- Advertisement -
National News: ಬಿಹಾರದ ಸಿದ್ಧೇಶ್ವರನಾಥ ಮಂದಿರದಲ್ಲಿ ಕಾಲ್ತುಳಿತಕ್ಕೆ ಒಳಗಾಗಿ 7 ಮಂದಿ ಸಾವನ್ನಪ್ಪಿದ್ದು, ಹಲವರಿಗೆ ಗಂಭೀರ ಗಾಯವಾಗಿದೆ.
ಸಿದ್ಧೇಶ್ವರನೆಂದರೆ ಶಿವನ ದೇವಸ್ಥಾನವಾಗಿದ್ದು, ಶ್ರಾವಣ ಮಾಸದಲ್ಲಿ ಶಿವನಿಗೆ ನೀರೆರೆದರೆ, ಸಕಲ ಪಾಪಗಳು ನಾಶವಾಗುತ್ತದೆ ಅನ್ನೋ ನಂಬಿಕೆ ಇದೆ. ಅದೇ ಕಾರಣಕ್ಕೆ ಬಿಹಾರದ ಭಕ್ತರು ಕೂಡ, ಶ್ರಾವಣದಲ್ಲಿ ಸಿದ್ಧೇಶ್ವರನಿಗೆ ನೀರೆರೆಯಲು ಸಾವಿರಾರು ಸಂಖ್ಯೆಯಲ್ಲಿ ಬಂದಿದ್ದರು. ಆದರೆ, ತುಂಬಾ ಜನ ಈ ಸ್ಥಳಕ್ಕೆ ಒಂದೇ ಸಮಯಕ್ಕೆ ಬಂದ ಕಾರಣಕ್ಕೆ, ಕಾಲ್ತುಳಿತ ಸಂಭವಿಸಿ, ಮೂವರು ಮಹಿಳೆಯರು ಸೇರಿ ಒಟ್ಟು 7 ಜನರು ಮೃತಪಟ್ಟಿದ್ದಾರೆ.
ರಾಬರ್ ಬೆಟ್ಟ ಹತ್ತುವಾಗ ಕಾಲ್ತುಳಿತ ಸಂಭವಿಸಿತ್ತು, ಪೊಲೀಸರು ಜನರನ್ನು ಕಂಟ್ರೋಲ್ ಮಾಡುವ ಹೊತ್ತಿಗಾಗಲೇ ಏಳು ಜನರು ಮೃತಪಟ್ಟು, ಹಲವರಿಗೆ ಗಂಭೀರ ಗಾಯವಾಗಿತ್ತು. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಟಿಸಲಾಗುತ್ತಿದೆ.
- Advertisement -