ಸಾಲ ಕೊಡುವ ಮುನ್ನ ಈ ರಾಶಿಯವರು ನೂರು ಬಾರಿ ಯೋಚಿಸಲೇಬೇಕು.

Horoscope: ಸಾಲ ಅಂದ್ರೆ ಜೀವನದಲ್ಲಿ ನಾವು ತಂದುಕೊಳ್ಳುವ ದೊಡ್ಡ ಸಮಸ್ಯೆ. ಆರೋಗ್ಯ ಹಾಳಾಗಿ, ನಸೀಬು ಕೆಟ್ಟು, ಆಸ್ಪತ್ರೆಗೆ ದಾಖಲಾಗಲೇಬೇಕು, ಜೀವ ಉಳಿಸಿಕೊಳ್ಳಲೇಬೇಕು ಎಂದಾಗ ಮಾತ್ರ ಸಾಲ ಮಾಡಬಹುದು. ಯಾಕಂದ್ರೆ ಅದು ಶೋಕಿಗೆ ಮಾಡುವ ಸಾಲವಲ್ಲ. ಆದರೆ ನೀವು ಸಂಬಂಧಿಕರ ಎದುರು ಮನೆ ಕಟ್ಟಿ ಮೆರೆಯಲೇಬೇಕು. ಗ್ರ್ಯಾಂಡ್ ಆಗಿ ಮದುವೆ ಮಾಡಲೇಬೇಕು. ಕಾರ್ ಪರ್ಚೇಸ್ ಮಾಡಲೇಬೇಕು ಎಂದು ಮಾಡುವ ಸಾಲ, ಶೋಕಕ್ಕೆ ಮೂಲವೇ ಸರಿ. ಇದು ಸಾಲ ಮಾಡುವವರ ಕಥೆಯಾದರೆ, ಸಾಲ ಕೊಡುವವರ ಕಷ್ಟವೇ ಬೇರೆ. ಕೊಟ್ಟ ಸಾಲ ವಾಪಸ್ ಸಿಗತ್ತಾ..? ಇಲ್ಲವಾ ಅನ್ನೋದು ಅವರ ಟೆನ್ಶನ್ . ಹಾಗಾಗಿ ನಾವಿಂದು ಯಾವ ರಾಶಿಯವರು ಸಾಲ ಕೊಡುವ ಮುನ್ನ ನೂರು ಬಾರಿ ಯೋಚಿಸಬೇಕು ಅಂತಾ ನಾವಿಂದು ಹೇಳಲಿದ್ದೇವೆ.

ಮಿಥುನ: ಮಿಥುನ ರಾಶಿಯವರಿಗೆ ಎದುರಿಗೆ ಇರುವವರ ಬಳಿ ಖಡಕ್ ಆಗಿ ಮಾತನಾಡಲು ಬರುವುದಿಲ್ಲ. ಏಕೆಂದರೆ, ಇವರ ಮುಖದಲ್ಲಿ ಗಾಂಭೀರ್ಯ ಕಂಡರೂ, ಇವರು ಮನಸ್ಸಿನಿಂದ ಸಹಾಯ ಮನೋಭಾವ ಉಳ್ಳವರು. ಪಾಪದವರು ಕಂಡ ತಕ್ಷಣ ಸಹಾಯ ಮಾಡಲು ಕೈ ಮುಂದೆ ಹೋಗುತ್ತದೆ. ಆದರೆ ಇವರು ಯಾರಿಗಾದರೂ ಸಾಲ ನೀಡಿದರೆ, ಅದು ಮರಳಿ ಬರುವುದು ಕಷ್ಟ. ಹಾಗಾಗಿ ಮಿಥುನ ರಾಶಿಯವರು ಸಾಲ ನೀಡುವ ಮುನ್ನ ಅನೇಕ ಬಾರಿ ಯೋಚಿಸಲೇಬೇಕು.

ಕಟಕ: ಕಟಕ ರಾಶಿಯವರಿಗೆ ಎದುರುತ್ತರ ನೀಡಲು ಬರುವುದಿಲ್ಲ. ಶತ್ರುಗಳ ಸಹ ಸಹಾಯ ಬೇಡಿದರೂ, ತಕ್ಷಣ ಸಹಾಯ ಮಾಡಿಬಿಡುತ್ತಾರೆ. ಹಂಗಿಸುವವರು, ದ್ವೇಷಿಸುವವರು ಯಾರೇ ಆಗಿರಲಿ, ಅವರು ಕಷ್ಟದಲ್ಲಿದ್ದರೆ, ಎಲ್ಲವನ್ನೂ ಮರೆತು ಮಾನವೀಯತೆಯಿಂದ ವರ್ತಿಸುತ್ತಾರೆ. ಅದೇ ರೀತಿ ಸಾಲ ನೀಡುವ ವಿಷಯದಲ್ಲೂ ಇವರು ಮೂರ್ಖರಾಗುತ್ತಾರೆ. ಜೋರು ಮಾಡಿ, ಸಾಲ ಹಿಂದಿರುಗಿಸುವಂತೆ ಕೇಳಲು ಇವರಿಂದ ಸಾಧ್ಯವಿಲ್ಲ.

ತುಲಾ: ತುಲಾ ರಾಶಿಯವರು ಕೊಟ್ಟ ಹಣ ಮರಳಿ ಕೇಳಲು ಹಿಂಜರಿಯುತ್ತಾರೆ. ಕೊಟ್ಟರೆ ಅವನಾಗೇ ಕೊಡಲಿ. ಹೋದರೆ ಹೋಗಲಿ, ದೇವರು ನನ್ನನ್ನು ಇಷ್ಟಾದರೂ ಇಟ್ಟಿದ್ದಾನಲ್ಲ ಎಂಬ ಭಾವನೆ ಅವರದ್ದು. ಅದೇ ರೀತಿ ಪುಕ್ಕಟೆಯಾಗಿ ಕೆಲಸ ಮಾಡಿಸಿಕೊಳ್ಳುವ ಜನರೇ ಇವರಿಗೆ ಸಿಗುತ್ತಾರೆ.

ಮೀನ: ಭಾವನಾತ್ಮಕ ಸ್ವಭಾವದ ಮೀನ ರಾಶಿಯವರು ಯಾರಾದರೂ ಬೈದರೂ, ಬೈಯ್ಯಿಸಿಕೊಂಡು ಬರುತ್ತಾರೆ ವಿನಃ, ಎದುರಿಗಿರುವವರಿಗೆ ಬೈಯ್ಯುವುದಿಲ್ಲ . ಅಷ್ಟು ಶಾಂತ ಸ್ವಭಾವದವರು. ಇವರು ಕೂಡ ಯಾರಿಗಾದರೂ ಸಾಲ ಕೊಡುವಾಗ ಎಚ್ಚರಿಕೆಯಿಂದ ಇರಬೇಕು. ಇಲ್ಲದೇ ಇದ್ದಲ್ಲಿ, ಕೊಟ್ಟ ಸಾಲ ವಾಪಸ್ ಬರುವುದು ಡೌಟ್.

About The Author