Spiritual: ಯಾರಿಗೆ ತಾನೇ ತಾವು ಜೀವನದಲ್ಲಿ ಉದ್ಧಾರವಾಗಬೇಕು, ಶ್ರೀಮಂತರಾಗಬೇಕು, ಜೀವನದಲ್ಲಿ ನೆಮ್ಮದಿ, ಖುಷಿ ಬೇಕು ಅಂತಾ ಯಾರಿಗೆ ತಾನೇ ಇಷ್ಟವಿರುವುದಿಲ್ಲ ಹೇಳಿ..? ಹಾಗಾಗಬೇಕು ಅಂದ್ರೆ ನಾವು ನಮ್ಮ ಜೀವನದಿಂದ ಮೂರು ಸಂಗತಿಗಳನ್ನು ಕೈ ಬಿಡಬೇಕು ಅಂತಾರೆ ವಿದುರರು. ಹಾಗಾದ್ರೆ ಆ 3 ಸಂಗತಿಗಳು ಯಾವುದು ಅಂತಾ ತಿಳಿಯೋಣ ಬನ್ನಿ..
ಸೋಮಾರಿತನ. ಅತೀಯಾದ ಸೋಮಾರಿತನದಿಂದ ನಮ್ಮ ಕೆಲಸಗಳು ಮುಂದೂಡಲ್ಪಡುತ್ತದೆ. ಅಲ್ಲದೇ, ಸೋಮಾರಿತನ ಇದ್ದರೆ ನಾವೇನೂ ಸಾಧಿಸಲು ಸಾಧ್ಯವಿಲ್ಲ. ಸೋಮಾರಿತನವೇ ಜೀವನವಾದರೆ, ನಾವು ಬಡವರಾಗಿಯೇ ಇರಬೇಕಾಗುತ್ತದೆ. ಶ್ರೀಮಂತಿಕೆ ಇದ್ದರೂ, ಕೆಲ ದಿನಗಳಲ್ಲೇ ಅದು ಕರಗಿ ಹೋಗುತ್ತದೆ. ಹಾಗಾಗಿ ಸೋಮಾರಿತನ ಇದ್ದವರು ಎಂದಿಗೂ ಉದ್ಧಾರವಾಗಲು ಸಾಧ್ಯವಿಲ್ಲ ಅಂತಾರೆ ವಿದುರರು.
ಅತಿಯಾದ ನಿರೀಕ್ಷೆ. ನಾವು ನಮ್ಮ ಬಗ್ಗೆ ನಿರೀಕ್ಷೆ ಇಟ್ಟುಕೊಂಡು, ಕೆಲಸ ಮಾಡಿದರೆ, ಜೀವನದಲ್ಲಿ ಉದ್ಧಾರವಾಗಬಹುದೇನೋ, ಆದರೆ ಇ್ನನೊಬ್ಬರ ಮೇಲಿನ ನಿರೀಕ್ಷೆ ನಿಮ್ಮನ್ನು ಎಂದಿಗೂ ಉದ್ಧಾರ ಮಾಡಲಾಗದು. ಇನ್ನೊಬ್ಬರ ಮೇಲೆ ನಾವು ನಿರೀಕ್ಷೆ ಮಾಡಿದರೆ, ನಮಗೆ ಸದಾ ದುಃಖವೇ ಸಿಗುತ್ತದೆ. ಹಾಗಾಗಿ ಇನ್ನೊಬ್ಬರು ನಮಗೆ ಸಹಾಯ ಮಾಡುತ್ತಾರೆ. ಇನ್ನೊಬ್ಬರು ನಮ್ಮ ಕಷ್ಟಕಾಲಕ್ಕೆ ಸಹಾಯಕ್ಕೆ ಸಿಗುತ್ತಾರೆ. ಇನ್ನೊಬ್ಬರು ನಮ್ಮೊಂದಿಗೆ ಸದಾ ಇರುತ್ತಾರೆಂಬ ನಿರೀಕ್ಷೆ ಎಂದಿಗೂ ಇಡಬೇಡಿ ಅಂತಾರೆ ವಿದುರರು.
ದೇವರ ಮೇಲಿನ ಅತಿಯಾದ ನಂಬಿಕೆ: ದೇವರನ್ನು ನಂಬಬೇಕು. ಆದರೆ ಎಲ್ಲವನ್ನೂ ದೇವರೇ ನೋಡಿಕೊಳ್ಳುತ್ತಾನೆ ಬಿಡು, ನಾವೇನು ಪ್ರಯತ್ನಿಸುವುದು ಬೇಡಾ ಅಂತಾ ಕುಳಿತರೆ, ಉದ್ಧಾರವಾಗಲು ಸಾಧ್ಯವೇ ಇಲ್ಲ. ಏಕೆಂದರೆ ವಿದುರನ ಪ್ರಕಾರ, ನಾವು ಜೀವನದಲ್ಲಿ ಉದ್ಧಾರವಾಗಬೇಕು ಅಂದ್ರೆ, ನಮ್ಮ ಪ್ರಯತ್ನ ನಾವು ಮಾಡಬೇಕು. ಆಗಲೇ ದೇವರು ಕೂಡ ನಮ್ಮ ಪ್ರಯತ್ನಕ್ಕೆ ಫಲ ಕೊಡುತ್ತಾನೆ. ಅದನ್ನು ಬಿಟ್ಟು ದೇವರೇ ಎಲ್ಲ ಆಸೆ ಈಡೇರುವಂತೆ ಮಾಡಲಿ ಅಂದ್ರೆ, ಅದು ಖಂಡಿತ ಸಾಧ್ಯವಿಲ್ಲ.
ನಿರ್ಲಕ್ಷ್ಯದಿಂದಲೇ ತಮ್ಮ ಜೀವನದಲ್ಲಿ ನಷ್ಟ ಅನುಭವಿಸುವ ರಾಶಿಯವರು ಇವರು




