ಧ್ರುವ ನಟನೆಯ ಕೆಡಿ ಸಿನಿಮಾದಲ್ಲಿ ಸತ್ಯವತಿಯಾಗಿ ಶಿಲ್ಪಾ ಶೆಟ್ಟಿ ನಟನೆ

ಸ್ಯಾಂಡಲ್ ವುಡ್ನ ಸ್ಟಾರ್ ನಿರ್ದೆಶಕ  ಪ್ರೇಮ್ ಮತ್ತು ಆಕ್ಷನ್ ಪ್ರಿನ್ಸ ಧ್ರುವ ಸರ್ಜಾ ಕಾಂಬಿನೇಷನ್ ನಲ್ಲಿ ಬಾರಿ ದೊಡ್ಡ ಮಟ್ಟದಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾ ‘ಕೆಡಿ’

ಇನ್ನು ಈ ಸಿನಿಮಾಗೆ ಕರಾವಳಿಯ ಕುವರಿ ಶಿಲ್ಪಾಶೆಟ್ಟಿ ಕನ್ನಡದ ಕ್ರೇಜಿಸ್ಟಾರ್ ರವಿಚಂದ್ರನ್ ನಟನೆಯ ಪ್ರಿತ್ಸಾದ್ ತಪ್ಪಾ, ಉಪೇಂದ್ರ ನಟನೆಯ ಆಟೋ ಶಂಕರ್ ಸಿನಿಮಾದಲ್ಲಿ ನಟಿಸಿರುವ ನಟಿ ಬಾಲಿವುಡ್ ನಲ್ಲಿ ನೆಲೆ ನಿಂತು ಸ್ಟಾರ್ ನಟಿಯಾಗಿ ಮೆರೆದಿರುವ ಶಿಲ್ಪಾಶೆಟ್ಟಿ ಈ ಕನ್ನಡದಲ್ಲಿ ತಮ್ಮ ಮೂರನೆ ಚಿತ್ರವಾದ ಧ್ರುವ  ನಟನೆಯ ಕೆಡಿ ಸಿನಿಮಾದಲ್ಲಿ ಸತ್ಯವತಿಯಾಗಿ ಕಾಣಲಿದ್ದಾರೆ ಈ ಯುಗಾದಿಯಂದು ಅವರ ಶಿಲ್ಪಾ ಶೆಟ್ಟಿ ಪಾತ್ರವನ್ನು ಅನಾವರಣಗೊಳಿಸಿದ್ದಾರೆ. ಈ ಸಿಹಿ ಸುದ್ದಿ ಹಂಚಿಕೊಳ್ಳುವುದರ ಮೂಲಕ ಯುಗಾದಿ ಹಬ್ಬವನ್ನು ಚಿತ್ರತಂಡ ಆಚರಿಸಿದ್ದಾರೆ. ಇದು ಶಿಲ್ಪಾ ಶೆಟ್ಟಿ ಕನ್ನಡದಲ್ಲಿ ನಟಿಸುತ್ತಿರುವ ಮೂರನೆ ಸಿನಿಮಾವಾಗಿದೆ.

ಇನ್ನು ಈ ಸಿನಿಮಾದಲ್ಲಿ ಬಾಲಿವುಡ್ ನ ಇನ್ನೊಬ್ಬ ಸ್ಟಾರ್ ನಟ ನಟಿಸಲಿದ್ದಾರೆ. ಬಾಲಿವುಡ್ ನ ಸಂಜಯದತ್ ಈಗಾಗಲೆ ಕೆಜಿಎಫ್ 2 ಸಿನಿಮಾದಲ್ಲಿ ನಟಿಸಿದ್ದೂ ಇದು ಅವರ ಕನ್ನಡದ ಎರಡನೆ ಸಿನಿಮಾವಾಗಲಿದೆ.

ಸ್ಯಾಂಡಲ್‌ವುಡ್ ನಟ ನಟಿಯರು ಯುಗಾದಿ ಹಬ್ಬವನ್ನ ಸೆಲೆಬ್ರೇಟ್ ಮಾಡಿದ್ದು ಹೀಗೆ..

ಜಗ್ಗೇಶ್ ನಟನೆಯ “ರಾಘವೇಂದ್ರ ಸ್ಟೋರ್” ಚಿತ್ರಮಂದಿರಕ್ಕೆ ಏಪ್ರಿಲ್ 28 ರಂದು

ರಾಯಚೂರು ಜಿಲ್ಲಾ ಚುನಾವಣಾ ರಾಯಭಾರಿಯಾಗಿ ರಾಜಮೌಳಿ ಆಯ್ಕೆ

 

About The Author