Viral Video: ಹಾಸ್ಟೇಲ್ ವಿದ್ಯಾರ್ಥಿಗಳಿಗೆ ನೀಡಿದ ಚಟ್ನಿಯಲ್ಲಿ ಜೀವಂತ ಇಲಿ ಪತ್ತೆ

National News: ತೆಲಂಗಾಣದ ಹಾಸ್ಟೇಲ್ ಒಂದರಲ್ಲಿ, ಮಕ್ಕಳಿಗಾಗಿ ಮಾಡಿದ್ದ ಚಟ್ನಿ ಪಾತ್ರೆಯಲ್ಲಿ ಜೀವಂತ ಇಲಿ ಓಡಾಡಿದ್ದು, ಈ ದೃಶ್ಯವನ್ನು ಅಲ್ಲಿರುವ ವಿದ್ಯಾರ್ಥಿಗಳೇ ತಮ್ಮ ಮೊಬೈಲ್‌ನಲ್ಲಿ ಸೆರೆ ಬಿಡಿದು, ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ.

ಇದ್ಯಾವುದೋ ಸಾಮಾನ್ಯ ಹಾಸ್ಟೇಲ್‌ನಲ್ಲಿ ನಡೆದ ಘಟನೆ ಅಲ್ಲ. ಬದಲಾಗಿ ಹೈದರಾಬಾದ್‌ನ ಯುನಿವರ್ಸಿಟಿಯ ಹಾಸ್ಟೇಲ್‌ನಲ್ಲಿ ನಡೆದ ಘಟನೆ. ಜವಾಹರ್‌ಲಾಲ್ ನೆಹರು ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು, ವಿದ್ಯಾರ್ಥಿಗಳು ಈ ದೃಶ್ಯ ನೋಡಿದ್ದಕ್ಕೆ, ಆ ಆಹಾರವನ್ನು ಸೇವಿಸದೇ, ಹಾಗೆ ಬಿಟ್ಟಿದ್ದಾರೆ. ಆದರೆ ಈ ಮೊದಲು ಅವರ ಕಣ್ತಪ್ಪಿಸಿ, ಅದೆಷ್ಟು ಪ್ರಾಣಿಗಳು ಆಹಾರದಲ್ಲಿ ಈಜಾಡಿ, ವಿದ್ಯಾರ್ಥಿಗಳ ಆರೋಗ್ಯ ಹಾಳು ಮಾಡಿದ್ದಾರೋ, ಆ ದೇವರೇ ಬಲ್ಲ.

ಕೆಲ ದಿನಗಳಿಂದ ಇಂಥ ಘಟನೆ ಹೆಚ್ಚಾಗುತ್ತಿದೆ. ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ್ದ ಐಸ್‌ಕ್ರೀಮ್‌ನಲ್ಲಿ ಮನುಷ್ಯನ ಬೆರಳು, ಜರಿ ಹುಳು, ಚಿಪ್ಸ್ ಪ್ಯಾಕೇಟ್‌ನಲ್ಲಿ ಸತ್ತ ಕಪ್ಪೆ, ವಿಮಾನದಲ್ಲಿ ನೀಡಿದ ಆಹಾರದಲ್ಲಿ ಹಲ್ಲಿ, ಇಲಿ, ಇತ್ಯಾದಿ ಇರುವ ವಿಷಯ ಸುದ್ದಿಯಾಗಿತ್ತು.

About The Author