ಸ್ಯಾಂಡಲ್‌ವುಡ್‌ನ ಹಿರಿಯ ನಟ ದೊಡ್ಡಣ್ಣ, ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ತಮ್ಮ ಸಿನಿ ಜರ್ನಿ ಬಗ್ಗೆ ಹೇಳಿಕೊಂಡಿದ್ದಾರೆ. ತಾವು ಶಂಕರ್‌ನಾಗ್, ಅಣ್ಣಾವ್ರು, ಮತ್ತು ಅಂಬರೀಷ್, ವಿಷ್ಣುವರ್ಧನ್ ಎಲ್ಲಾ ಹೇಗಿದ್ರು ಅನ್ನೋ ಬಗ್ಗೆ ಮೆಲುಕು ಹಾಕಿದ್ದಾರೆ.
ದೊಡ್ಡಣ್ಣ, ಡಾ. ವಿಷ್ಣುವರ್ಧನ್ ಬಗ್ಗೆ ಮಾತನಾಡಿದ್ದು, ಅವರೊಬ್ಬ ಶಿಸ್ತಿನ ಸಿಪಾಯಿ. ಅವರಿಗೆ ಒಂಚೂರು ಅಹಂಕಾರವಿರಲಿಲ್ಲ. ರಾತ್ರಿ ಕರೆಕ್ಟ್ 10 ಗಂಟೆಗೆ ಹೋಗಿ ಮಲಗಿದ್ರೆ, ಬೆಳಿಗ್ಗೆ 4 ಗಂಟೆಗೆ ಎದ್ದು ರೆಡಿಯಾಗಿ 7.30ಕ್ಕೆ ಸೆಟ್‌ನಲ್ಲಿ ಇರ್ತಿದ್ರೂ. ಕಾಲ್‌ಶೀಟ್ 10 ಗಂಟೆಗೆ ಇದ್ರೂ, 7.30ಕ್ಕೆ ಸೆಟ್‌ನಲ್ಲಿ ವಿಷ್ಣುದಾದಾ ಹಾಜರಿರ್ತಿದ್ರು. ಯಾರ ಇರ್ತಾರೆ ಈಗಿನ ಕಾಲದಲ್ಲಿ ಅಂತಾ ಹೆಮ್ಮೆಯಿಂದ ಪ್ರಶ್ನಿಸಿದ್ದಾರೆ ಹಿರಿಯ ನಟ ದೊಡ್ಡಣ್ಣ.
ಇನ್ನು ಶಂಕರ್‌ನಾಗ್ ಅಂದ್ರೆ ಕ್ರಿಯಾಶೀಲತೆ. ಅವನು ಸುಮ್ಮನೆ ಟೈಂ ವೇಸ್ಟ್ ಮಾಡಿದ್ದನ್ನ ನಾನು ನೋಡೇ ಇಲ್ಲ. ಈಗ ನಾವೇನು ಮೆಟ್ರೋ ಬಳಸುತ್ತಿದ್ದೇವೆ. ಆ ಬಗ್ಗೆ ಶಂಕರ್‌ನಾಗ್ ಆಗಲೇ ನನಗೆ ಹೇಳಿದ್ದ. ಆದ್ರೆ ನಮಗೆ ಅಷ್ಟೊಂದು ಮುಂದಾಲೋಚನೆ ಇರಲಿಲ್ಲ. ಅಲ್ಲದೇ, ವಿಧಾನ ಸೌಧದ ಸುತ್ತಮುತ್ತಲ ಇಷ್ಟು ಪ್ರದೇಶಗಳು ರಾಶಿ ರಾಶಿ ಚಿನ್ನ ಅಡವಿಟ್ಟು ಕೊಂಡುಕೊಳ್ಳುವಷ್ಟು ಬೆಲೆ ಬಾಳುತ್ತದೆ ಅಂತಾ ಶಂಕರ್‌ನಾಗ್ ಆಗಲೇ ಭವಿಷ್ಯ ಹೇಳಿದ್ದ ಅಂತಾರೆ ನಟ ದೊಡ್ಡಣ್ಣ.
ಅಲ್ಲದೇ, ಶಂಕರ್‌ನಾಗ್ ಮತ್ತು ಅಂಬರೀಶ್ ನನಗೆ ಸಾಲ ಕೊಡದಿದ್ದಲ್ಲಿ ನಾನು ಮನೆ ಕಟ್ಟಲು ಸಾಧ್ಯವಾಗುತ್ತಿರಲಿಲ್ಲ ಅಂತಾ ನಟ ದೊಡ್ಡಣ್ಣ ನೆನಪಿಸಿಕೊಂಡಿದ್ದಾರೆ. ಅದೇ ಸಾಲವನ್ನು ಹಿಂದಿರರುಗಿಸಲು ಹೋದಾಗ, ತೊಕೊಂಡಿದ್ದ ಸಾಲ ಹಿಂದಿರುಗಿಸುವಷ್ಟು ಬೆಳೆದುಬಿಟ್ಟಿದ್ದಿಯಲ್ಲೋ ಅಂತಾ ಇಬ್ಬರೂ ನಟರು ನನ್ನ ಬೆನ್ನುತಟ್ಟಿದ್ದರು ಅಂತಾ ದೊಡ್ಡಣ್ಣ ಖುಷಿಯ ಕ್ಷಣವನ್ನು ಮೆಲುಕು ಹಾಕಿ, ಧನ್ಯವಾದ ತಿಳಿಸಿದ್ದಾರೆ.
ಅಣ್ಣಾವ್ರು ಕೂಡಾ ತುಂಬಾ ಸರಳ ವ್ಯಕ್ತಿ. ಯಾವುದೇ ಪಾತ್ರಕ್ಕೆ ಸೆಟ್ ಆಗುವ ಅವರು, ಭಾರತದಲ್ಲೇ ಓರ್ವ ಅತ್ಯುನ್ನತ ನಟ ಎನ್ನಿಸಿಕೊಂಡವರು. ಅವರಿಂದ ನಾವು ಸರಳತೆ ಕಲಿತಿದ್ದೇವೆ. ಅವ್ರು ಅಹಂಕಾರವನ್ನು 20 ಅಡಿ ದೂರದಲ್ಲಿಟ್ಟಿದ್ರು. ಇಡೀ ದೇಶವೇ ಗುರುತಿಸಲ್ಪಟ್ಟ ಮೇರುನಟ ಅಣ್ಣಾವ್ರು ಆಗಿದ್ದರೂ ಕೂಡ, ಆ ಬಗ್ಗೆ ಅವರೆಂದೂ ಅಹಂಕಾರಪಟ್ಟವರಲ್ಲ. ನಮ್ಮನ್ನೆಲ್ಲ ತಮ್ಮ ಆಪ್ತರಂತೆ ಕಂಡಿದ್ದ ಅಣ್ಣಾವ್ರು. ಇಂಥ ಸ್ನೇಹಿತರು ಸಿಗಬೇಕಂದ್ರೆ ಪುಣ್ಯ ಮಾಡಿರ್ಬೇಕು ಅಂತಾ ಹೇಳ್ತಿದ್ರು ಎಂದದು ದೊಡ್ಡಣ್ಣ ಡಾ. ರಾಜ್ ಅವರನ್ನು ನೆನೆದಿದ್ದಾರೆ.