ಮದುವೆ ದಿನ ಮುದ್ದಾಗಿ ಕಾಣಲು ಸರ್ಜರಿ ಮಾಡಿಸಿಕೊಂಡಿದ್ದ ಯುವತಿ ಸಾವು

International News: ತನ್ನ ಮದುವೆ ದಿನ ಸಿಂಗಾರಗೊಂಡು, ಮುದ್ದು ಮುದ್ದಾಗಿ ಕಾಣಬೇಕಿದ್ದ ವಧು, ಸಾವಿನ ಮನೆ ಸೇರಿದ್ದಾಳೆ. ಈ ಸಾವಿಗೆ ಕಾರಣ, ಬರೀ 8 ಕೆಜಿ ತೂಕ ಇಳಿಸಿಕೊಳ್ಳಲು ಈಕೆ ಮಾಡಿಸಿಕೊಂಡ ಸರ್ಜರಿ.

ಬ್ರೆಜಿಲ್‌ನಲ್ಲಿ ಈ ಘಟನೆ ನಡೆದಿದ್ದು ಲಾರಾ ಫರ್ನಾಂಡೀಸ್ ಕೋಸ್ಟಾ(31) ಎಂಬ ಯುವತಿ ಮೃತಪಟ್ಟಿದ್ದಾಳೆ. ಇದೇ ವರ್ಷ ಸೆಪ್ಟೆಂಬರ್ 7ರಂದು ಮ್ಯಾಥ್ಯೂಸ್ ಜೊತೆ ಲಾರಾ ಮದುವೆ ಫಿಕ್ಸ್ ಆಗಿತ್ತು. ಹಾಗಾಗಿ ಮದುವೆತನಕ ತಾನು 8 ಕೆಜಿ ಸಣ್ಣವಾಗಬೇಕು ಎಂದು, ಗ್ಯಾಸ್ಟ್ರಿಕ್ ಬಲೂನ್ ಸರ್ಜರಿ ಮಾಡಿಸಿಕೊಂಡಿದ್ದಾರೆ.

ಸರ್ಜರಿಯಾಗಿ ಕೆಲ ದಿನಗಳಲ್ಲಿ ಆರೋಗ್ಯ ಹಾಳಾಗಿದೆ. ಹೀಗಾಗಿ ಮತ್ತೆ ಲಾರಾ ಆಸ್ಪತ್ರೆ ಸೇರಿದ್ದಾರೆ. ಚಿಕಿತ್ಸೆಯೂ ಪಡೆದಿದ್ದರು. ಈ ವೇಳೆ ಅವರ ಹೊಟ್ಟೆಯಲ್ಲಿದ್ದ ಗ್ಯಾಸ್ಟ್ರಿಕ್ ಬಲೂನ್ ತೆಗೆಯಲಾಗಿದೆ. ಈ ವೇಳೆ ಆಕೆಯ ಹೊಟ್ಟೆಯಲ್ಲಿ ಸಣ್ಣ ರಂಧ್ರವಾಗಿದ್ದು, ಆ ರಂಧ್ರದ ಸುತ್ತ ಸೋಂಕುಂಟಾಗಿ, ಆರೋಗ್ಯ ಹಾಳಾಗಿದೆ ಎಂದು ತಿಳಿದು ಬಂದಿದೆ. ಈ ಕಾರಣಕ್ಕೆ ಚಿಕಿತ್ಸೆ ನೀಡಿದರೂ ಕೂಡ, ಚಿಕಿತ್ಸೆ ಫಲಿಸದೇ ಲಾಾರಾ ಸಾವನ್ನಪ್ಪಿದ್ದಾಳೆ.

ಅಂಜಲಿ ಕೊಲೆ ಪ್ರಕರಣ , ಆರೋಪಿಯೊಂದಿಗೆ ಬಂದು ಸ್ಥಳ ಮಹಜರು ಮಾಡಿದ ಸಿಐಡಿ

ಧಾರವಾಡ ಕರ್ನಾಟಕ ವಿವಿಯಲ್ಲಿ ವಿದ್ಯಾರ್ಥಿನಿಯ ಮೇಲೆ ಹಲ್ಲೆ ಮಾಡಿ ಪರಾರಿಯಾದ ಕಿಡಿಗೇಡಿ

ಕಾನೂನು ರೀತಿಯಲ್ಲಿ ಅಂತರ್ ಧರ್ಮದ ವಿವಾಹ ನೋಂದಣಿಗೆ ಆಗ್ರಹಿಸಿ ಮನವಿ ಸಲ್ಲಿಕೆ

About The Author