ನಟ ಗೌರವ್ ಶೆಟ್ಟಿ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ಯಾವ ಯಾವ ನಟರ ಬಳಿ, ಯಾವ ಯಾವ ಕ್ವಾಲಿಟಿಯನ್ನ ಕದಿಯುತ್ತಾರೆ ಅಂತಾ ಹೇಳಿದ್ದಾರೆ. ಅಲ್ಲದೇ ಕೆಲ ವಿಷಗಳ ಬಗ್ಗೆಯೂ ಮಾತನಾಡಿದ್ದಾರೆ.
ಗೌರವ್ ಬೆಂಗಳೂರಿಗೆ ಬಂದ ಹೊಸತರಲ್ಲಿ ನದಿ ಬೆಟ್ಟಕೆ ಮೊದಲು ಹೋಗಿದ್ದಂತೆ. ಇನ್ನು ಸೆಕೆಂಡ್ ಇಯರ್ ಇಂಜಿನಿಯರಿಂಗ್‌ನಲ್ಲೇ ಸ್ಮೋಕ್ ಮಾಡೋಕ್ಕೆ ಕಲಿತಿದ್ದ ಗೌವರ್, ಅಪಘಾತವಾದ ಬಳಿಕ ಈ ಚಟವನ್ನ ಬಿಟ್ಟರಂತೆ. ಇನ್ನು ಕ್ರಶ್ ಬಗ್ಗೆ ಮಾತನಾಡಲು ನಾಚಿಕೊಂಡ ಗೌರವ್, ತುಂಬಾ ಜನ ಇದ್ದಾರೆ, ಅವರ ಹೆಸರೆಲ್ಲ ಹೇಳೋಕ್ಕೆ ಆಗಲ್ಲ ಅಂತಾ ಹೇಳಿದ್ರು.
ದರ್ಶನ್ ಅವರ ಉದಾರ ಸ್ವಭಾವವನ್ನ ಕದಿಯುತ್ತೇನೆ ಎಂದ ಗೌರವ್, ಅವರು ಎಡಗೈಯಲ್ಲಿ ಕೊಟ್ಟಿರುವುದನ್ನ, ಬಲಗೈಗೆ ಗೊತ್ತಾಗದಂತೆ ಇರುತ್ತಾರಲ್ಲ ಅದು ಇಷ್ಟ ಅಂತಾರೆ. ಅಲ್ಲದೇ ಶಿವಣ್ಣರಿಂದ ಸಿಂಪ್ಲಿಸಿಟಿ ಕದಿಯೋಕ್ಕೆ ಇಷ್ಟಪಡುವ ಗೌರವ್, ಪುನೀತ್ ಅವರನ್ನ ದೇವರ ಸ್ಥಾನದಲ್ಲಿ ಇರಿಸಿದ್ದಾರೆ.
ಇನ್ನು ಸುದೀಪ್ ಬಗ್ಗೆ ಮಾತನಾಡಿದ ಗೌರವ್, ಅವರ ನಟನೆ ತುಂಬಾ ಇಷ್ಟ. ಹಿರೋಯಿಂದ ವಿಲನ್ ತನಕ ಎಲ್ಲ ತನಕದ ಪಾತ್ರವನ್ನು ಮಾಡುವ ಸುದೀಪ್‌ರಿಂದ ನಟನೆ ಕದಿಯುತ್ತೇನೆ ಎಂದಿದ್ದಾರೆ ಗೌರವ್. ರಾಕಿ ಭಾಯ್ ಕಡೆಯಿಂದ ಏನು ಕದೀತಿರಿ ಅಂತಾ ಕೇಳಿದ್ದಕ್ಕೆ, ಅವರಿಂದ ನೇರನುಡಿಯನ್ನ ಕಲಿಯುತ್ತೇನೆ. ಅವರು ಹಿಂದೆ ಮುಂದೆ ನೋಡದೇ, ಮನಸ್ಸಲ್ಲಿರುವ ಮಾತನ್ನ ನೇರವಾಗಿ ಹೇಳುತ್ತಾರಲ್ಲ ಅದೇ ಇಷ್ಟವಾಗತ್ತೆ. ಅವರ ಕಾನ್ಫಿಡೆನ್ಸ್ ಇಷ್ಟ ಅಂತಾರೆ ಗೌರವ್.
ಶ್ರೀಮುರುಳಿಯಿಂದ ಮಾಸ್ ಸ್ಟೈಲ್, ಧ್ರುವ ಅವರ ಲೆಂತಿ ಡೈಲಾಗ್ ಹೇಳುವ ಸ್ಟೈಲ್, ಉಪ್ಪಿ ಸರ್ ಪ್ರಜಾಕೀಯ ಕಾನ್ಸೆಪ್ಟ್ ಕದಿತೀನಿ ಅಂತಾ ಹೇಳೋ ಗೌರವ್ ಅವರಿಗೆ ರಮ್ಯಾ ಫೇವರಿಟ್ ಹಿರೋಯಿನ್ ಅಂತೆ.