Beauty tips: ನಾವು ಉತ್ತಮ ಆಹಾರ, ದ್ರವ ಪದಾರ್ಥ ಸೇವಿಸದೇ ಇದ್ದಲ್ಲಿ, ನಾವೆಂದಿಗೂ ಸುಂದರವಾಗಿ ಕಾಣಲು ಸಾಧ್ಯವೇ ಇಲ್ಲ. ಹಾಗಾಗಿ ವೈದ್ಯರು, ನೀವು ಚೆನ್ನಾಗಿ ಕಾಣಬೇಕು, ನಿಮ್ಮ ತ್ವಚೆ, ಕೂದಲು ಆರೋಗ್ಯವಾಗಿರಬೇಕು ಅಂದ್ರೆ ಚೆನ್ನಾಗಿ ನೀಕು ಕುಡಿಯಬೇಕು ಅಂತಲೇ ಹೇಳುತ್ತಾರೆ. ಹಾಗಾಗಿ ನಾವಿಂದು ಬೆಳಿಗ್ಗೆ ಎದ್ದು ಯಾವ ಪೇಯ ಕುಡಿದರೆ, ನಿಮ್ಮ ಸೌಂದರ್ಯ ಇಮ್ಮಡಿಯಾಗುತ್ತದೆ ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಉಪ್ಪು, ನಿಂಬೆರಸ ಸೇರಿಸಿದ ಬಿಸಿ ನೀರು. ಬೆಚ್ಚಗಿನ ನೀರಿಗೆ ಕೊಂಚ ನಿಂಬೆರಸ, ಉಪ್ಪು ಸೇರಿಸಿ, ಬಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಲಾಗುತ್ತದೆ. ಇದರಿಂದ ಯಾವುದೇ ತೊಂದರೆ ಇಲ್ಲದೇ, ಹೊಟ್ಟೆ ಕ್ಲೀನ್ ಆಗುತ್ತದೆ. ಈ ಮೂಲಕ ದೇಹದಲ್ಲಿರುವ ಕಲ್ಮಶ ಹೋಗಿ, ತ್ವಚೆ ಚೆನ್ನಾಗಿರುತ್ತದೆ.
ಇನ್ನು ಎರಡನೇಯದಾಗಿ ಎಲ್ಲಕ್ಕಿಂತ ಉತ್ತಮ ಪೇಯ ಅಂದ್ರೆ, ಎಳನೀರು. ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಒಂದು ಎಳನೀರನ್ನು ಕುಡಿದರೆ, ನಿಮ್ಮ ಎಲ್ಲ ಸೌಂದರ್ಯ, ಆರೋಗ್ಯ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ. ಇದರ ಸೇವನೆಯಿಂದ, ಮೂತ್ರ ವಿಸರ್ಜನೆ ಸರಿಯಾಗಿ ಆಗುತ್ತದೆ. ದೇಹದಲ್ಲಿರುವ ಉಷ್ಣತೆ ಕಡಿಮೆಯಾಗುತ್ತದೆ. ಇದರಿಂದ ಮುಖದಲ್ಲಿ ಮೊಡವೆಯಾಗುವುದಿಲ್ಲ. ಕೂದಲು ಉದುರುವುದಿಲ್ಲ. ದೇಹದ ತೂಕ ಕೂಡ ಸರಿಯಾಗಿರುತ್ತದೆ.
ಮೂರನೇಯದಾಗಿ ನೆಲ್ಲಿಕಾಯಿ ಜ್ಯೂಸ್. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆಲ್ಲಿಕಾಯಿ ಜ್ಯೂಸ್ ಕುಡಿಯುವುದರಿಂದ ಆರೋಗ್ಯ ಚೆನ್ನಾಗಿರುತ್ತದೆ. ತಿಂದ ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ. ಆದರೆ ನೆಲ್ಲಿಕಾಯಿ ಜ್ಯೂಸ್ ಮಿತವಾಗಿ ಕುಡಿಯಬೇಕು.
ಫಾಸ್ಟ್ಫುಡ್ ಅಗತ್ಯಕ್ಕಿಂತ ಹೆಚ್ಚು ಸೇವಿಸಿದ್ರೆ ಎಷ್ಟು ಡೇಂಜರ್ ಗೊತ್ತಾ..?
Health Tips: ಪೇನ್ ಕಿಲ್ಲರ್ ತೆಗೆದುಕೊಳ್ಳುವ ಮುನ್ನ ಎಚ್ಚರವಿರಲಿ.. ಇದೇ ಚಟವಾಗದಿರಲಿ..