ಮುಂಬೈ: ನಟ, ಮಾಡೆಲ್ ಆದಿತ್ಯ ಸಿಂಗ್ ರಜಪೂತ್ ತಾವು ವಾಸಿಸುವ ಮನೆಯ ಬಾತ್‌ರೂಮ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮುಂಬೈನ ಅಂಧೇರಿಯಲ್ಲಿರುವ ತಮ್ಮ ನಿವಾಸದಲ್ಲಿ, ಪಾರ್ಟಿ ಮಾಡಿದ ನಂತರ, ವಾಶ್ ರೂಮ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆಂದು ಹೇಳಲಾಗಿದೆ.
ಕಳೆದ ರಾತ್ರಿ ಸ್ನೇಹಿತರೊಂದಿಗೆ ಪಾರ್ಟಿ ಮಾಡಿರುವ ಆದಿತ್ಯ, ಅತೀಯಾಗಿ ಡ್ರಗ್ಸ್ ಸೇವನೆ ಮಾಡಿದ್ದಾರೆ. ಇದರಿಂದ ಮತಿ ತಪ್ಪಿ ವಾಶ್‌ರೂಮ್‌ನಲ್ಲಿ ಬಿದ್ದಿದ್ದಾರೆ. ಇವರನ್ನು ಕಂಡ, ಸ್ನೇಹಿತರು, ಸೆಕ್ಯೂರಿಟಿ ಗಾರ್ಡ್, ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅದಾಗಲೇ, ಅವರು ಸಾವನ್ನಪ್ಪಿದ್ದಾರೆಂದು ಹೇಳಲಾಗಿದೆ.
ಮಾಡೆಲ್ ಆಗಿದ್ದ ಆದಿತ್ಯ, ಜಾಹೀರಾತಿನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರು. ಮೈನೇ ಗಾಂಧಿ ಕೋ ನಹಿ ಮಾರಾ, ಕ್ರಾಂತಿವೀರ್ ಸೇರಿ, ಹಲವು ಸಿನಿಮಾಗಳಲ್ಲೂ ಆದಿತ್ಯ ನಟಿಸಿದ್ದರು. ಸ್ಪ್ಲಿಟ್ ವಿಲ್ಲಾ, ಆವಾಜ್ ಸೀಸನ್ 9, ಬ್ಯಾಡ್ ಬಾಯ್ ಸೀಸನ್ 4, ಲವ್, ಆಶಿಕಿ, ಕೊಡ್ ರೆಡ್, ಸೇರಿ ಹಲವು ರಿಯಾಲಿಟಿ ಶೋನಲ್ಲಿ ಆದಿತ್ಯ ಭಾಗಿಯಾಗಿದ್ದರು.
‘ರಕ್ತಾಕ್ಷ’ ಸಿನಿಮಾ ಮೂಲಕ ಬೆಳ್ಳಿಪರದೆಗೆ ಎಂಟ್ರಿ ಕೊಟ್ಟ ಬಿಸಿಲೂರಿನ ಪ್ರತಿಭೆ
’ಡಾಲರ್ಸ್ ಪೇಟೆ’ ಸಿನಿಮಾದ ಟೀಸರ್ ರಿಲೀಸ್…ದರೋಡೆ ಹಿಂದಿನ ರೋಚಕ ಕಥೆ ಇದು