ನಿನ್ನೆ ರೆಬೆಲ್ ಸ್ಟಾರ್ ಅಂಬರೀಶ್ ಅವರ 70ನೇ ಹುಟ್ಟುಹಬ್ಬಕ್ಕೆ ಅವರ ಸಮಾಧಿಯ ಬಳಿ ಹಲವು ಸಾಮಾಜಿಕ ಕಾರ್ಯಗಳು ನಡೆದಿದೆ. ಅಷ್ಟೇ ಅಲ್ಲದೆ ಅವರ ಮನೆಯಲ್ಲಿಯೂ ಕೂಡ ಕುಟುಂಬ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಇದೇ ಸಂದರ್ಭದಲ್ಲಿ ಅಂಬಿ ಪುತ್ರ ಅಭಿಷೇಕ್ ಅಂಬರೀಷ್ ಅವರ ಎರಡು ಸಿನಿಮಾಗಳು ಅಧಿಕೃತವಾಗಿ ಅನೌನ್ಸ್ ಆಗಿದೆ.
ಒಂದು ಸಿನಿಮಾವನ್ನು ನಿರ್ದೇಶಕ ಕೃಷ್ಣ ರವರು ನಿರ್ದೇಶನ ಮಾಡುತ್ತಿದ್ದಾರೆ. ಮತ್ತೊಂದು ಸಿನಿಮಾವನ್ನು ನಿರ್ದೇಶಕ ಮಹೇಶ್ ಕುಮಾರ್ ಮಾಡುತ್ತಿದ್ದು, ಇದು ಅವರ ಮೂರನೇ ಸಿನಿಮಾ. ಈ ಸಿನಿಮಾದಲ್ಲಿ ಅಭಿಷೇಕ್ ಅಂಬರೀಶ್ ಕಾಣಿಸಿಕೊಳ್ಳುತ್ತಿದ್ದು, ಅದರ ಫಸ್ಟ್ ಲುಕ್ ಅನ್ನು ಬಿಡುಗಡೆ ಮಾಡಿದ್ದಾರೆ.
ಇನ್ನು ಈ ಸಿನಿಮಾ ಬಗ್ಗೆ ಮಾತನಾಡಿರುವ ನಿರ್ದೇಶಕ ಮಹೇಶ್ ಕುಮಾರ್ ‘ಇದೊಂದು ಮಾಸ್ ಓರಿಯೆಂಟೆಡ್ ಕಥೆ. ನನ್ನದು ಭಿನ್ನ ಜಾನರ್ ಆಗಿರುತ್ತದೆ. ಈ ಸಿನಿಮಾ ಆ್ಯಕ್ಷನ್ ಥ್ರಿಲ್ಲರ್ ಆಗಿದ್ದು, ಇದರಲ್ಲಿ ದಂಗೆಯ ಕಥೆ ಬರುತ್ತದೆ. ಅಭಿ ಪಾತ್ರ ಸಂಪೂರ್ಣವಾಗಿ ವಾರಿಯರ್‌ನಂತೆ ಇರುತ್ತದೆ. ಇದರ ಅರ್ಥ ಅವರು ಸೈನಿಕರಲ್ಲ, ಆ ಪಾತ್ರದ ವಿವರಗಳು ಹಾಗಿರುತ್ತದೆ ಅಷ್ಟೇ. ದಂಗೆ, ಹೋರಾಟ ಇರುವುದರಿಂದ ಕೆಸರು ಮತ್ತು ರಕ್ತ ಅವರ ಮುಖಕ್ಕೆ ಅಂಟಿಕೊಂಡಂತೆ ಇರುವ ಫಸ್ಟ್ ಲುಕ್ ಅನ್ನು ರಿವೀಲ್ ಮಾಡಿದ್ದೇವೆ. ಅವರ ಇಡೀ ಪಾತ್ರ ಇದೇ ರೀತಿಯ ಮಾಸ್ ಅಪೀಲ್‌ನಲ್ಲಿರುತ್ತದೆ’ ಎಂದು ತಿಳಿಸಿದ್ದಾರೆ.
ಇನ್ನು ಕನ್ನಡ ಚಿತ್ರರಂಗದ ಬ್ಯುಸಿ ನಟರ ಸಾಲಿಗೆ ಅಭಿಷೇಕ್ ಅಂಬರೀಷ್ ಕೂಡ ಸೇರ್ಪಡೆಯಾಗುತ್ತಿದ್ದಾರೆ. ಮತ್ತು ಇವರ ಸಿನಿಮಾ ರಿಲೀಸ್ ಗಾಗಿ ಅಭಿಮಾನಿಗಳು ಕಾಡು ಕುಳಿತಿದ್ದಾರೆ.
ಪ್ರಕೃತಿ ಪ್ರಭಾಕರ್, ಕರ್ನಾಟಕ ಟಿವಿ, ಸಿನಿಮಾ ಬ್ಯುರೋ