Hubli News: ಹುಬ್ಬಳ್ಳಿ: ಕಳೆದ ಏಪ್ರೀಲ್ 1ರಿಂದ ಜೂನ್ 27 ರವರೆಗೆ ಸುರಿದ ಭಾರಿ ಗಾಳಿ ಮಳೆಗೆ
ವಿವಿಧೆಡೆ ವಿದ್ಯುತ್ ಕಂಬಗಳು, ವಿದ್ಯುತ್ ಪರಿವರ್ತಕಗಳು, ವಿದ್ಯುತ್ ತಂತಿಗಳು ಹಾನಿಗೊಳಗಾಗಿದ್ದು ಇದರಿಂದ ಹೆಸ್ಕಾಂಗೆ 33.81 ಕೋಟಿರೂ, ನಷ್ಟವಾಗಿದೆ ಎಂದು ಹೆಸ್ಕಾಂ ಎಂಡಿ ಮೊಹಮ್ಮದರೋಷನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಧಾರಾಕಾರ ಮಳೆಗೆ ಹೆಸ್ಕಾಂ ವ್ಯಾಪ್ತಿಯ ಧಾರವಾಡ, ಬೆಳಗಾವಿ, ವಿಜಯಪುರ, ಉತ್ತರಕನ್ನಡ, ಗದಗ, ಹಾವೇರಿ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ 10448 ವಿದ್ಯುತ್ ಕಂಬಗಳು ಹಾನಿಯಾಗಿವೆ. ಅವುಗಳ ಪೈಕಿ 10076 ಕಂಬಗಳನ್ನು ದುರಸ್ತಿಗೊಳಿಸಿದ್ದು 372 ಕಂಬಗಳದುರಸ್ತಿ ಕಾರ್ಯ ನಡೆದಿದೆ. 1216 ವಿದ್ಯುತ್ಸರಿವರ್ತಕಗಳು (ಟಿಸಿ) ಹಾನಿಗೊಳಗಾಗಿದ್ದು, 1214 ಪರಿವರ್ತಕಗಳನ್ನು ದುರಸ್ತಿ ಮಾಡಲಾಗಿದೆ. ಹಾನಿಗೊಳಗಾದ 94.47 ಕಿ.ಮೀ. ಉದ್ದದ ವಿದ್ಯುತ್ತಂತಿಗಳ ಪೈಕಿ 92.24 ಕಿ.ಮೀ ಉದ್ದದ ವಿದ್ಯುತ್ತಂತಿಯನ್ನು ಈಗಾಗಲೇ ದುರಸ್ತಿ ಮಾಡಲಾಗಿದೆ. ಬಾಕಿ ಉಳಿದವುಗಳನ್ನು ದುರಸ್ತಿ ಕಾರ್ಯಗಳು ಭರದಿಂದ ಸಾಗಿವೆ.
ಹೆಸ್ಕಾಂ ವ್ಯಾಪ್ತಿಯ ಏಳುಜಿಲ್ಲೆಗಳಲ್ಲಿ 10448 ವಿದ್ಯುತ್ ಕಂಬಗಳು ಧರೆಗುರುಳಿದ್ದರಿಂದ 17. 02 ಕೋಟಿರೂ. 1216 ವಿದ್ಯುತ್ ಪರಿವರ್ತಕ(ಟಿಸಿ)ಗಳುಹಾನಿಗೊಳಗಾಗಿದ್ದರಿಂದ 15.79 ಕೋಟಿರೂ. ಹಾಗೂ 94.47 ಕಿ.ಮೀ ಉದ್ದದ ವಿದ್ಯುತ್ತಂತಿಗಳಿಗೆ ಹಾನಿಯಾಗಿದ್ದರಿಂದ 99.47 ಲಕ್ಷರೂ, ಸೇರಿದಂತೆ ಒಟ್ಟಾರೆ 33.89 ಕೋಟಿ ರೂ.ನಷ್ಟವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಹೆಚ್ಚು ಹಾನಿ : ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಬೆಳಗಾವಿ ಜಿಲ್ಲೆಯಲ್ಲಿ ಅತೀ ಹೆಚ್ಚು ಹಾನಿ ಸಂಭವಿಸಿದೆ. ಬೆಳಗಾವಿ ಜಿಲ್ಲೆಯಲ್ಲಿ ಬರೋಬ್ಬರಿ 2593 ವಿದ್ಯುತ್ ಕಂಬಗಳು ನೆಲಕಚ್ಚಿದ್ದು ಎಲ್ಲ ಕಂಬಗಳನ್ನು ದುರಸ್ತಿಮಾಡಲಾಗಿದೆ.477 ವಿದ್ಯುತ್ ಪರಿವರ್ತಕಗಳು ಹಾನಿಯಾಗಿದ್ದು ಅವುಗಳ ಪೈಕಿ 475 ಪರಿವರ್ತಕಗಳನ್ನು ದುರಸ್ತಿಯಾಗಿದೆ.2.54 ಕಿ.ಮೀ ಉದ್ದದ ವಿದ್ಯುತ್ತಂತಿಗಳು ತುಂಡಾಗಿದ್ದು, 1.83 ಕಿ.ಮೀ ಉದ್ದದ ವಿದ್ಯುತ್ ತಂತಿಗಳನ್ನು ಸರಿಪಡಿಸಲಾಗಿದೆ. ಇದರಿಂದಾಗಿ ಹೆಸ್ಕಾಂಗೆ ರೂ.8.78 ಕೋಟಿರೂ ನಷ್ಟವಾಗಿದೆ.
ಈಗ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದವರ ಮನೆ ಮೇಲೂ ಅಟ್ಯಾಕ್ ಮಾಡಲಿದೆ ಬುಲ್ಡೋಜರ್
ಮದುವೆಯಾಗಿ ಒಂದೇ ತಿಂಗಳಲ್ಲಿ ಕೋಟಿ ಕೋಟಿ ಸಾಲದಲ್ಲಿ ಮುಳುಗಿದ ನಟಿಯ ಗಂಡ: ಆಸ್ತಿ ಮಾರಾಟ