ಹುಬ್ಬಳ್ಳಿಯಲ್ಲಿ ಪಾರ್ಕ್ ಮಾಡಿದ್ದ ಕಾರ್‌ನಲ್ಲಿ ಮತ್ತು ಹಾಸನದ ಮನೆಯೊಂದರ ಫ್ಯಾನ್‌ ಮೇಲೆ ನಾಗರ ಪ್ರತ್ಯಕ್ಷ

Hubli News: ಹುಬ್ಬಳ್ಳಿ: ಹುಬ್ಬಳ್ಳಿಯ ತುಳಜಾಭವಾನಿ ಸರ್ಕಲ್ ಬಳಿ , ಕಾರಿನ ಸೈಲೈನ್ಸರ್‌ ಪೈಪ್‌ನಲ್ಲಿ
ನಾಗರ ಹಾವು ಬಂದಿರುವ ದೃಶ್ಯ ಕಂಡು ಬಂದಿದೆ.

ತುಳಜಾಭವಾನಿ ಸರ್ಕಲ್ ಬಳಿ ಮಾರುತಿ ಸುಜುಕಿ ವೆಗನಾರ್ ಕಾರನ್ನು ಮಾಲೀಕರು ನಿಲ್ಲಿಸಿ ಮಾರ್ಕೆಟ್‌ಗೆಂದು ಹೋಗಿದ್ದರು. ಆದ್ರೆ ಬಂದು ನೋಡಿದಾಗ ನಾಗರ ಹಾವು ಕಾರಿನ ಸೈಲೈನ್ಸರ್ ಪೈಪ್‌ನಲ್ಲಿ ಕಂಡು ಬಂದಿದೆ. ಕೂಡಲೆ ಹಾವು ರಕ್ಷಕನನ್ನು ಕರೆಯಿಸಿ ಒಳಗೆ ಸಿಲುಕಿಕೊಂಡಿದ್ದ ಹಾವನ್ನು ಹೊರಗೆ ತೆಗೆದು ಕಾಡಿಗೆ ಬಿಟ್ಟರು. ಮಾಲೀಕ ನಿಟ್ಟುಸಿರು ಬಿಟ್ಟರು.

ಇನ್ನೊಂದೆಡೆ ಹಾಸನದ ಸಕಲೇಶಪುರ ಹಳೆಯ ಸಾಂತ್ವೇರಿಯ ಮನೆಯ ಹಾಲ್‌ನಲ್ಲಿ ಅಳವಡಿಸಿದ್ದ ಫ್ಯಾನ್‌ನಲ್ಲಿ ನಾಗರಹಾವು ಸುತ್ತಿಕೊಂಡಿದೆ. ಅದನ್ನು ಕಂಡು ಎಚ್ಚೆತ್ತುಕೊಂಡ ಮನೆಯವರು, ತಕ್ಷಣ ಉರಗ ತಜ್ಞ ದಸ್ತಗೀರ್ ಅವರಿಗೆ ಕರೆ ಮಾಡಿ ಕರೆಸಿದ್ದಾರೆ. ಉರಗ ತಜ್ಞರು, ಹಾವು ಹಿಡಿದು ದೋಣಿಗಲ್ ಬಳಿಯ ದಡ್ಡ ಸಂರಕ್ಷಣಾ ಅರಣ್ಯಕ್ಕೆ ಬಿಟ್ಟಿದ್ದು, ಕುಟುಂಬಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

ಅಕೌಂಟೆಂಟ್ ಸೂಪರಿಡೆಂಟ್ ಸಾವು: ಕಾಂಗ್ರೆಸ್ ಸಚಿವರನ್ನು ವಜಾಗೊಳಿಸಬೇಕೆಂದು ಬಿಜೆಪಿ ಆಗ್ರಹ

Political News: ಸಚಿವ ನಾಗೇಂದ್ರ ವಜಾಕ್ಕೆ ಪಿ.ರಾಜೀವ್ ಒತ್ತಾಯ

ಅಕ್ರಮ ಹೊಟೇಲ್ ವಾರದೊಳಗೆ ತೆರವುಗೊಳಿಸಬೇಕು: ಯಶ್ಪಾಲ್ ಸುವರ್ಣ ಆಗ್ರಹ

About The Author