Wednesday, June 12, 2024

Latest Posts

ಕೇರಳದಲ್ಲಿ ಬಿರಿಯಾನಿ ತಿಂದು ಓರ್ವ ಮಹಿಳೆ ಸಾವು, 178 ಮಂದಿ ಆಸ್ಪತ್ರೆಗೆ ದಾಖಲು

- Advertisement -

National News: ಸಾವು ಹೇಗೆ ಬೇಕಾದರೂ ಸಂಭವಿಸಬಹುದು ಎಂಬುದಕ್ಕೆ ನಾವು ಈಗಾಗಲೇ ನಿಮಗೆ ಹಲವು ಉದಾಹರಣೆಗಳನ್ನು ಕೊಟ್ಟಿದ್ದೇವೆ. ಕೆಲ ದಿನಗಳ ಹಿಂದಷ್ಟೇ ವಿದೇಶದಲ್ಲಿ ಚಿಕನ್ ರೆಸಿಪಿ ತಿಂದು ಓರ್ವ ಯುವಕ ಸಾವನ್ನಪ್ಪಿದ್ದ. ಇನ್ನೊಂದೆಡೆ ತೆಲಂಗಾಣದಲ್ಲಿ ಮೊಟ್ಟೆ ಬಜ್ಜಿ ತಿಂದ ಓರ್ವ ವ್ಯಕ್ತಿ ಸಾವನ್ನಪ್ಪಿದ್ದ.ಅದೇ ರೀತಿ ಇಂದು ಬಿರಿಯಾನಿ ಕಿಂದು ಓರ್ವ ಮಹಿಳೆ ಸಾವನ್ನಪ್ಪಿದ್ದು, 178 ಮಂದಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕೇರಳದ ತ್ರಿಶೂರ್‌ನ ರೆಸ್ಟೋರೆಂಟ್ ಒಂದರಲ್ಲಿ ಕಝಿಮಂತಿ ಬಿರಿಯಾನಿ ಸವಿದು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಮೃತರನ್ನು ಕುಟಿಲಕ್ಕಡೌನ ಉಝೈಬಾ(56) ಎಂದು ಗುರುತಿಸಲಾಗಿದೆ. ಬಿರಿಯಾನಿ ತಿಂದ ಬಳಿಕ ಇವರಿಗೆ ಹೊಟ್ಟೆನೋವು, ವಾಂತಿ ಶುರುವಾಗಿದ್ದು, ತ್ರಿಶೂರಿನ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ, ಉಜೈಭಾ ಸಾವನ್ನಪ್ಪಿದ್ದಾರೆ.

ಇವರೊಂದಿಗೆ ಬಿರಿಯಾನಿ ಸವಿದವರು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಆರೋಗ್ಯಾಧಿಕಾರಿಗಳು ಹೊಟೇಲ್‌ಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಹೊಟೇಲ್ ಸ್ವಚ್ಛತೆ ಕಾಪಾಡದೇ, ಜನರಿಗೆ ಆಹಾರ ಸರಬರಾಜು ಮಾಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಆಹಾರ ಸಂಗ್ರಹಣೆ ಮಾಡಿ ಆರೋಗ್ಯಾಧಿಕಾರಿಗಳು ಪರೀಕ್ಷೆ ನಡೆಸುತ್ತಿದ್ದಾರೆ. ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕೌಂಟೆಂಟ್ ಸೂಪರಿಡೆಂಟ್ ಸಾವು: ಕಾಂಗ್ರೆಸ್ ಸಚಿವರನ್ನು ವಜಾಗೊಳಿಸಬೇಕೆಂದು ಬಿಜೆಪಿ ಆಗ್ರಹ

Political News: ಸಚಿವ ನಾಗೇಂದ್ರ ವಜಾಕ್ಕೆ ಪಿ.ರಾಜೀವ್ ಒತ್ತಾಯ

ಅಕ್ರಮ ಹೊಟೇಲ್ ವಾರದೊಳಗೆ ತೆರವುಗೊಳಿಸಬೇಕು: ಯಶ್ಪಾಲ್ ಸುವರ್ಣ ಆಗ್ರಹ

- Advertisement -

Latest Posts

Don't Miss