Thursday, June 19, 2025

Latest Posts

ರಶ್ಮಿಕಾ ಮಂದಣ್ಣಗೆ ಜಾಕ್​​ಪಾಟ್ – ಶ್ರೀವಲ್ಲಿ ಫುಲ್ ಬ್ಯುಸಿ

- Advertisement -

ಕಿರಿಕ್ ಪಾರ್ಟಿ ಮೂಲಕ ಮನೆಮಾತಾದ ರಶ್ಮಿಕಾ ಮಂದಣ್ಣ, ಈಗ ನ್ಯಾಷನಲ್ ಸ್ಟಾರ್.. ಇವ್ರ ರೇಂಜೇ ಫುಲ್ ಚೇಂಜ್ ಆಗೋಗಿದೆ. ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲೂ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ.. ಇದ್ರ ನಡುವೆ ರಶ್ಮಿಕಾಗೆ ಬಹು ದೊಡ್ಡ ಜಾಕ್​​ಪಾಟ್ ಒಂದು ಹೊಡೆದಿದೆ..

ರಶ್ಮಿಕಾ ಮಂದಣ್ಣಗೆ ಗೀತಾ ಗೋವಿಂದಂ ಸಿನಿಮಾ ಬಳಿಕ ಅದೃಷ್ಟವೇ ಬದಲಾಗಿಹೋಯ್ತು.. ಯಜಮಾನ, ಪುಷ್ಪ, ವಾರಿಸು, ಸೇರಿ ಮಾಡಿದ್ದೆಲ್ಲವೂ ಬ್ಲಾಕ್​ಬಸ್ಟರ್ ಸಿನಿಮಾಗಳೆ.. ಪುಷ್ಪಾದಲ್ಲಿ ಶ್ರೀವಲ್ಲಿ ಆಗಿ ಸೊಂಟ ಬಳುಕಿಸಿದ್ಮೇಲಂತೂ ವ್ಯಾಲ್ಯೂ ಇನ್ನೂ ಹೆಚ್ಚಾಗೇಹೋಗಿದೆ.. ಈಗ ಪುಷ್ಪ-2 ಸಿನಿಮಾ ಕ್ಯೂರಿಯಾಸಿಟಿ ಮೂಡಿಸಿದೆ.. ಈ ನಡುವೆ ಇನ್ನೂ ಸಾಲು ಸಾಲು ಚಿತ್ರಗಳಿಗೆ ಶ್ರೀವಲ್ಲಿ ಸೈನ್ ಹಾಕಿದ್ದಾಳೆ..

ಸದ್ಯ ರಶ್ಮಿಕಾ ಮಂದಣ್ಣ ಬರೋಬ್ಬರಿ 8 ಸಿನಿಮಾಗಳಲ್ಲಿ ನಟಿಸೋಕೆ ಮುಂದಾಗಿದ್ದಾರೆ. ಪುಷ್ಪಾ-2, ದಿ ಗರ್ಲ್​ಫ್ರೆಂಡ್, ಕುಬೇರ, ಛವ, ರೈನ್​​ಬೋ, ಅನಿಮಲ್ ಪಾರ್ಕ್, ಎಂಪೈರ್ಸ್ ಆಫ್ ವಿಜಯನಗರ, ಸಿಕಂದರ್ ಸಿನಿಮಾದಲ್ಲೂ ರಶ್ಮಿಕಾ ನಟಿಸ್ತಿದ್ದಾಳೆ.. 8 ಸಾಲು ಸಾಲು ಚಿತ್ರಗಳನ್ನ ಕೈನಲ್ಲಿ ಹಿಡ್ಕೊಂಡಿರೋ ಶ್ರೀವಲ್ಲಿ ಈಗ ಫುಲ್ ಬ್ಯುಸಿ.. ಇನ್ನೂ 2-3 ವರ್ಷ ಶ್ರೀವಲ್ಲಿಯನ್ನ ಟಚ್ ಮಾಡೋಕೆ ಯಾರಿಗೂ ಆಗಲ್ಲ…

- Advertisement -

Latest Posts

Don't Miss