Saturday, July 27, 2024

Latest Posts

ಮಗುವಿನ ಲಿಂಗ ಪತ್ತೆಯ ಖುಷಿಗೆ ಪಾರ್ಟಿ ಆಚರಿಸಿದ ಯೂಟ್ಯೂಬರ್‌ಗೆ ಆರೋಗ್ಯ ಇಲಾಖೆಯಿಂದ ನೊಟೀಸ್

- Advertisement -

National News: ತಮಿಳಿನ ಖ್ಯಾತ ಯುಟ್ಯೂಬರ್ ಇರ್ಫಾನ್ ಎಂಬಾತ, ತನ್ನ ಗರ್ಭಿಣಿ ಪತ್ನಿಯನ್ನು ದುಬೈಗೆ ಕರೆದುಕೊಂಡು ಹೋಗಿ, ಅಲ್ಲಿ ಲಿಂಗ ಪರೀಕ್ಷೆ ಮಾಡಿಸಿದ್ದಲ್ಲದೇ, ಭಾರತಕ್ಕೆ ಬಂದು ಜೆಂಡರ್ ರಿವೀಲ್ ಪಾರ್ಟಿ ಕೂಡ ಮಾಡಿದ್ದಾನೆ.

ಇದೀಗ ಈ ಪಾರ್ಟಿ ಮಜಾ ಕುತ್ತಿಗೆಗೆ ಬಂದಿದ್ದು, ಆರೋಗ್ಯ ಇಲಾಖೆ ಈತನಿಗೆ ನೊಟೀಸ್ ನೀಡಿದೆ. ವಿದೇಶಗಳಲ್ಲಿ ಹೆಣ್ಣು ಹುಟ್ಟಿದರೆ, ಭ್ರೂಣ ಹತ್ಯೆ ಮಾಡುವುದಿಲ್ಲ. ಹಾಗಾಗಿ ವಿದೇಶದಲ್ಲಿ ಲಿಂಗ ಪರೀಕ್ಷೆಗೆ ಮುಕ್ತ ಅವಕಾಶವಿದೆ. ಆದರೆ ಭಾರತದಲ್ಲಿ ಹೆಣ್ಣು ಭ್ರೂಣ ಹತ್ಯೆ ಹೆಚ್ಚು ಇದ್ದು, ಈ ಕಾರಣಕ್ಕಾಗಿ ಲಿಂಗ ಪರೀಕ್ಷೆಗೆ ಅವಕಾಶವಿಲ್ಲ. ಹಾಗೇನಾದರೂ ಲಿಂಗ ಪರೀಕ್ಷೆ ಮಾಡಿಸಿಕೊಂಡರೆ, ಪತಿ-ಪತ್ನಿ ಸೇರಿ, ಪತಿಯ ಕುಟುಂಬಸ್ಥರಿಗೆಲ್ಲ ಜೈಲು ಶಿಕ್ಷೆ ನೀಡಲಾಗುತ್ತದೆ.

ಹಾಗಾಗಿ ಇರ್ಫಾನ್ ದುಬೈಗೆ ಹೋಗಿ, ಜೆಂಡರ್ ರಿವೀಲ್ ಮಾಡಿ, ಇಲ್ಲಿ ಬಂದು ಪಾರ್ಟಿ ಮಾಡಿದ್ದ. ಅಲ್ಲದೇ, ಅದನ್ನು ವ್ಲಾಗ್ ಮಾಡಿ, ಯುಟ್ಯೂಬ್‌ಗೆ ಬಿಟ್ಟಿದ್ದ. ಹೀಗಾಗಿ ಈ ವೀಡಿಯೋ ತೆಗೆದು ಹಾಕುವಂತೆ, ಆರೋಗ್ಯ ಇಲಾಖೆ ಸೈಬರ್ ಕ್ರೈಮ್ ಅವರಿಗೆ ನೊಟೀಸ್ ನೀಡಿದ್ದು, ಈಈತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಶಿಫಾರಸು ಮಾಡಲಾಗಿದೆ.

ಮಮತಾ ಬ್ಯಾನರ್ಜಿ ಬಗ್ಗೆ ವಿವಾದಾತ್ಮಕ ಹೇಳಿಕೆ: ಬಿಜೆಪಿ ಅಭ್ಯರ್ಥಿಗೆ 1 ದಿನದ ಪ್ರಚಾರ ನಿಷೇಧ

Baby Death: ಮನೆಯಲ್ಲಿ ಒಬ್ಬಂಟಿಯಾಗಿ ಮಗುವನ್ನು ಬಿಟ್ಟು ಹೋದ ಪೋಷಕರು: ಮಗು ಸಾವು

National News: ಎಮಿರೇಟ್ಸ್ ವಿಮಾನ ಡಿಕ್ಕಿ: 35ಕ್ಕೂ ಹೆಚ್ಚು ರಾಜಹಂಸ ಪಕ್ಷಿಗಳ ಸಾವು..?

- Advertisement -

Latest Posts

Don't Miss