Health Tips: ಗೊರಕೆ ಹೊಡೆಯುವುದು ನಮ್ಮ ದೇಹದಲ್ಲಾಗುವ ಸಾಮಾನ್ಯ ಕ್ರಿಯೆಗಳಲ್ಲಿ ಒಂದು. ಆದರೆ ಇದರಿಂದ ನಮ್ಮ ಪಕ್ಕದಲ್ಲಿ ಮಲಗಿದವರಿಗೆ ಕೆಲವೊಮ್ಮೆ ತೊಂದರೆಯುಂಟಾಗುತ್ತದೆ. ಭಾರತೀಯ ಮಹಿಳೆಯರು ಗೊರಕೆಯನ್ನು ನಾರ್ಮಲ್ ವಿಷಯ ಅಂತಲೇ ತೆಗೆದುಕೊಂಡು ಹೋಗುತ್ತಾರೆ. ಆದರೆ ವಿದೇಶದಲ್ಲಿ ಎಷ್ಟೋ ಹೆಣ್ಣು ಮಕ್ಕಳು, ಪತಿಗೆ ಡಿವೋರ್ಸ್ ನೀಡಿರುವುದೇ ಈ ವಿಷಯಕ್ಕೆ. ಪತಿ ಗೊರಕೆ ಹೊಡೆಯುತ್ತಾನೆ. ನನ್ನ ರಾತ್ರಿ ನಿದ್ದೆ ಎಲ್ಲ ಹಾಳಾಗುತ್ತದೆ. ಬೆಳಿಗ್ಗೆ ಆಫೀಸಿಗೆ ಹೋದರೆ, ಕೆಲಸ ಮಾಡಲು ಕಿರಿಕಿರಿಯುಂಟಾಗುತ್ತದೆ. ಹಾಗಾಗಿ ನಾನು ನನ್ನ ಪತಿಗೆ ವಿಚ್ಛೇದನ ನೀಡಲು ಇಚ್ಛಿಸುತ್ತೇನೆ ಅಂತ ಹೇಳುತ್ತಾರೆ. ಹಾಗಾದ್ರೆ ಹೆಂಗಸರಿಗಿಂತ ಗಂಡಸರು ಹೆಚ್ಚು ಗೊರಕೆ ಹೊಡೆಯಲು ಕಾರಣವೇನು ಅಂತಾ ತಿಳಿಯೋಣ ಬನ್ನಿ..
ಚೆನ್ನಾಗಿ ದುಡಿದು ಬಂದು, ನಿದ್ರಿಸಿದರೆ ಕಣ್ಣುಮುಚ್ಚಿದ ತಕ್ಷಣವೇ ನಿದ್ರೆ ಬರುತ್ತದೆ. ಮತ್ತು ಗೊರಕೆ ಬರುತ್ತದೆ. ಏಕೆಂದರೆ, ನಮ್ಮ ದೇಹಕ್ಕೆ ಕೆಲಸ ಮಾಡಿ, ದಣಿವಾಗಿರುತ್ತದೆ. ಆ ದಣಿವಿನಿಂದಲೇ, ಉತ್ತಮ ನಿದ್ದೆ ಬರುತ್ತದೆ. ಮತ್ತು ಚೆನ್ನಾಗಿ ನಿದ್ದೆ ಬಂದಾಗ, ಗೊರಕೆಯೂ ಬರುತ್ತದೆ.
ಆದರೆ ಕೆಲವು ಕಾರಣಗಳಿಂದ ಗಾಢವಾಗಿ ನಿದ್ರೆ ಬಂದರೆ, ಗೊರಕೆ ಸಮಸ್ಯೆ ಹೆಚ್ಚಾಗುತ್ತದೆ. ಹಾಗೆ ಗೊರಕೆ ಸಮಸ್ಯೆ ಹೆಚ್ಚಾಗಲು ಕಾರಣ ಅಂದ್ರೆ, ಮದ್ಯಪಾನ ಮತ್ತು ಧೂಮಪಾನ ಸಮಸ್ಯೆ ಹೆಚ್ಚಾದರೆ, ಗೊರಕೆ ಹೊಡೆಯುವ ಸಮಸ್ಯೆ ಕೂಡ ಹೆಚ್ಚಾಗುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನಮ ಮಾಹಿತಿಗಾಗಿ ವೀಡಿಯೋ ನೋಡಿ.




