Friday, April 4, 2025

Latest Posts

ಪಕ್ಕದ ಮನೆಯಿಂದ ಬರುವ ಹೆಗ್ಗಣಗಳ ವಿರುದ್ಧ ಪೊಲೀಸರಿಗೆ ದೂರು ನೀಡಿದ ವ್ಯಕ್ತಿ

- Advertisement -

Hubli News: ಹುಬ್ಬಳ್ಳಿ : ಹೆಗ್ಗಣಗಳು ತನಗೆ ಕಾಟ ಕೊಡುತ್ತಿದೆ ಎಂದು ವ್ಯಕ್ತಿಯೋರ್ವ, ಹೆಗ್ಗಣಗಳಿಂದ ಮುಕ್ತಿ ನೀಡುವಂತೆ ಪೊಲೀಸರಿಗೆ ಮನವಿ ಮಾಡಿದ್ದಾನೆ.

ಹುಬ್ಬಳ್ಳಿಯ ಆನಂದ್ ನಗರದಲ್ಲಿ ಈ ಘಟನೆ ನಡೆದಿದ್ದು, ಅನಿಲ್ ಮುಂಡರಗಿ ಎಂಬಾತ, ಪಕ್ಕದ ಮನೆಯ ಹೆಗ್ಗಣಗಳು ನಮ್ಮ ಮನೆಗೆ ಬಂದು, ನಮ್ಮ ನೆಮ್ಮದಿ ಹಾಳು ಮಾಡಿದೆ ಎಂದು ಹಳೆ ಹುಬ್ಬಳ್ಳಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪಕ್ಕದ ಮನೆಯ ಹೆಗ್ಗಣಗಳು ಗ್ಯಾಸ್ ಪೈಪ್ ಲೈನ್ ಕಟ್ ಮಾಡಿವೆ. ಅಲ್ಲದೆ ಸಿಂಕ್ ಪೈಪ್ ಲೈನ್ ಕತ್ತರಿಸಿವೆ. ಎಲ್ಲೆಂದರಲ್ಲಿ ನೆಲ ಅಗೆದು ಮಣ್ಣು ಹೊರ ಹಾಕ್ತಿವೆ. ಮನೆಯಲ್ಲಿ ಎಲ್ಲೆಂದರಲ್ಲಿ ರಂಧ್ರಗಳು ಬಿದ್ದಿವೆ. 15 ರಿಂದ 20 ಹೆಗ್ಗಣಗಳಿಂದ ಈ ಕೃತ್ಯ ನಡೆದಿದೆ. ಪಕ್ಕದ ಮನೆಯವರಿಗೆ ಸಾಕಷ್ಟು ಬಾರಿ ಹೇಳಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ನೀವೇ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಬೇಕೆಂದು ದೂರು ನೀಡಿದ್ದಾರೆ.

ಸಿಲಿಂಡರ್ ಸೋರಿಕೆಯಾಗಿ ಅನಾಹುತವಾದ್ರೆ ಯಾರು ಹೊಣೆ..? ಎಂದು ಅನಿಲ್ ಪ್ರಶ್ನಿಸಿದ್ದಾರೆ. ಹೀಗಾಗಿ ಪೊಲೀಸರು ಅನಿಲ್ ಅವರ ಪಕ್ಕದ ಮನೆಯವರನ್ನು ಕರೆಸಿ, ಈ ಬಗ್ಗೆ ವಾರ್ನ್ ಮಾಡಿದ್ದಾರೆ. ಪಕ್ಕದ ಮನೆಯವರಾದ ಸಿದ್ದು ಎಂಬುವರಿಂದ ಪೊಲೀಸರು ಮುಚ್ಚಳಿಕೆ ಬರೆಸಿಕೊಂಡಿದ್ದಾರೆ.  ನಾಲ್ಕೈದು ದಿನಗಳಲ್ಲಿ ಹೆಗ್ಗಣಗಳ ನಿಯಣಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ಅನಿಲ್ ಅವರ ಪಕ್ಕದ ಮನೆ ಸದ್ಯ ಖಾಲಿಯಾಗಿದ್ದು, ಅಲ್ಲಿ ಯಾರೂ ಇಲ್ಲ. ಹೀಗಾಗಿಯೇ ಅಲ್ಲಿ ಹೆಗ್ಗಣಗಳು ಬೀಡುಬಿಟ್ಟಿದೆ. ಇನ್ನು ತಾನು ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳದೇ ಇದ್ದಲ್ಲಿ,ಮತ್ತೆ ಬಂದು ತಾಾನು ದೂರು ನೀಡುವುದಾಗಿ ಅನಿಲ್ ಹೇಳಿದ್ದಾರೆ.

ಅಕೌಂಟೆಂಟ್ ಸೂಪರಿಡೆಂಟ್ ಸಾವು: ಕಾಂಗ್ರೆಸ್ ಸಚಿವರನ್ನು ವಜಾಗೊಳಿಸಬೇಕೆಂದು ಬಿಜೆಪಿ ಆಗ್ರಹ

Political News: ಸಚಿವ ನಾಗೇಂದ್ರ ವಜಾಕ್ಕೆ ಪಿ.ರಾಜೀವ್ ಒತ್ತಾಯ

ಅಕ್ರಮ ಹೊಟೇಲ್ ವಾರದೊಳಗೆ ತೆರವುಗೊಳಿಸಬೇಕು: ಯಶ್ಪಾಲ್ ಸುವರ್ಣ ಆಗ್ರಹ

- Advertisement -

Latest Posts

Don't Miss