Movie News: ಬೆಂಗಳೂರು: ಇಂದು ಅಭಿಷೇಕ್ ಅಂಬರೀಷ್ ಮತ್ತು ಅವಿವಾ ಬಿದ್ದಪ್ಪ ಆರತಕ್ಷತೆ ಕಾರ್ಯಕ್ರಮ ನಡೆಯುತ್ತಿದ್ದು, ಹಲವು ಗಣ್ಯರು ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ.
ಇಂಡಿಯನ್ ಕ್ರಿಸ್ಟಲ್ ಶಾಗ್ಲಿಯರ್ ಡಿಸೈನ್ ನಲ್ಲಿ ಸ್ಟೇಜ್ ನಿರ್ಮಾಣವಾಗಿದ್ದು, 300 ಶಾಗ್ಲೀಯರ್ಸ್.. ಜೊತೆಗೆ 72 ಅಡಿ ಅಗಲ 32 ಉದ್ದದ ಶಾಗ್ಲಿಯರ್ ಡಿಸೈನ್ ಸ್ಟೇಜ್ ನಿರ್ಮಿಸಲಾಗಿದೆ. ಭಾರತದಲ್ಲೇ ಪ್ರಥಮ ಬಾರಿಗೆ ಈ ರೀತಿ ಸ್ಟೇಜ್ ನಿರ್ಮಿಸಲಾಗಿದ್ದು, ದೆಹಲಿಯ ಮೊರಾದಾಬಾದ್ನಿಂದ ಇವನ್ನೆಲ್ಲ ತರಿಸಲಾಗಿದೆ.
ಇನ್ನು ಇಷ್ಟು ಗ್ರ್ಯಾಂಡ್ ಸ್ಟೇಜ್ ಡಿಸೈನ್ ಮಾಡಿರೋದು ಯಾರು ಅಂದ್ರೆ, ವೇಡಿಂಗ್ಸ್ ಬೈ ಧ್ರುವ, ಸೆಲಬ್ರೆಟಿ ವೆಡಿಂರ್ಗ್ಸ್. ಇವರು, ಶಿವರಾಜ್ ಕುಮಾರ್ ಮಗಳ ಹಾಗೂ ಯಶ್, ಜನರ್ದಾನ ರೆಡ್ಡಿ ಮಗಳ , ಯದುವೀರ್ ಮಹರಾಜರು ಸೇರಿದಂತೆ ಎಲ್ಲಾ ಗಣ್ಯರ ಮದುವೆ ಡಿಸೈನ್ ಮಾಡಿದ್ದಾರೆ.
ಅಭಿಷೇಕ್ ಅರತಕ್ಷತೆಗೆ 3 ಸಾವಿರ ಜನಕ್ಕೆ ಆಸನದ ವ್ಯವಸ್ಥೆ ಮಾಡಲಾಗಿದೆ. 25 ಸಾವಿರ ಜನಕ್ಕೆ ಊಟದ ವ್ಯವಸ್ಥೆ ಮಾಡಲಾಗಿದೆ. ವಿವಿಐಪಿ ಮತ್ತು ವಿಐಪಿ ಅವರಿಗೆ ಸಪರೇಟ್ ಆಗಿ ಊಟದ ವ್ಯವಸ್ಥೆ ಮಾಡಲಾಗಿದ್ದು, ಪರ ಭಾಷಾ ನಟ ಸೂರ್ಯ, ಕಾಶ್ಮೀರ ಮುಖ್ಯ ಮಂತ್ರಿ ಫಾರುಖ್ ಅಬ್ದುಲಾ, ಚಿರಂಜೀವಿ ಕುಟುಂಬ, ಗುಲಾಮ್ ನಬಿ ಆಜಾದ್ ಹಿರಿಯ ಕಾಂಗ್ರೆಸ್ ಮುಖಂಡ, ಶತ್ರು ಜ್ಞಾನ್ನ ಸಿನ್ಹಾ, ಸಿ.ಎಂ ಸಿದ್ದರಾಮಯ್ಯ ಸೇರಿದಂತೆ ಅನೇಕರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಅಭಿಷೇಕ್ ಅಂಬರೀಷ್- ಅವಿವಾ ಆರತಕ್ಷತೆ: ಭಾರತದಲ್ಲೇ ಮೊದಲ ಬಾರಿ ಶಾಗ್ಲಿಯರ್ ಡಿಸೈನ್ ಸ್ಟೇಜ್ ನಿರ್ಮಾಣ
ಅಂಬಿ ಸಮಾಧಿಯ ಮೇಲೆ ಮಗನ ಮದುವೆಯ ಆಮಂತ್ರಣ ಪತ್ರಿಕೆ ಇಟ್ಟು ಪೂಜೆ ಸಲ್ಲಿಸಿದ ಸುಮಲತಾ..