Saturday, May 10, 2025

Latest Posts

‘ತೂಗುದೀಪ ಅಣ್ಣಂಗೆ ತುಂಬಾ ಕೋಪ, ಅದಕ್ಕಿಂತ ಹೆಚ್ಚು ಪ್ರೀತಿ, ಕಾಳಜಿ’

- Advertisement -

ಅದಾದ

ಹಿರಿಯ ನಟ ದೊಡ್ಡಣ್ಣ ಕರ್ನಾಟಕ ಟಿವಿಯೊಂದಿಗೆ ಮಾತನಾಡಿದ್ದು, ತಮ್ಮ ಸಿನಿ ಜರ್ನಿ ಬಗ್ಗೆ ಮಾತನಾಡಿದ್ದಾರೆ. ತಾನು ನಟನಾಗಿ ಸಿನಿರಂಗಕ್ಕೆ ಪ್ರವೇಶಿಸಬೇಕಿತ್ತು, ಆದ್ರೆ ಖಳನಟನಾಗಿ ಪ್ರವೇಶಿಸಿದೆ. ಯಾಕಂದ್ರೆ ನಾವು ಅಂದುಕೊಂಡಿದ್ದೆಲ್ಲ ಜೀವನದಲ್ಲಿ ನಡಿಯೋದಿಲ್ಲ ಅಂತಾ ತಮ್ಮ ಅನುಭವವನ್ನು ಹೇಳಿಕೊಂಡಿದ್ದಾರೆ.

ನಾನು 10ನೇ ಕ್ಲಾಸ್‌ನಲ್ಲಿ ಫೇಲಾದಾಗ ನನ್ನ ಅಮ್ಮ, ಎಲ್ಲರೂ ಸರ್ಕಾರಿ ನೌಕರಿಗೆ ಹೋದ್ರೆ, ಮನೆಯಲ್ಲಿರುವ ದನ ಕರು ನೋಡಿಕೊಳ್ಳುವವರು ಯಾರು..? ಇರಲಿ ಬಿಡು ದೊಡ್ಡಣ್ಣ ನೋಡಿಕೊಳ್ತಾನೆ ಅಂತಾ ಹೇಳಿದ್ರು.  ಅದಾದ ಬಳಿಕ ನನಗೆ ಕೆಲಸ ಸಿಕ್ಕಿತು, ನಾಟಕದಲ್ಲಿ ಯಾವ ಪಾತ್ರಕ್ಕೂ ಸೈ ಅನ್ನುವಷ್ಟರ ಮಟ್ಟಿಗೆ ದೇವರು ಬೆಳೆಸಿದ. ಬೆಳಿಗ್ಗೆ ಎದ್ದು ನಾನು ನನ್ನ ಗುರುಗಳಿಗೆ ಮೊದಲು ಕೈ ಮುಗಿಯುತ್ತೇನೆ. ತಾಯಿ ಸರಸ್ವತಿಗೆ ಧನ್ಯವಾದ ಹೇಳುತ್ತೇನೆಂದು ಹಿರಿಯ ನಟ ದೊಡ್ಡಣ್ಣ ಹೇಳಿದ್ದಾರೆ.

ಇನ್ನು ಖಳನಟ ತೂಗುದೀಪ್ ಶ್ರೀನಿವಾಸ್‌ ಬಗ್ಗೆ ನಟ ದೊಡ್ಡಣ್ಣ ಮಾತನಾಡಿದ್ದು, ಅವನಿಗೆ ಯದ್ವಾ ತದ್ವಾ ಕೋಪ. ಆದ್ರೆ ಅವ್ರು ತುಂಬಾ ಒಳ್ಳೆಯವರು. ಒಮ್ಮೆ ನಾನು ಶೂಟಿಂಗ್ ಹೋಗ್ಬೇಕಾದ್ರೆ ಲೇಟ್ ಆಯ್ತು. ಆಗ ಅವರು ನನಗೆ ಒಂದು ಏಟು ಹೊಡೆದಿದ್ರು. ನಾನೇನು ಮಾತನಾಡದೇ, ಆ್ಯಕ್ಟ್ ಮಾಡಿದೆ. ಸೀನ್ ತುಂಬಾ ಚೆನ್ನಾಗಿ ಬಂತು. ಆಗ ತೂಗಣ್ಣ, ನೀನು ಆ್ಯಕ್ಟ್ ಮಾಡಿದ ಸೀನ್ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಅಂದ್ರು. ಆಗ ನಾನು ನೀನು ಹೊಡೆದಿದ್ದಕ್ಕೆ ಅಷ್ಟು ಚೆನ್ನಾಗಿ ಮೂಡಿ ಬಂತು ಅಂದೆ. ನಂತರ ಇಬ್ಬರೂ ಊಟಕ್ಕೆ ಹೋದ್ವಿ. ಹೀಗೆ ಕೋಪ ಇದ್ರೂ ಅದರ ದುಪ್ಪಟ್ಟು ಪ್ರೀತಿ ಇತ್ತು ಅಂತಾರೆ ದೊಡ್ಡಣ್ಣ.

- Advertisement -

Latest Posts

Don't Miss