Monday, July 22, 2024

Latest Posts

Sandalwood News: ನಟ ದರ್ಶನ್ ಈ ಕೇಸ್‌ನಲ್ಲಿ ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ..?

- Advertisement -

Sandalwood Crime News: ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣ ಕ್ಷಣಕ್ಕೊಂದು ಹೊಸ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಈ ಪ್ರಕರಣದ ಆಳಕ್ಕೆ ಹೋದಂತೆ ಹೊಸ ಹೊಸ ವಿಚಾರಗಳು ಹೊರಗೆ ಬರುತ್ತಿವೆ. ಅಸಲಿಗೆ ಈ ಕೇಸ್​ನಲ್ಲಿ ದರ್ಶನ್ ಹೇಗೆ ಸಿಲುಕಿಕೊಂಡಿದ್ದೇಕೆ ಅನ್ನೋ ರಹಸ್ಯ ಬಯಲಾಗಿದೆ.

ಈ ಪ್ರಕರಣದಿಂದ ದರ್ಶನ್ ತಪ್ಪಿಸಿಕೊಳ್ಳಲು ಪ್ಲ್ಯಾನ್ ಮಾಡಿದ್ದರು. ಆದರೇ ಇದೇ ಪ್ಲ್ಯಾನ್ ಉಲ್ಟಾ ಆಗಿದೆ. ಕೊಲೆ ಮಾಡಿ ದರ್ಶನ್ ಅಂಡ್ ಗ್ಯಾಂಗ್ ತಗ್ಲಾಕೊಂಡಿದ್ದೇ ರೋಚಕವಾಗಿದೆ. ಪಟ್ಟಣಗೆರೆ ಶೆಡ್​ನಲ್ಲಿ ರೇಣುಕಾಸ್ವಾಮಿಯ ಕೊಲೆ ಮಾಡಲಾಗಿರುತ್ತದೆ. ಶವ ವಿಲೇವಾರಿ ಮಾಡಲು ಬಂದ ಮೂವರು, ದರ್ಶನ್ ಜೊತೆಗೆ 30 ಲಕ್ಷ ರೂಪಾಯಿಗೆ ಡೀಲ್ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. 30 ಲಕ್ಷ ರೂಪಾಯಿ ಹಣ ಪಡೆದ ಬಳಿಕ ಆರ್.ಆರ್.ನಗರದ ಪಟ್ಟಣಗೆರೆ ಶೆಡ್​ನಿಂದ ಮೃತದೇಹವನ್ನು ಸುಮ್ಮನಹಳ್ಳಿ ಬಳಿಯ ಸತ್ವಾ ಅಪಾರ್ಟ್ಮೆಂಟ್ ಮುಂಭಾಗದ ರಾಜಕಾಲುವೆಗೆ ಎಸೆದಿದ್ದರು.

ಶವ ವಿಲೇವಾರಿ ಮಾಡಿದ ಮೂವರು ಆರೋಪಿಗಳಿಗೆ ಭಯ ಶುರುವಾಗಿತ್ತು. ಈ ವೇಳೆ ಮೂವರ ಗ್ಯಾಂಗ್​ ರಾತ್ರಿಯಿಡೀ ಚಾಲೆಜಿಂಗ್ ಸ್ಟಾರ್ ದರ್ಶನ್​​ಗೆ ವಾಟ್ಸ್​ಆ್ಯಪ್​ ಮೂಲಕ ಕರೆ ಮಾಡಿ ಮಾತಾಡಿದ್ದಾರೆ. ಆಗ ಹಣಕಾಸು ವಿಚಾರಕ್ಕೆ ಗಲಾಟೆಯಾಗಿದ್ದು ಕೊಲೆ ಮಾಡಿದ್ದೇವೆ ಎಂದು ಸರೆಂಡರ್ ಆಗುವಂತೆ ದರ್ಶನ್ ಸೂಚಿಸಿದ್ದರು ಎನ್ನಲಾಗಿದೆ.

ಬಂಧಿತ ಆರೋಪಿಗಳನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಮೂವರನ್ನೂ ಪೊಲೀಸರು ಪ್ರತ್ಯೇಕವಾಗಿ ವಿಚಾರಣೆ ನಡೆಸಿದ್ದರು. ಈ ವೇಳೆ ಒಬ್ಬೊಬ್ಬರಿಂದ ಒಂದೊಂದು ರೀತಿಯ ಉತ್ತರ ಸಿಕ್ಕಿದೆ. ಕೊನೆಗೆ ಅವರ ಮೊಬೈಲ್ ಪರಿಶೀಲನೆ ನಡೆಸಿದಾಗ ದರ್ಶನ್​ಗೆ ರಾತ್ರಿ ಇಡೀ ಕರೆ ಮಾಡಿರೋ ದಾಖಲೆ ಸಿಕ್ಕಿದೆ. ಆರೋಪಿಗಳಿಗೆ ತಮ್ಮದೇ ರೀತಿಯಲ್ಲಿ ಪೊಲೀಸರು ಕೇಳಿದಾಗ ದರ್ಶನ್ ಹೆಸರು ಬಾಯಿಬಿಟ್ಟಿದ್ದಾರೆ. ಜೊತೆಗೆ 30 ಲಕ್ಷ ರೂಪಾಯಿಗೆ ಮೃತದೇಹ ವಿಲೇವಾರಿ ಮಾಡಲು ಒಪ್ಪಿಕೊಂಡಿರೋದಾಗಿ ಗ್ಯಾಂಗ್ ತನಿಖೆ ವೇಳೆ ಬಾಯಿಬಿಟ್ಟಿದೆ ಎನ್ನಲಾಗಿದೆ.

ಆಗ ಪೊಲೀಸರಿಗೆ ಕೊಲೆಯ ಅಸಲಿ ಸೂತ್ರದಾರನ ಬಗ್ಗೆ ಗೊತ್ತಾಗಿದೆ. ಎಲ್ಲವನ್ನೂ ಪರಿಶೀಲಿಸಿದಾಗ ದರ್ಶನ್ ಹೆಸರು ಹೊರಬಿದ್ದಿದೆ. ಕೋಟ್ಯಂತರ ಅಭಿಮಾನಿಗಳ ಯಜಮಾನ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆಗಿರುವುದು ಅಭಿಮಾನಿ ಬಳಗಕ್ಕೆ ತೀವ್ರ ನೋವು ತಂದಿದೆ. ಪ್ರಕರಣದಲ್ಲಿ ನಟ ದರ್ಶನ್ ಸೇರಿ 13 ಜನರನ್ನು ಬಂಧಿಸಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

ಬೆಣ್ಣಿ ಹಳ್ಳ ಹಾಗೂ ತುಪ್ರಿ ಹಳ್ಳಕ್ಕೆ ಸಚಿವ ಸಂತೋಷ್ ಲಾಡ್ ಭೇಟಿ

ಮಿಲಿಟರಿ ವಿಮಾನ ಪತನ: ಮಲಾವಿಯ ಉಪಾಧ್ಯಕ್ಷ ಸೇರಿ 9 ಜನರ ದುರ್ಮರಣ

ಪತ್ನಿ ಈ ಕೆಲಸ ಮಾಡುವುದಿಲ್ಲವೆಂದು ಡಿವೋರ್ಸ್‌ ಕೇಳಿದ ಪತಿ: ಈ ರೀತಿ ತೀರ್ಪು ನೀಡಿದ ಕೋರ್ಟ್

- Advertisement -

Latest Posts

Don't Miss