೆಗಿರುವ ಮೀನಾ ತಮ್ಮ ನೋವು ತೋಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಮನೆ ಒಳಗೆಡೆ ಇರುವ ದರ್ಶನ್ ತಾಯಿ, ಸಹೋದರ ಹಾಗೂ ಕುಟುಂಬಸ್ಥರು, ಒಳಗಿನಿಂದ ಗೇಟ್‌ಗೆ ಬೀಗ ಹಾಕಿದ್ದಾರೆ.
ಇನ್ನೂ ಪ್ರಕರಣಕ್ಕೆ ಸಂಬಂಧಿಸಿದಂತೆ ಪಟ್ಟಣಗೆರೆ ಶೆಡ್ನಲ್ಲಿ ದರ್ಶನ್ ಹಾಗೂ ಪವಿತ್ರಾಗೌಡ ಅವರನ್ನು ಕರೆ ತಂದು ಸ್ಥಳ ಮಹಜರು ಮಾಡಿಸಲಾಗಿದೆ.
ಯಡಿಯೂರಪ್ಪ ವಿರುದ್ಧ ಪೋಕ್ಸೋ ಕೇಸ್: ವಿಚಾರಣೆಗೆ ಹಾಜರಾಗುವಂತೆ ಸಿಐಡಿ ನೋಟಿಸ್
Sandalwood News: ಪವಿತ್ರಾ ಮೊಬೈಲ್‌ಗೆ ಮರ್ಮಾಂಗದ ಚಿತ್ರ ಕಳಿಸಿದ್ದ ರೇಣುಕಾಸ್ವಾಮಿ!