Saturday, July 27, 2024

Latest Posts

ಬೀಜಗೊಬ್ಬರ ನೀಡಲು ಜಿಲ್ಲಾಡಳಿತ ಸಜ್ಜಾಗಿದೆ, ರೈತರು ಸದುಪಯೋಗಪಡಿಸಿಕೊಳ್ಳಬೇಕು: ಡಿಸಿ ದಿವ್ಯಪ್ರಭು

- Advertisement -

Dharwad News: ಧಾರವಾಡ: ಧಾರವಾಡ ಜಿಲ್ಲಾಧಿಕಾರಿ ದಿವ್ಯಪ್ರಭು ಪತ್ರಿಕಾಗೋಷ್ಠಿ ನಡೆಸಿದ್ದು, ಮಳೆಯ ಬಗ್ಗೆ ಮಾತನಾಡಿದ್ದಾರೆ.

ಕಳೆದ ಒಂದು ವಾರದಲ್ಲಿ ಮಳೆ ಹೆಚ್ಚಳವಾಗಿದೆ. ಮೇ 16ರಿಂದ ಮೇ 22ರವೆಗೆ ವಾಡಿಕೆಯಷ್ಟು 16 mm ಮಳೆ ಆಗಬೇಕಿತ್ತು. ಆದರೆ ಒಂದು ವಾರದಲ್ಲಿ47.3 mm ಮಳೆಯಾಗಿದೆ. ಈ ಹಿನ್ನಲೆಯಲ್ಲಿ ಕುಡಿಯುವ ನೀರಿನ ಸಮಸ್ಯವಿಲ್ಲ, ಜಿಲ್ಲೆಯಲ್ಲಿ 8 ತಾಲೂಕುಗಳಲ್ಲಿ 4 ತಾಲೂಕಿನಲ್ಲಿ ನೀರನ್ನ ಜಿಲ್ಲಾಡಳಿತದಿಂದ ಕೊಡಲಾಗುತ್ತಿದೆ. 52 ಗ್ರಾಮಗಳಲ್ಲಿ 81 ಬೋರವೆಲ್ ಗಳ ಮುಖಾಂತರ ನೀರು ಕೊಡಲಾಗುತ್ತಿದೆ. ಒಂದು ಗ್ರಾಮದಲ್ಲಿ ಟ‌್ಯಾಂಕರ್ ಮುಖಾಂತರ ನೀರು ಕೊಡಲಾಗುತ್ತದೆ. ಸಿಎಂ ಮುಂಗಾರು, ಪ್ರವಾಹದ ಬಗ್ಗೆ ಸೂಚನೆ ಕೊಟ್ಟಿದ್ದಾರೆ ಎಂದರು.

ಕೃಷಿ ಇಲಾಖೆ ತೋಟಗಾರಿಕೆ ಇಲಾಖೆ ಬೀಜಗೊಬ್ಬರಗಳನ್ನ ನೀಡಲು ಸಕಲ ಸಿದ್ದವಾಗಿದೆ. ಜಿಲ್ಲೆಯಲ್ಲಿ ಬಿತ್ತನೆಗೆ ಸಜ್ಜಾದ 2,70,840 ಹೆಕ್ಟೇರ್ ನಷ್ಟು ಗುರಿ ಇದೆ. 20,681 ಕ್ವಿಂಟಲ್ ಬೀಜ ಸದ್ಯ ಜಿಲ್ಲೆಯಲ್ಲಿ ಸ್ಟಾಕ್ ಇದೆ. ಬೇಡಿಕೆಗಿಂತ ಹೆಚ್ಚು ಬಿತ್ತನೆ ಬೀಜಗಳು ಸ್ಟಾಕ್ ಇದೆ ಜಿಲ್ಲೆಯಲ್ಲಿ, 31 ರೈತ ಸಂಪರ್ಕ ಕೇಂದ್ರ ದಲ್ಲಿ ಬೀಜ ವಿತರಣೆ ಮಾಡಲು ಜಿಲ್ಲಾಡಳಿತ ಸಜ್ಜಾಗಿದೆ. ರೈತರು ಸದುಪಯೋಗ ಪಡಿಸಿಕ್ಕೊಳ್ಳಬೇಕು ಎಂದು ಡಿಸಿ ಮನವಿ ಮಾಡಿದ್ದಾರೆ.

ಎಲ್ಲಿಯವರೆಗೆ ರೈತರಿಗೆ ಬೀಜ ಅವಶ್ಯಕತೆ ಇದೆ ಅಲ್ಲಿಯವರೆಗೆ ಬೀಜ ವಿತರಣೆ ಮಾಡಲಾಗುವುದು. 56,843 ಮೆಟ್ರಿಕ್ ಟನ್ ಗಳಷ್ಟು ಗೊಬ್ಬರದ ಅವಶ್ಯಕತೆ ಇದೆ. 33,240 ಮೆಟ್ರಿಕ್ ಟನ್ ಗೊಬ್ಬರ ಸ್ಟಾಕ್ ಇದೆ. ಡಿಎಪಿ, ಯೂರಿಯಾ, ಗೊಬ್ಬರಗಳು ಸ್ಟಾಕ್ ಇವೆ. ಎಲ್ಲ ರೈತರು ಮುಂಗಾರು ಹಂಗಾಮಿಗೆ ಎಲ್ಲರೂ ಎಲ್ಲರೂ ಉಪಯೋಗ ಮಾಡಿಕ್ಕೊಳ್ಳಬೇಕು ಎಂದು ಡಿಸಿ ದಿವ್ಯಪ್ರಭು ಹೇಳಿದ್ದಾರೆ.

ಮೇಲ್ಮನೆ ಚುನಾವಣೆ: ಜವರಾಯಿಗೌಡರ ಪರ ಜೆಡಿಎಸ್ ವರಿಷ್ಠರ ಒಲವು..?

ನಟಿ ಆಲಿಯಾ ಭಟ್‌ ವಿರುದ್ಧ ರೊಚ್ಚಿಗೆದ್ದ ನೆಟ್ಟಿಗರು: ಭಾರತ ಬಿಟ್ಟು ತೊಲಗು ಎಂದು ಆಕ್ರೋಶ

ಮಗುವಿನ ಲಿಂಗ ಪತ್ತೆಯ ಖುಷಿಗೆ ಪಾರ್ಟಿ ಆಚರಿಸಿದ ಯೂಟ್ಯೂಬರ್‌ಗೆ ಆರೋಗ್ಯ ಇಲಾಖೆಯಿಂದ ನೊಟೀಸ್

- Advertisement -

Latest Posts

Don't Miss