Hubballi News: ಹುಬ್ಬಳ್ಳಿ: ಕೈಯಲ್ಲಿ ಗರುಡವಿದೆ ಎಂದು ಕುಡಿದ ಮತ್ತಿನಲ್ಲಿ ಹಾವು ಹಿಡಿಯಲು ಹೋದವನಿಗೆ 4 ಬಾರಿ ಹಾವು ಕಚ್ಚಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಗದಗ ಜಿಲ್ಲೆಯ ನರಗುಂದ ತಾಲೂಕಿನ ಹಿರೇಕೊಪ್ಪ ಗ್ರಾಮದ ನಿವಾಸಿ ಸಿದ್ದಪ್ಪ ಬಳಗಾನೂರು ಎಂಬುವವರಿಗೆ ಹಾವು ಕಚ್ಚಿದ್ದು, ಇವರು ಕುಡಿದ ಮತ್ತಿನಲ್ಲಿ ಹಾವು ಹಿಡಿಯಲು ಹೋಗಿದ್ದಾರೆ. ಒಂದು ಬಾರಿ ಹಾವು ಕೈತಪ್ಪಿ ಹೋಗಿದೆ. ಆದರೂ ಬಿಡದೇ ಅದನ್ನು ಹಿಡಿದಿದ್ದಾರೆ. ಅಕ್ಕಪಕ್ಕದಲ್ಲಿದ್ದ ಜನ, ಹಾವು ಹಿಡಯಬೇಡ ಕಚ್ಚುತ್ತದೆ ಎಂದು ಬುದ್ಧಿ ಮಾತು ಹೇಳಿದರೂ ಕೂಡ, ನನ್ನ ಕೈಯಲ್ಲಿ ಗರುಡರೇಖೆ ಇದೆ. ನಾನು ಹಾವು ಹಿಡಿದರೆ ಏನೂ ಆಗುವುದಿಲ್ಲ ಎಂದು ಉದ್ಧಟತನದಿಂದ ಹಾವು ಹಿಡಿದಿದ್ದಾರೆ.
ಈ ವೇಳೆ 4 ಬಾರಿ ಈ ವ್ಯಕ್ತಿಯ ಕೈಗೆ ಹಾವು ಕಚ್ಚಿದೆ. ಯಾವುದೇ ಸುರಕ್ಷಿತ ಪರಿಕರಗಳು ಇಲ್ಲದೆ ಹಾವು ಹಿಡಿಯಲು ಹೋಗಿ ಯಡವಟ್ಟು ಮಾಡಿಕೊಂಡಿದ್ದು, ಇವರನ್ನು ಕೂಡಲೇ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ವಿಷ ಏರಿ ಸಾವನ್ನಪ್ಪಿದ್ದಾನೆಂದು ಗ್ರಾಮದಲ್ಲಿ ಸುದ್ದಿಯಾಗಿದೆ. ಆದರೆ, ಅಂತ್ಯಕ್ರಿಯೆ ಮಾಡಲು ಸಿದ್ದತೆ ಮಾಡಿಕೊಳ್ಳುವಾಗ ಸಿದ್ದಪ್ಪ ಎದ್ದು ಕುಳಿತಿದ್ದಾನೆ. ಸಿದ್ದಪ್ಪನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಪುಣ್ಯಾತ್ಮ ಸಾವಿನ ದವಡೆಯಿಂದ ಪಾರಾಗಿದ್ದಾನೆ.
ಸಿದ್ದರಾಮಯ್ಯ ಕೂಡ ಲುಂಗಿ ಲೀಡರ್ ಅನ್ನೋದನ್ನ ಮರೀಬೇಡಿ: ಕಾಂಗ್ರೆಸ್ ಪಂಚೆ ಟ್ವೀಟ್‌ಗೆ ಸಚಿವ ಪ್ರಲ್ಹಾದ ಜೋಶಿ ತಿರುಗೇಟು
ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಹುಡುಕಾಟ: ಬಿಜೆಪಿಗೆ ಮತ್ತೊಂದು ಸವಾಲು…!
ಸುಳ್ಳು ಹಾಗೂ ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳು: ಕೇಂದ್ರ ಸಚಿವ ಪ್ರಲ್ಹಾದ ಜೋಶಿ