Saturday, July 27, 2024

Latest Posts

ನಟಿ ಆಲಿಯಾ ಭಟ್‌ ವಿರುದ್ಧ ರೊಚ್ಚಿಗೆದ್ದ ನೆಟ್ಟಿಗರು: ಭಾರತ ಬಿಟ್ಟು ತೊಲಗು ಎಂದು ಆಕ್ರೋಶ

- Advertisement -

Bollywood News: ಕೆಲ ದಿನಗಳ ಹಿಂದಷ್ಟೇ ಚುನಾವಮೆ ನಡೆದಿದ್ದು, ಬಾಲಿವುಡ್‌ನ ಅನೇಕ ನಟ ನಟಿಯರು ಬಂದು ಓಟ್ ಹಾಕಿದ್ದಾರೆ. ಅಕ್ಷಯ್ ಕುಮಾರ್, ರಣ್ವೀರ್ ಸಿಂಗ್, ದೀಪಿಕಾ ಪಡುಕೋಣೆ ಸೇರಿ ಹಲವು ಬಾಲಿವುಡ್ ಸೆಲೆಬ್ರಿಟಿಗಳು ಪ್ರಜಾಪ್ರಭುತ್ವದ ಹಕ್ಕನ್ನು ಚಲಾಯಿಸಿದ್ದಾರೆ.

ಆಲಿಯಾ ಭಟ್ ಪತಿ ರಣ್‌ಬೀರ್ ಕಪೂರ್ ಕೂಡ ಓಟ್ ಹಾಕಿದ್ದಾರೆ. ಆದರೆ ಆಲಿಯಾ ಭಟ್ ಮಾತ್ರ ಓಟ್ ಮಾಡಲು ಬಂದಿಲ್ಲ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಲಿಯಾ ಟ್ರೋಲ್ ಆಗಿದ್ದು, ಆಕೆ ಭಾರತೀಯ ಪ್ರಜೆಯಲ್ಲ, ಬ್ರಿಟನ್ ನಾಗರಿಕತ್ವ ಹೊಂದಿದ್ದಾರೆ. ಹಾಗಾಗಿ ಅವರಿಗೆ ಓಟ್ ಹಾಕುವ ಹಕ್ಕಿಲ್ಲವೆಂದು ಟೀಕಿಸಿದ್ದಾರೆ.

ಆಕೆಗೆ ಮೊದಲು ಭಾರತದ ಪೌರತ್ವ ಪಡೆದುಕೊಳ್ಳಲಿ ಹೇಳಿ, ಇಲ್ಲವಾದರೆ ಭಾರತ ಬಿಟ್ಟು ತೊಲಗಲಿ ಎಂದು ಕೆಲವರು ಆಕ್ರೋಶ ಹೊರಹಾಕಿದ್ದಾರೆ. ನಟ ಅಕ್ಷಯ್ ಕುಮಾರ್‌ ಬಗ್ಗೆ ಕೂಡ ಇದೇ ರೀತಿ ಟೀಕೆ ಕೇಳಿ ಬಂದಿತ್ತು, ಅಕ್ಷಯ್ ಈ ಮೊದಲು ಕೆನಡಾದಲ್ಲಿ ಕೆಲಸ ಮಾಡುತ್ತಿದ್ದ ಕಾರಣ, ಅವರು ಕೆನಡಾ ಪೌರತ್ವ ಹೊಂದಿದ್ದರು. ಈ ಕಾರಣಕ್ಕೆ ಅಕ್ಷಯ್ ಮೊದಲು ಭಾರತೀಯ ಪೌರತ್ವ ಪಡೆಯಲಿ ಎಂದು ಹಲವರು ಆಗ್ರಹಿಸಿದ್ದರು.

ಅಕ್ಷಯ್ ಇದೀಗ ಭಾರತೀಯ ಪೌರತ್ವ ಪಡೆದಿದ್ದು, ಈ ಬಾರಿ ಮೊದಲ ಬಾರಿ ಲೋಕಸಭಾ ಚುನಾವಣೆಗೆ ಓಟ್ ಮಾಡಿದ್ದಾರೆ. ಆಲಿಯಾ ತಾಯಿ ಬ್ರಿಟನ್ ವಾಸಿಯಾಗಿದ್ದು, ಆಲಿಯಾ ಬ್ರಿಟನ್‌ನಲ್ಲೇ ಹುಟ್ಟಿ ಬೆಳೆದಿದ್ದಳು. ಅವರ ಅಜ್ಜಿ ಕೂಡ ಇಂಗ್ಲೆಂಡ್ ನವರಾಗಿದ್ದರು. ಆದರೆ ಆಲೀಯಾ ಇಷ್ಟು ವರ್ಷದಿಂದ ಭಾರತದಲ್ಲಿ ಇದ್ದರೂ, ಆಕೆ ಭಾರತದ ಪೌರತ್ವ ಪಡೆಯದಿದ್ದು ಮಾತ್ರ ನಾಚಿಕೆಗೇಡಿನ ವಿಷಯ.

ಮಮತಾ ಬ್ಯಾನರ್ಜಿ ಬಗ್ಗೆ ವಿವಾದಾತ್ಮಕ ಹೇಳಿಕೆ: ಬಿಜೆಪಿ ಅಭ್ಯರ್ಥಿಗೆ 1 ದಿನದ ಪ್ರಚಾರ ನಿಷೇಧ

Baby Death: ಮನೆಯಲ್ಲಿ ಒಬ್ಬಂಟಿಯಾಗಿ ಮಗುವನ್ನು ಬಿಟ್ಟು ಹೋದ ಪೋಷಕರು: ಮಗು ಸಾವು

National News: ಎಮಿರೇಟ್ಸ್ ವಿಮಾನ ಡಿಕ್ಕಿ: 35ಕ್ಕೂ ಹೆಚ್ಚು ರಾಜಹಂಸ ಪಕ್ಷಿಗಳ ಸಾವು..?

- Advertisement -

Latest Posts

Don't Miss