Tuesday, October 22, 2024

Latest Posts

BENGALURU – ನಡುರಸ್ತೆಯಲ್ಲೇ ವೀಲಿಂಗ್​ ಪುಂಡರ ಹಾವಳಿ!

- Advertisement -

ಬೆಂಗಳೂರು: ನಡುರಸ್ತೆಯಲ್ಲೇ ಕಿಡಿಗೇಡಿಗಳು ವೀಲಿಂಗ್ ಮಾಡಿ ಸಾಮಾನ್ಯ ಜನ್ರಿಗೆ ಹಾವಳಿ ಕೊಡುವುದು ಸಾಮಾನ್ಯವಾಗಿ ಬಿಟ್ಟಿದೆ..

ಈ ವಿರುದ್ಧ ಸಂಚಾರಿ ಪೊಲೀಸರು ಸಹ ನಿರಂತರ ಕ್ರಮ ತೆಗೆದುಕೊಳ್ಳುತ್ತಿದ್ದಾರೆ.. ಅದಕ್ಕಾಗಿ ಹಲವು ಕಾನೂನುಗಳನ್ನು ಸಹ ತಂದಿರುವುದನ್ನು ನಾವು ಈಗಾಗಲೇ ನೋಡಿದ್ದೇವೆ.. ಆದ್ರೆ ಈಗ ಮತ್ತೆ ವಿಲೀಂಗ್​ ಹಾವಳಿ ನೈಸ್​ ರಸ್ತೆಯಲ್ಲೇ ಶುರುವಾಗಿದೆ..

ಅದರಲ್ಲಿಯೂ ಈ ಪುಂಡರು ನೈಸ್​​ ರಸ್ತೆಯಲ್ಲಿ ಓಡಾಡುತ್ತಿದ್ದ ವಾಹನಗಳನ್ನು ಅಲ್ಲೇ ನಿಲ್ಲಿಸಿ ವೀಲಿಂಗ್ ಮಾಡಿದ್ದಾರೆ.. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಸಹ ಆಗುತ್ತಿದ್ದು, ನೆಟ್ಟಿಗರು ಈ ಬಗ್ಗೆ ಗರಂ ಆಗಿದ್ದಾರೆ.. ನಾವು ನೈಸ್​ ರಸ್ತೆಯಲ್ಲಿ ಹೋಗುವುದೇ ಈ ಕಿರಿಕ್​ ಗಳು ಬೇಡ ಅಂತ ಆದ್ರೆ ಇಲ್ಲೇ ಈ ರೀತಿ ಆದ್ರೆ ಸಾಮಾನ್ಯ ರಸ್ತೆಗಳ ಪರಿಸ್ಥಿತಿ ಏನು.. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಅಂತ ಕಾಮೆಂಟ್ ಮಾಡುತ್ತಿದ್ದಾರೆ.. ಇದು ಹೀಗೆ ಮುಂದುವರೆದ್ರೆ ಸಾಮಾನ್ಯ ಜನರ ಪರಿಸ್ಥಿತಿ ಏನಾಗುತ್ತೆ? ಈ ಬಗ್ಗೆ ಅಧಿಕಾರಿಗಳು ಯಾವ ರೀತಿಯ ಕ್ರಮ ತೆಗೆದುಕೊಳ್ಳುತ್ತಾರೆ ಕಾದು ನೋಡಬೇಕು..

- Advertisement -

Latest Posts

Don't Miss