Saturday, April 19, 2025

Latest Posts

ಹೊಂಚು ಹಾಕಿ ವೃದ್ಧೆಯ ಕೊರಳಿನಲ್ಲಿದ್ದ ಚಿನ್ನದ ಸರವನ್ನು ಅಪಹರಿಸಿದ ಚೋರ

- Advertisement -

Hassan News: ಹಾಸನ : ಸಂಜೆ ತರಕಾರಿ ತರಲು ಹೋಗಿದ್ದ ವೃದ್ಧೆಯನ್ನು ಹಿಂಬಾಲಿಸಿದ ಯುವಕ, ಹೊಂಚು ಹಾಕಿ, ಆಕೆಯ ಚಿನ್ನದ ಸರವನ್ನು ಕದ್ದಿದ್ದಾನೆ.

ಹಾಸನ ಜಿಲ್ಲೆ, ಅರಸೀಕೆರೆ ಪಟ್ಟಣದ, ರಾಷ್ಟ್ರೀಯ ಹೆದ್ದಾರಿ 206 ಟಿಎಚ್ ರಸ್ತೆಗೆ ಹೊಂದಿಕೊಂಡಿರುವ ಯೂನಿಯನ್ ಬ್ಯಾಂಕ್ ಪಕ್ಕದಲ್ಲಿ ಈ ಘಟನೆ ನಡೆದಿದೆ. ಸುಭದ್ರಮ್ಮ(74) ಎಂಬುವವರು ತಮ್ಮ ಚಿನ್ನದ ಸರವನ್ನು ಕಳೆದುಕೊಂಡವರಾಗಿದ್ದು, ಇವರು ಸಂಜೆ ವೇಳೆ ತರಕಾರಿ ತೆಗೆದುಕೊಂಡು ಮನೆಗೆ ಹೋಗುತ್ತಿದ್ದರು. ಈ ವೇಳೆ ಎರಡೂ ಕೈಯಲ್ಲಿ ತರಕಾರಿ ಚೀಲಗಳಿದ್ದವು. ಇದನ್ನು ಗಮನಿಸಿದ್ದ ಕಳ್ಳ, ವೃದ್ಧೆಯನ್ನು ಹಿಂಬಾಲಿಸಿಕೊಂಡು ಹೋಗಿ, ಸರ ಕದ್ದು ಓಡಿದ್ದಾನೆ.

60 ಗ್ರಾಂ ಎರಡು ಎಳೆ ಚಿನ್ನದ ಸರದಲ್ಲಿ ಒಂದು ಎಳೆ 30 ಗ್ರಾಂ ಚಿನ್ನದ ಕಿತ್ತುಕೊಂಡು ಕಳ್ಳ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಅರಸೀಕೆರೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಶತಮಾನದಷ್ಟು ಹಳೆಯದಾದ ಹುಣಸೂರು ಸೇತುವೆ ಶಿಥಿಲ, ನಿಷೇಧವಿದ್ದರೂ ಸಂಚರಿಸುವ ಭಾರಿ ವಾಹನಗಳು

ಅಕ್ಕಿ ಬರುವವರೆಗೂ 5 ಕೆಜಿ ಅಕ್ಕಿ ಬದಲಿಗೆ ಹಣ ನೀಡಲು ರಾಜ್ಯ ಸರ್ಕಾರ ನಿರ್ಧಾರ

ತಾಯಿಯ ಟ್ರಿಪ್ ಶೋಕಿಗೆ ಬಲಿಯಾದ ಒಂದೂವರೆ ವರ್ಷದ ಬಾಲಕಿ

- Advertisement -

Latest Posts

Don't Miss