Wednesday, July 2, 2025

Latest Posts

ಮನೆಯಲ್ಲಿ ಪ್ರತಿಷ್ಠಾಪಿಸಿದ ರಜನಿ ವಿಗ್ರಹಕ್ಕೆ ಪೂಜೆ ಸಲ್ಲಿಸಿ, ಪೊಂಗಲ್ ಆಚರಿಸಿದ ಅಭಿಮಾನಿ..

- Advertisement -

Movie News: ಭಾರತದಲ್ಲಿ ನೀವು ಚಿತ್ರ ವಿಚಿತ್ರ ಅಭಿಮಾನಿಗಳನ್ನು ಕಾಣಬಹುದು. ಕೆಲವರು ತಮ್ಮ ನೆಚ್ಚಿನ ನಟನಿಗಾಗಿ ದೇವಸ್ಥಾನ ಕಟ್ಟಿಸುತ್ತಾರೆ. ಅವರ ಮೂರ್ತಿಯನ್ನೇ ಸ್ಥಾಪಿಸುತ್ತಾರೆ. ಮತ್ತೆ ಕೆಲವರು ನೆಚ್ಚಿನ ನಟನಿಗಾಗಿ ಉಪವಾಸ ಮಾಡುತ್ತಾರೆ. ಹುಟ್ಟುಹಬ್ಬದ ದಿನ ತಾವು ಅನ್ನ ದಾನ, ರಕ್ತದಾನ ಶಿಬಿರ ಮಾಡುತ್ತಾರೆ. ಹೀಗೆ ಹಲವು ರೀತಿಯಲ್ಲಿ ತಮ್ಮ ಅಭಿಮಾನವನ್ನು ತೋರಿಸುತ್ತಾರೆ.

ಅದೇ ರೀತಿ ರಜನಿಕಾಂತ್ ವಿಗ್ರಹಕ್ಕೆ ಪೂಜೆ ಸಲ್ಲಿಸಿ, ಅಭಿಮಾನಿಯೊಬ್ಬ ಸಂಕ್ರಾಂತಿ ಹಬ್ಬವನ್ನು ಆಚರಿಸಿದ್ದಾನೆ. ರಜನಿಕಾಂತ್‌ಗೆ ಯಾವ ರೀತಿಯ ಫ್ಯಾನ್ ಫಾಲೋವರ್ಸ್ ಇದ್ದಾರೆ ಅನ್ನೋದು ನಾವು ವಿವರಿಸಬೇಕಿಲ್ಲ. ಅವರ ಒಂದು ಸಿನಿಮಾ ರಿಲೀಸ್ ಆಗಿಲಿದೆ ಎಂದರೆ, ವಾರಕ್ಕೂ ಮುಂಚೆಯೇ ಹೌಸ್ ಫುಲ್ ಆಗಿ ಬಿಟ್ಟಿರತ್ತೆ. ನಾಳೆ ಬೆಳಿಗ್ಗೆ 10 ಗಂಟೆಗೆ ಸಿನಿಮಾ ರಿಲೀಸ್ ಅಂದ್ರೆ, ಅವರ ಫ್ಯಾನ್ಸ್ ಬೆಳ್ಳಂ ಬೆಳಿಗ್ಗೆ 4 ಗಂಟೆಗೆ ಥಿಯೇಟರ್ ಮುಂದೆ ಹಾಜರಿರುತ್ತಾರೆ. ಅಂಥ ಅಭಿಮಾನಿಗಳು ಸೂಪರ್ ಸ್ಟಾರ್ ರಜನಿಕಾಂತ್‌ ಅವರಿಗೆ ಇದ್ದಾರೆ.

ಅದೇ ರೀತಿ ತಮಿಳು ನಾಡಿನ ರಜನಿ ಅಭಿಮಾನಿಯೊಬ್ಬ, ತಮ್ಮ ಮನೆಯಲ್ಲಿ ಪ್ರತಿಷ್ಠಾಪಿಸಿರುವ ರಜನಿಕಾಂತ್ ವಿಗ್ರಹಕ್ಕೆ ಪೂಜೆ ಸಲ್ಲಿಸಿ, ಸಂಕ್ರಾಂತಿ ಹಬ್ಬವನ್ನು ಸೆಲೆಬ್ರೇಟ್ ಮಾಡಿದ್ದಾನೆ. ತಮಿಳುನಾಡಿದ ಮಧುರೈನ ಕಾರ್ತಿಕ್ ಎಂಬ ಅಭಿಮಾನಿ, ಮನೆಯಲ್ಲೇ ರಜನಿಗಾಗಿ ಪುಟ್ಟ ದೇವಸ್ಥಾನ ನಿರ್ಮಿಸಿ, ಅದರಲ್ಲಿ ಶೇಷನ ನೆರಳಿನಲ್ಲಿ ರಜನಿ ಇರುವಂತೆ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ.  ತಲೈವಾ ವಿಗ್ರಹಕ್ಕೆ,ಅರಿಶಿನ, ಹಾಲಿನ ಅಭಿಷೇಕ ಮಾಡಿ, ಹೂವು ಹಾಕಿ, ಹಣ್ಣು ನೈವೇದ್ಯ ಮಾಡಿ, ಪೂಜೆ ಸಲ್ಲಿಸಲಾಗಿದೆ.

ಖಾಸಗಿ ವೀಡಿಯೋ ಲೀಕ್ ಪ್ರಕರಣ: ನಟಿ ರಾಖಿ ಸಾವಂತ್ ಜಾಮೀನು ಅರ್ಜಿ ರದ್ದು..

ತೆಲುಗು ಇಂಡಸ್ಟ್ರಿಗೆ ಕಾಲಿಟ್ಟ ಕಾಂತಾರ ಬೆಡಗಿ ಸಪ್ತಮಿ..

ಕಂಗನಾ ಜೊತೆ ಕಾಣಿಸಿಕೊಂಡ ವ್ಯಕ್ತಿ ಯಾರು..? ಪ್ರಶ್ನಿಸುತ್ತಿದ್ದಾರೆ ನೆಟ್ಟಿಗರು..

- Advertisement -

Latest Posts

Don't Miss