National News: ತಮ್ಮ ಕಂಪನಿಯಲ್ಲಿ ಕೆಲಸ ಮಾಡುವವರು ತಿಲಕ ಇಡುವಂತಿಲ್ಲ. ಕೈಗೆ ದೇವರ ದಾರ ಕಟ್ಟುವಂತಿಲ್ಲ. ಆದರೆ ಹಿಜಬ್ ಧರಿಸಬಹುದು ಅನ್ನೋ ನೋಟೀಸ್ ರವಾನಿಸಿತ್ತು.
ಈ ಬಗ್ಗೆ ಹಲವೆಡೆ ಆಕ್ರೋಶ ವ್ಯಕ್ತಪಡಿಸಲಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಹಿಂದೂಗಳ ಆಕ್ರೋಶ ಕಟ್ಟೆಯೊಡೆದಿತ್ತು. ಇನ್ನು ಕೆಲವರು ತಮ್ಮ ಲೆನ್ಸ್‌ಕಾರ್ಟ್ ಕನ್ನಡಕವನ್ನು ಒಡೆದು ಚೂರು ಚೂರು ಮಾಡಿ, ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು.
ಇದೀಗ ಬಿಜೆಪಿ ನಾಯಕಿ ನಾಜಿಯಾ ಇಲಾಹಿ ಖಾನ್ ಲೆನ್ಸ್‌ಕಾರ್ಟ್ ಆಫೀಸ್‌ಗೆ ಹೋಗಿ, ಅಲ್ಲಿನ ಸಿಬ್ಬಂದಿಗಳಿಗೆ ತಿಲಕವಿಟ್ಟು ಬಂದಿದ್ದಾರೆ. ಆಫೀಸಿಗೆ ಎಂಟ್ರಿ ನೀಡಿದ ನಾಜಿಯಾ ಖಾನ್, ಹೆಡ್ ಆಫ್ ದಿ ಸ್ಟೋರ್ ಯಾರು ಅಂತಾ ಕೇಳಿದ್ದಾರೆ. ಆತ ಬಂದಿದ್ದು, ನಿಮ್ಮ ಹೆಸರೇನು ಎಂದು ಕೇಳಿದ್ದಾರೆ. ಅದಕ್ಕೆ ಆತ ಮೋಹಸಿನ್ ಖಾನ್ ಎಂದಿದ್ದಾನೆ.
ಅದಕ್ಕೆ ಪ್ರತಿಕ್ರಿಯಿಸಿದ ನಾಜಿಯಾ, ಅದಕ್ಕೆ ತಿಲಕ ಹಚ್ಚೋದನ್ನ ಬ್ಯಾನ್ ಮಾಡಿದ್ದೀರಾ ಎಂದು ಖಾರವಾಗಿಯೇ ಪ್ರಶ್ನಿಸಿದ್ದಾರೆ. ಅಲ್ಲದೇ ನಿಮ್ಮ ಆ್ಯಡ್‌ನಲ್ಲಿ ಜನಿವಾರ, ತಿಲಕ, ಕೈಗೆ ಕಟ್ಟುವ ದಾರ, ರುದ್ರಾಕ್ಷಿ ಇತ್ಯಾದಿಗಳನ್ನು ಧರಿಸುವಂತಿಲ್ಲ. ಹಿಜಬ್ ಧರಿಸಬಹುದು ಎಂದು ಹೇಳಲಾಗಿದೆ. ಅಂದ್ರೆ ಇಲ್ಲೇನು ಷರಿಯಾ ಕಾನೂನು ತರಲು ಪ್ರಯತ್ನಿಸುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಬಳಿಕ ಅಲ್ಲಿದ್ದ ಸಿಬ್ಬಂದಿಗಳೆಲ್ಲಾ ತಿಲಕ ಹಚ್ಚಿದ್ದಾರೆ.
In Mumbai Lenskart store, activist Nazia Ilahi Khan applies tilak & ties kalava on Hindu staff, confronts Muslim manager Mohsin Khan over alleged ban on Hindu symbols while allowing hijab. ‘Sharia in India?’ she asks 😭”
pic.twitter.com/Qn7xDYp4pD— Ghar Ke Kalesh (@gharkekalesh) April 20, 2026
मोहसिन खान लेंसकार्ट के शोरूम में मैनेजर इसलिए नाजिया इलाही खान को दिक्क़त है,
इसको इस बात से दिक्कत है कि मुस्लिम कैसे भारत में काम कर रहे है , ये महिला चाहती है कि मुस्लिम सिर्फ पंचर बनाये ,
नाजिया इलाही तुम्हारा काम सिर्फ नफरत फैलाना है, pic.twitter.com/mHodoJTf0S
— Nargis Bano (@Nargis_Bano78) April 20, 2026




